ಸಾರಾಂಶ
ಪ್ರಶಸ್ತಿ ಸಿಗದಿದ್ದರೆ ಬೇಸರ ಪಟ್ಟುಕೊಳ್ಳಬೇಡಿ ಎಂದು ವಿದ್ಯಾರ್ಥಿಗಳನ್ನು ಶಿಕ್ಷಕಿ ದೀಪಾ ಕಾಮತ್ ಹುರಿದುಂಬಿಸಿದರು.
ಗೋಕರ್ಣ: ವಿದ್ಯಾರ್ಥಿಗಳ ಮಾನಸಿಕ, ದೈಹಿಕ, ಬೆಳವಣಿಗೆ ಆಗಬೇಕಾದರೆ ಕ್ರೀಡೆ ಅಗತ್ಯವಿದೆ. ಕ್ರೀಡೆಯಲ್ಲಿ ಸೋಲು- ಗೆಲುವು ಸಾಮಾನ್ಯ. ಇದಕ್ಕೆ ವಿದ್ಯಾರ್ಥಿಗಳು ಎದೆಗುಂದಬಾರದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮನಾ ಗೌಡ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಧರ್ಮಚಕ್ರ ಟ್ರಸ್ಟ್‌ನ ಸಾರ್ವಭೌಮ ಗುರುಕುಲಲದ ಆಶ್ರಯದಲ್ಲಿ ಇಲ್ಲಿನ ಭದ್ರಕಾಳಿ ಕಾಲೇಜು ಮೈದಾನದಲ್ಲಿ ನಡೆದ ೨೦೨೪- ೨೫ನೇ ಸಾಲಿನ ಶೈಕ್ಷಣಿಕ ವರ್ಷದ ಗೋಕರ್ಣ ಕೇಂದ್ರ ಮಟ್ಟದ ಪ್ರಾಥಮಿಕ ಶಾಲಾ ಇಲಾಖಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.ಶಿಕ್ಷಣ ಸಂಯೋಜಕಿ ದೀಪ ಕಾಮತ್ ಮಾತನಾಡಿ, ಪ್ರಶಸ್ತಿ ಸಿಗದಿದ್ದರೆ ಬೇಸರ ಪಟ್ಟುಕೊಳ್ಳಬೇಡಿ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಸಿಆರ್‌ಪಿ ಮೋಹಿನಿ ಮಾತನಾಡಿ,ವಿದ್ಯಾರ್ಥಿಗಳು ಕ್ಲಸ್ಟರ್‌ನಿಂದ ದೇಶದ ಮಟ್ಟದವರೆಗೂ ಕೀರ್ತಿ ಬೆಳಗಿಸಲಿ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಸಾರ್ವಭೌಮ ಗುರುಕುಲದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಅರುಣ್ ಹೆಗಡೆ ಮಾತನಾಡಿ, ಗೆದ್ದೆನೆಂದು ಹಿಗ್ಗಬಾರದು. ಸೋತನೆಂದು ಕುಗ್ಗಬಾರದು. ಭಾಗವಹಿಸಿದೆನೆಂಬ ಹೆಮ್ಮೆ ನಿಮ್ಮಲ್ಲಿರಲಿ. ಅದೇ ನಿಮ್ಮ ಗೆಲುವಿನ ಗುಟ್ಟು ಎಂದರು.ಸಾರ್ವಭೌಮ ಗುರುಕುಲದ ವಿದ್ಯಾರ್ಥಿಗಳು ಕ್ರೀಡಾಜ್ಯೋತಿಯನ್ನು ಬೆಳಗಿಸಿ ಗಣ್ಯರಿಗೆ ಹಸ್ತಾಂತರಿಸಿದರು. ಸಾರ್ವಭೌಮ ಗುರುಕುಲದ ದೈಹಿಕ ಶಿಕ್ಷಣ ಶಿಕ್ಷಕ ಅಕ್ಷಯ ಅಡಿಗುಂಡಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.ಸಭಾ ಕಾರ್ಯಕ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್, ಸಿಆರ್‌ಪಿ ಮೋಹಿನಿ ಗೌಡ, ಆಡುಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಪಿ.ಎಂ. ಮುಕ್ರಿ, ಸಾರ್ವಭೌಮ ಗುರುಕುಲದ ಮುಖ್ಯಶಿಕ್ಷಕಿ ಸೌಭಾಗ್ಯಾ ಭಟ್, ಸಾರ್ವಭೌಮ ಗುರುಕುಲಮ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೂರ್ಸೆ, ಗುರುಕುಲ ಆಡಳಿತ ಮಂಡಳಿಯ ಮಹೇಶ ಶೆಟ್ಟಿ ಉಪಸ್ಥಿತರಿದ್ದರು. ಮಂಜುನಾಥ್ ಭಟ್ ನಿರ್ವಹಿಸಿದರು. ಗುರುಕುಲದ ಮುಖ್ಯೋಪಾಧ್ಯಾಯರಾದ ಸೌಭಾಗ್ಯ ಭಟ್ಟ ಸ್ವಾಗತಿಸಿದರು. ಶಶಿಕಲಾ ಕೂರ್ಸೆ ವಂದಿಸಿದರು.