ಸ್ನೇಹ, ಸೌಹಾರ್ದತೆ ಮೂಡಿಸಲು ಕ್ರೀಡೆ ಅವಶ್ಯ

| Published : Aug 19 2025, 01:00 AM IST

ಸಾರಾಂಶ

ವಿಜಯಪುರ: ಸದಾ ಕೆಲಸ, ವ್ಯವಹಾರ, ವಹಿವಾಟುಗಳಲ್ಲಿ ತೊಡಗಿಕೊಂಡಿರುವ ಜನತೆಗೆ ಸ್ನೇಹ, ಸೌಹಾರ್ದತೆ ಹಾಗೂ ವಿಶ್ವಾಸ ಬೆಳೆಸಲು ಕ್ರೀಡೆಗಳು ಅವಶ್ಯಕವೆಂದು ಪುರಸಭಾ ಮಾಜಿ ಅಧ್ಯಕ್ಷ ಎಂ ಸತೀಶ್ ಕುಮಾರ್ ತಿಳಿಸಿದರು.

ವಿಜಯಪುರ: ಸದಾ ಕೆಲಸ, ವ್ಯವಹಾರ, ವಹಿವಾಟುಗಳಲ್ಲಿ ತೊಡಗಿಕೊಂಡಿರುವ ಜನತೆಗೆ ಸ್ನೇಹ, ಸೌಹಾರ್ದತೆ ಹಾಗೂ ವಿಶ್ವಾಸ ಬೆಳೆಸಲು ಕ್ರೀಡೆಗಳು ಅವಶ್ಯಕವೆಂದು ಪುರಸಭಾ ಮಾಜಿ ಅಧ್ಯಕ್ಷ ಎಂ ಸತೀಶ್ ಕುಮಾರ್ ತಿಳಿಸಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಅಯೋಧ್ಯಾನಗರ ಶಿವಾಚಾರ ವೈಶ್ಯ (ಅಶಿವೈ )ನಗರ್ತ ಯುವಕ ಸಂಘ, ಶ್ರೀ ವಿನಾಯಕ ಭಕ್ತ ಮಂಡಳಿ, ಅಶಿವೈ ನಗರ್ತ ಮಹಂತಿನ ಮಠ, ಶ್ರೀ ನಗರೇಶ್ವರ ಸ್ವಾಮಿ ಸೇವಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಗಣೇಶೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಎರಡು ದಿನಗಳ ಕಾಲದ ವಿಜಯಪುರ ನಗರ್ತ ಪ್ರೀಮಿಯರ್ ಲೀಗ್(ಎನ್‌ಪಿಎಲ್) ೨೦೨೫ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳಿಗೆ ಬ್ಯಾಟ್ ಬೀಸಿ ಚಾಲನೆ ನೀಡಿ ಮಾತನಾಡಿದರು. ಬೆಂಗಳೂರಿನ ನಗರ್ತ ವಿದ್ಯಾವರ್ಧಕ ಸಂಘದ ಖಜಾಂಚಿ ಶಂಕರ್‌, ಪ್ರಗತಿ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕ ಕೃಪಾಶಂಕರ್, ಮಹಾಂತಿನ ಮಠದ ಅಧ್ಯಕ್ಷ ಪುನೀತ್ ಕುಮಾರ್, ಕಾರ್ಯದರ್ಶಿ ವಿ.ವಿಶ್ವನಾಥ್, ಖಜಾಂಚಿ ಎ.ಮಧು, ಕ್ರಿಕೆಟ್ ಪಂದ್ಯಾವಳಿಗಳ ರೂವಾರಿ ಸುಪ್ರೀತ್ ಬಾಬು ,ನಗರ್ತ ಯುವಕ ಸಂಘದ ಅಧ್ಯಕ್ಷ ವಿ.ಬಸವರಾಜು, ಕೋರಮಂಗಲ ರುದ್ರಪ್ಪ ಟ್ರಸ್ಟ್‌ ಅಧ್ಯಕ್ಷ ಸಿ.ಭಾಸ್ಕರ್, ರಾಷ್ಟ್ರೀಯ ಬಸವ ದಳದ ಖಜಾಂಚಿ ಬೇಕರಿ ಶಿವಣ್ಣ, ಸುರಕ್ಷಾ ಟೂರ್ಸ್‌ನ ವೀರೇಶ್, ಎನ್.ರುದ್ರ ಮೂರ್ತಿ ಇತರರು ಉಪಸ್ಥಿತರಿದ್ದರು.