ರಾಣಿಬೆನ್ನೂರು: ಕ್ರೀಡೆ ಶಿಕ್ಷಣದ ಒಂದು ಭಾಗವಾಗಿದ್ದು, ಮನಸ್ಸಿನ ಸಮತೋಲಿತ ಬೆಳವಣಿಗೆಗೆ ಮುಖ್ಯ ಕಾರಣ ಎಂದು ಬ್ಯಾಡಗಿಯ ಮಾಜಿ ಸೈನಿಕ, ಸಮಾಜ ಸೇವಕ ಮಲ್ಲೇಶಪ್ಪ ಚಿಕ್ಕಣ್ಣನವರ ಹೇಳಿದರು. ನಗರದ ಕೆಎಲ್‌ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ಸೋಲು ಗೆಲುವಿನ ಅರ್ಥವನ್ನು ತಿಳಿದುಕೊಳ್ಳಬೇಕು. ಈ ಮೂಲಕ ಜೀವನದಲ್ಲಿ ಸಮಚಿತ್ತವನ್ನು ಸಾಧಿಸಬಹುದು. ಉತ್ತಮ ಕ್ರೀಡಾಪಟು ಉತ್ತಮ ವಿದ್ಯಾರ್ಥಿ, ನಾಗರಿನಾಗುತ್ತಾನೆ. ನಮ್ಮ ಹಾದಿಯ ಪ್ರಗತಿಯನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಯಶಸ್ವಿ ಜೀವನವನ್ನು ರೂಪಿಸಲು ಕ್ರೀಡೆಯು ಸಹಾಯ ಮಾಡುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರೊ. ನಾರಾಯಣ ನಾಯಕ ಎ. ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳನ್ನು ನಿತ್ಯ ಚೈತನ್ಯಶೀಲರನ್ನಾಗಿ ಮಾಡಲು ಸಹಕಾರಿಯಾಗಲಿವೆ. ಕ್ರೀಡೆಯಲ್ಲಿ ಸೋಲು ಗೆಲುವುಗಿಂತ ಭಾಗವಹಿಸುವಿಕೆ ಮುಖ್ಯ. ಕ್ರೀಡೆಯಲ್ಲಿ ಶಿಸ್ತು, ಉತ್ಸಾಹ ಮತ್ತು ಪ್ರಾಮಾಣಿಕತೆ ಮುಖ್ಯವಾಗಿದೆ ಎಂದರು. ಪ್ರೊ. ನಾಗರಾಜ ಗವಿಯಪ್ಪನವರ, ಪ್ರೊ. ಕವಿತಾ ವಿ., ಪ್ರೊ.ಗಣೇಶ ಅಂಗಡಿ, ಪ್ರೊ. ರತ್ನವ್ವ ಹಾದಿಮನಿ, ಪ್ರೊ. ಸೋಮಶೇಖರ ಹೊನ್ನಳಿ, ಪ್ರೊ..ಕವಿತಾ ಗಡ್ಡದಗೂಳಿ, ಪ್ರೊ ಎಮ್‌.ಎನ್. ಸೂರಣಗಿ, ಪೃಥ್ವಿ ಎ., ಅನುಷಾ ಕೋಗಳೆ, ಸುನಿತಾ ಕ್ಯಾತಾರಿ ಹಾಗೂ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು.