ಮಕ್ಕಳು ಸದೃಢರಾಗಲು ಕ್ರೀಡೆ ಸಹಕಾರಿ

| Published : Aug 10 2025, 01:30 AM IST

ಸಾರಾಂಶ

ಕಡೂರುಮಕ್ಕಳು ಸದೃಢರಾಗಲು ಕ್ರೀಡೆ ಸಹಕಾರಿ. ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಬಹು ಮುಖ್ಯ ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.

ಜಿಗಣೇಹಳ್ಳಿ ನೀಲಕಂಠಪ್ಪ ಅಭಿಮತ

ಕನ್ನಡಪ್ರಭ ವಾರ್ತೆ ಕಡೂರು

ಮಕ್ಕಳು ಸದೃಢರಾಗಲು ಕ್ರೀಡೆ ಸಹಕಾರಿ. ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಬಹು ಮುಖ್ಯ ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.

ತಾಲೂಕಿನ ಸಖರಾಯಪಟ್ಟಣ ಸಮೀಪದ ಪಂಚೆಹೊಸಳ್ಳಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಮ್ಮೆದೊಡ್ಡಿ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿಗೆ ಯುವಜನರು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ವಿಷಾದನೀಯ. ಯುವಕರು ಆಟೋಟಗಳಲ್ಲಿ ಭಾಗವಹಿಸಬೇಕು. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ ಎಂದರು. ಮುಖ್ಯ ಶಿಕ್ಷಕ ರಾಜಪ್ಪ ಮಾತನಾಡಿ, ಹೊಸಳ್ಳಿ-ಎಮ್ಮೆದೊಡ್ಡಿ-ದೊಡ್ಡಪಟ್ಟಣಗೆರೆ ಮೂರೂ ಕ್ಲಸ್ಟರ್‌ಗಳಿಂದ 15 ಶಾಲೆಗಳು ಸೇರಿ ಸುಮಾರು 400 ಮಕ್ಕಳು ಭಾಗವಹಿಸುತ್ತಿದ್ದು, ಇಲ್ಲಿಂದ ಗೆದ್ದ ಮಕ್ಕಳು ತಾಲೂಕು ಮಟ್ಟಕ್ಕೆ ಹೋಗಲಿದ್ದಾರೆ ಎಂದರು. ಗ್ರಾಮದ ಹಿರಿಯ ಹನುಮಂತಪ್ಪ ಮಾತನಾಡಿ, ಗ್ರಾಮಸ್ಥರ ಸಹಕಾರದಿಂದ ಹಬ್ಬದ ರೂಪದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ. ಸರಕಾರ ಇನ್ನು ಹೆಚ್ಚಿನ ಅನುದಾನ ನೀಡಿ ಮಕ್ಕಳು ಸದೃಢರಾಗಲು ಇಂತಹ ಕ್ರಿಡಾಕೂಟ ನಡೆಸಬೇಕು. ನಮ್ಮ ಗ್ರಾಮೀಣ ಭಾಗದ ಮಕ್ಕಳು ಎಲ್ಲದರಲ್ಲಿಯೂ ಮುಂದೆ ಇದ್ದಾರೆ. ಅವರಿಗೆ ಪ್ರೋತ್ಸಾಹ ಮುಖ್ಯ ಎಂದರು.ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಪರಮೇಶ್ವರಪ್ಪ, ಶಿವರುದ್ರಪ್ಪ, ಎಸ್.ಡಿ ಎಂಸಿ ಅಧ್ಯಕ್ಷ ನಾಗರಾಜು, ಶಿಕ್ಷಕರ ಸಂಘದ ಬಸಪ್ಪ, ಜಗದೀಶ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಜಯದೇವಪ್ಪ ಮಾತನಾಡಿದರು.

ಗ್ರಾಮಸ್ಥರಾದ ಚಂದ್ರಪ್ಪ, ಮಂಜಪ್ಪ, ರವಿ, ಹಾಗೂ ಶಿಕ್ಷಕರ ಸಂಘದ ಸದಸ್ಯರ ಮಕ್ಕಳು ಭಾಗವಹಿಸಿದ್ದರು.

8ಕೆಕೆಡಿಯು2.

ಪಂಚೆಹೊಸಳ್ಳಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಮ್ಮೆದೊಡ್ಡಿ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಗ್ರಾಪಂ.ಮಾಜಿ ಅಧ್ಯಕ್ಷ ಜಿಗಣೇಹಳ್ನಿ ನೀಲಕಂಠಪ್ಪ ಉದ್ಘಾಟಿಸಿದರು.