ಕೃತಿ ಲೋಕಾರ್ಪಣೆಗೊಳಿಸಿದ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಮಾತನಾಡಿ, ಧಾವಂತದ ಬದುಕಿನಲ್ಲಿ ಮನುಷ್ಯ ಸಂತೋಷದ ಹುಡುಕಾಟದಲ್ಲಿದ್ದಾನೆ. ಭೌತಿಕ ವಸ್ತುಗಳು ತಾತ್ಕಾಲಿಕ ಸುಖವನ್ನು ನೀಡುತ್ತವೆ. ಶಾಶ್ವತವಾದ ಆನಂದ ಆಧ್ಯಾತ್ಮಿಕ ಬದುಕಿನಲ್ಲಿದೆ ಎಂದರು.

ಗದಗ: ಆಧ್ಯಾತ್ಮಿಕ ಚಿಂತನೆಗಳು ಮನುಷ್ಯನನ್ನು ಉನ್ನತೀಕರಿಸಿ ಸತ್ಯದೆಡೆಗೆ ಸಾಗಲು ಪ್ರೇರೇಪಿಸುತ್ತವೆ ಎಂದು ಕವಿವಿ ವಿಶ್ರಾಂತ ಕುಲಸಚಿವ ಡಾ. ಜಿ.ಬಿ. ನಂದನ ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸದ್ಗುರು ಪ್ರಕಾಶನ ರಾಜೂರು ಹಾಗೂ ಬಸವೇಶ್ವರ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಜರುಗಿದ ರಾಮಾನಂದ ರಾಜೂರು ವಿರಚಿತ ಸದ್ಗುರುವಿನ ಬೆರಗಿನ ಬಯಲು ಕೃತಿ ಕುರಿತು ಮಾತನಾಡಿದರು.

ಬಸವಾದಿ ಶರಣರು ಅರಿತು, ಆಚರಿಸಿದ ಬಸವಧರ್ಮ ಸಕಲ ಜೀವಿಗಳಿಗೆ ಮಾದರಿಯಾಗಿದೆ. ಕೃತಿಕಾರರು ಅನುಭಾವದ ನುಡಿಗಳನ್ನು ವಚನಗಳನ್ನಾಗಿ, ತತ್ವಪದಗಳನ್ನಾಗಿ ರಚಿಸಿ ಈ ಕೃತಿಯಲ್ಲಿ ನೀಡಿದ್ದಾರೆ. ಆಧ್ಯಾತ್ಮಿಕ ಚಿಂತಕರಿಗೆ ಉತೃಷ್ಟವಾದ ಕೃತಿ ಇದಾಗಿದೆ ಎಂದರು. ಕೃತಿ ಲೋಕಾರ್ಪಣೆಗೊಳಿಸಿದ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಮಾತನಾಡಿ, ಧಾವಂತದ ಬದುಕಿನಲ್ಲಿ ಮನುಷ್ಯ ಸಂತೋಷದ ಹುಡುಕಾಟದಲ್ಲಿದ್ದಾನೆ. ಭೌತಿಕ ವಸ್ತುಗಳು ತಾತ್ಕಾಲಿಕ ಸುಖವನ್ನು ನೀಡುತ್ತವೆ. ಶಾಶ್ವತವಾದ ಆನಂದ ಆಧ್ಯಾತ್ಮಿಕ ಬದುಕಿನಲ್ಲಿದೆ. ಅಂತಹ ಬದುಕನ್ನು ಸಾಗಿಸುತ್ತಿರುವ ರಾಮಾನಂದ ರಾಜೂರ ಅವರು ಈ ಕೃತಿ ಮೂಲಕ ಮೂಲಕ ಉತೃಷ್ಟ ವಿಚಾರಗಳನ್ನು ಜನಮಾಸನಕ್ಕೆ ತಿಳಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.ಕೃತಿಕಾರ ರಾಮಾನಂದ ರಾಜೂರ, ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ವಿಶ್ರಾಂತ ಪ್ರಾಚಾರ್ಯ ಕೆ.ಆರ್. ಕುಲಕರ್ಣಿ ಮಾತನಾಡಿದರು. ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಮುತ್ತಪ್ಪ ಮೂರಾಬಟ್ಟಿ, ಡಾ. ಡಿ.ಎಚ್. ಕಡದಳ್ಳಿ ಮಾತನಾಡಿದರು. ಜಿ.ಬಿ. ಗುಡಿಮನಿ, ಜಿ.ಎನ್. ಕುರ್ತಕೋಟಿ, ಎಂ.ಬಿ. ದಳಪತಿ ಉಪಸ್ಥಿತರಿದ್ದರು.

ಡಾ. ಶಂಕರ ಬಿನ್ನಾಳ, ಪರಶುರಾಮ ದೊಡ್ಡಮನಿ, ಮಾರುತಿ ಬಿನ್ನಾಳ ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಡಾ. ವಿ.ವೈ. ನಾಗಮ್ಮನವರ ನಿರೂಪಿಸಿದರು. ಹನುಮಂತಪ್ಪ ದೊಡಮನಿ ಸ್ವಾಗತಿಸಿದರು. ಶಿಲ್ಪಾ ಮ್ಯಾಗೇರಿ ವಂದಿಸಿದರು. ಡಾ. ಈ.ಆರ್. ಲಗಳೂರ, ಅನ್ನದಾನಿ ಹಿರೇಮಠ, ಕಿಶೋರಬಾಬು ನಾಗರಕಟ್ಟಿ, ಡಿ.ಎಸ್. ಬಾಪುರಿ, ಸತೀಶ ಚನ್ನಪ್ಪಗೌಡ್ರ, ಅಮರೇಶ ರಾಂಪೂರ, ವೀರಪ್ಪ ದೊಡಮನಿ, ಬಿ.ಜಿ. ಗಿರಿತಿಮ್ಮಣ್ಣವರ, ಮಾರುತಿ ಬುರಡಿ, ಹೊನ್ನಪ್ಪ ತಳ್ಳಿಹಾಳ, ಮುತ್ತು ಮಾದರ, ಜಯನಗೌಡ ಪಾಟೀಲ, ಉಮಾ ಕಣವಿ, ರಾಜೇಶ್ವರಿ ಎಂ.ಡಿ.ಕೆ. ಸಿದ್ಧಪ್ಪ, ರಾಹುಲ್ ಗಿಡ್ನಂದಿ, ಸತೀಶರಾವ ಕುಲಕರ್ಣಿ, ವಿಶಾಲಕುಮಾರ ಪರದೇಶಿ, ಶಶಾಂಕ ಹಾದಿಮನಿ, ಡಾ. ರಮೇಶ ಬಿ.ಜಿ. ಸಂಜಯ ಬಾಗಮಾರ, ಶಿವಾನಂದ ಭಜಂತ್ರಿ, ಡಿ.ಬಿ. ಪೂಜಾರ, ಎಂ.ವೈ. ಹಳೆಮನಿ, ಅ.ದ. ಕಟ್ಟಿಮನಿ, ಸೈಯದ್ ಫಾರೂಕ್, ನಾಗಪ್ಪ ಮೊದಲಾದವರು ಉಪಸ್ಥಿತರಿದ್ದರು.