ಸಾರಾಂಶ
ಕನ್ನಡಪ್ರಭ ವಾರ್ತೆ, ಕಡೂರು
ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ತೋರುವ ಮಕ್ಕಳಿಗೆ ಶಿಕ್ಷಕರು ನಿರಂತರ ಮಾರ್ಗದರ್ಶನ ನೀಡುವ ಮೂಲಕ ಪ್ರೋತ್ಸಾಹಿಸುವ ಕಾರ್ಯಗಳು ಆಗಬೇಕು ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.ಪಟ್ಟಣದ ಬಿಇಒ ಕಚೇರಿಯಲ್ಲಿ ತಾಲೂಕಿನ ಯಗಟೀಪುರದ ಕೆಂಬ್ರಿಡ್ಜ್ ಶಾಲೆ ಮಕ್ಕಳು ನ.15-20ರವರೆಗೆ ಮಧ್ಯಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕಬ್ಬಡಿ ಕ್ರೀಡಾಕೂಟಕ್ಕೆ ತೆರಳುವ ಕ್ರೀಡಾಪಟುಗಳಿಗೆ ಶುಭ ಹಾರೈಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇವಲ ಪಠ್ಯದ ಚಟುವಟಿಕೆಗಳಿಗಿಂತ ಪಠ್ಯೇತರ ದೇಸಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚು ಬೆಂಬಲಿಸುವ ಕಾರ್ಯವಾದಾಗ ತಾಲೂಕಿನಲ್ಲಿ ಉತ್ತಮ ಕ್ರೀಡಾಪ್ರತಿಭೆಗಳನ್ನು ಶೋಧಿಸಿದಂತಾಗುತ್ತದೆ. .ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ತೋರುತ್ತಿರುವ ಮಕ್ಕಳಿಗೆ ಶಿಕ್ಷಕರು ನಿರಂತರ ಮಾರ್ಗದರ್ಶನದ ಮೂಲಕ ಪ್ರೋತ್ಸಾಹಿಸುವ ಕಾರ್ಯ ಆಗಬೇಕು ಎಂದರು.ಪಟ್ಟಣದಲ್ಲಿ ಕಳೆದ ತಿಂಗಳು ನಡೆದ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ತಾಲೂಕಿನ ಕೇಂಬ್ರಿಡ್ಜ್ ಶಾಲೆ ಮಕ್ಕಳು ರಾಷ್ಟ್ರ ಮಟ್ಟದಲ್ಲೂ ಉತ್ತಮ ಪ್ರದರ್ಶನ ನೀಡಿ ಕಡೂರಿಗೆ ಕೀರ್ತಿ ತರುವಂತಾಗಲಿ ಎಂದು ಕ್ರೀಡಾಟುಗಳಿಗೆ ಶುಭ ಹಾರೈಸಿದರು. ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಸಿದ್ದರಾಜುನಾಯ್ಕ ಮಾತನಾಡಿ, ನಮ್ಮ ತಾಲೂಕಿನಲ್ಲಿ ದೇಸೀ ಕ್ರೀಡಾಪಟುಗಳು ಇದ್ದಾರೆ. ಅವರನ್ನು ಗುರುತಿಸಿ ಸಮಾಜ ಮುಖಿಯಾಗಿ ಬೆಳೆಯಲು ಎಲ್ಲರೂ ಪ್ರೋತ್ಸಾಹಿ ಸುವ ಕಾರ್ಯ ಆಗಬೇಕು. ಅದರಂತೆ ಮೊನ್ನೆ ನಡೆದ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾವಳಿ ಶಾಸಕ ಕೆ ಎಸ್. ಆನಂದ್ ಮತ್ತು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ರಂತಹ ಜನಪ್ರತಿಧಿಗಳ ಸಹಕಾರದಿಂದ ಯಶಸ್ವಿ ಆಗಲು ಕಾರಣವಾಯಿತು ಎಂದರು.
ದೈಹಿಕ ಶಿಕ್ಷಣಾಧಿಕಾರಿ ನಾಗರಾಜ್, ಲಿಂಗರಾಜು, ದೈಹಿಕ ಶಿಕ್ಷಕರಾದ ಲತಾಮಣಿ , ಪಾಂಡುಕುಮಾರ್, ಮುರುಳಿ, ಆನಂದಪ್ಪ, ತಿಮ್ಮಪ್ಪ, ಕೇಂಬ್ರಿಡ್ಜ್ ಶಾಲೆ ದೈಹಿಕ ಶಿಕ್ಷಕ ಗೋಪಿ ಮತ್ತಿತರಿದ್ದರು.11ಕೆಕೆಡಿಯು1.ಮಧ್ಯಪ್ರದೇಶದಲ್ಲಿ ನಡೆಯಲಿರುವ ರಾಷ್ಟ ಮಟ್ದದ ಕಬ್ಬಡಿ ಪಂದ್ಯಾವಳಿಗಳಿಗೆ ಭಾಗವಹಿಸುವ ಕಡೂರು ತಾಲ್ಲೂಕಿನ ಯಗಟಿಪುರದ ಕೆಂಬ್ರಿಡ್ಜ್ ಶಾಲೆಯ ಮಕ್ಕಳಿಗೆ ಪಟ್ಟಣದ ಬಿಇಒ ಕಚೇರಿಯಲ್ಲಿ ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಬೀಳ್ಕೊಡುಗೆ ನೀಡಿದರು. ಆರ್. ಸಿದ್ದರಾಜುನಾಯ್ಕ ಮತ್ತಿತರಿದ್ದರು.
;Resize=(128,128))
;Resize=(128,128))
;Resize=(128,128))