ಕ್ರೀಡೆಯು ಆತ್ಮಸ್ಥೈರ್ಯ ಹೆಚ್ಚಿಸುತ್ತೆ: ಎಸ್‌.ಬಿ. ಚಳಗೇರಿ

| Published : Jan 12 2024, 01:46 AM IST

ಕ್ರೀಡೆಯು ಆತ್ಮಸ್ಥೈರ್ಯ ಹೆಚ್ಚಿಸುತ್ತೆ: ಎಸ್‌.ಬಿ. ಚಳಗೇರಿ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ವೀರಪುಲಕೇಶಿ ಸಂಸ್ಥೆಯ ಎಸ್.ಬಿ.ಎಂ.ಪದವಿ ಕಾಲೇಜಿನ ಸಹಯೋಗದಲ್ಲಿ ೨೦೨೩-೨೪ ನೇ ಸಾಲಿನ ವಿಶ್ವವಿದ್ಯಾಲಯದ ತಂಡದ ಆಯ್ಕೆ ಏಕವಲಯ ಅಂತರ್ ಕಾಲೇಜುಗಳ ಪುರುಷರ ಹಾಗೂ ಮಹಿಳಾ ನೆಟ್ ಬಾಲ್ ಪಂದ್ಯಾವಳಿ

ಕನ್ನಡಪ್ರಭ ವಾರ್ತೆ ಬಾದಾಮಿ

ಪಠ್ಯದ ಜತೆಗೆ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ನಿಮ್ಮಲ್ಲಿರುವ ಆತ್ಮಸ್ಥೈರ್ಯ ಹೆಚ್ಚುತ್ತದೆ. ಇದರಿಂದ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಹುನಗುಂದ ಪದವಿ ಕಾಲೇಜಿನ ದೈಹಿಕ ನಿರ್ದೇಶಕ ಲೆಫ್ಟಿನೆಂಟ್‌ ಎಸ್.ಬಿ. ಚಳಗೇರಿ ಹೇಳಿದರು.

ನಗರದ ವೀರಪುಲಕೇಶಿ ಸಂಸ್ಥೆಯ ಎಸ್.ಬಿ.ಎಂ.ಪದವಿ ಕಾಲೇಜಿನ ಸಹಯೋಗದಲ್ಲಿ ೨೦೨೩-೨೪ ನೇ ಸಾಲಿನ ವಿಶ್ವವಿದ್ಯಾಲಯದ ತಂಡದ ಆಯ್ಕೆ ಏಕವಲಯ ಅಂತರ್ ಕಾಲೇಜುಗಳ ಪುರುಷರ ಹಾಗೂ ಮಹಿಳಾ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಗುರುವಾರ ಮಾತನಾಡಿದರು.

ಬೆಳಗಾವಿಯ ರಾಣಿ ಚನ್ನಮ್ಮ ವಿವಿ ಕ್ರೀಡಾ ನಿರ್ದೇಶಕ ಗಸ್ತಿ ಮಾತನಾಡಿ, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಆಗುವ ಲಾಭದ ಕುರಿತಾಗಿ ಸವಿವರ ಮಾಹಿತಿ ನೀಡಿದರು. ಕ್ರೀಡೆಯಲ್ಲಿ ೧೨ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದು ೯ ಮಹಿಳೆಯರ ತಂಡಗಳು ೧೩ ಪುರುಷ ತಂಡಗಳು ಭಾಗವಹಿಸಿದ್ದವು. ಗುರುವಾರ ೭೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಯುನಿವರ್ಸಿಟಿ ಬ್ಲ್ಯೂ ಆಯ್ಕೆಯಲ್ಲಿ ಭಾಗಿಯಾಗಿದ್ದರು.

ಪ್ರಾಚಾರ್ಯ ರವೀಂದ್ರ ಮೂಲಿಮನಿ ಮಾತನಾಡಿದರು. ಶಶಿಧರ ಮೂಲಿಮನಿ ಸ್ವಾಗತಿಸಿದರು. ಸಂಸ್ಥೆಯ ಉಪಾಧ್ಯಕ್ಷ ಸುನೀಲ ಕಾರುಡಗಿಮಠ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಎಸ್.ಡಿ.ಫತ್ತೇಪೂರ, ನಾಗರಾಜ ಕಾಚೆಟ್ಟಿ, ಬಿ.ಎಸ್.ಪಟ್ಟಣಶೆಟ್ಟಿ, ವಿ.ಕೆ.ಬಾಗಲೆ, ದೈಹಿಕ ನಿರ್ದೇಶಕ ಬಸವರಾಜ ಬಳಗೇರ ಪಾಟೀಲ, ಎಸ್.ಎಚ್.ಮೇಟಿ, ರಾಚಣ್ಣ ಪಟ್ಟಣದ ಉಪಸ್ಥಿತರಿದ್ದರು. ಶಿವುಕುಮಾರ ಅಂಗಡಿ ಹಾಗೂ ಚಿಕ್ಕಣ್ಣ ಚಿಕ್ಕಣ್ಣವರ ನಿರೂಪಿಸಿದರು. ನಿಕಿಲ್ ಕುರಿ ವಂದಿಸಿದರು.