ಸಾರಾಂಶ
ಮಹಿಳೆಯರು ಮನೆ ಹಾಗೂ ಕಚೇರಿಗಳಲ್ಲಿ ಎರಡು ಕಡೆಯು ಸಮನಾಗಿ ಕೆಲಸ ಮಾಡುತ್ತಾರೆ. ಒತ್ತಡಗಳು ಇದ್ದೇ ಇರುತ್ತದೆ. ಒತ್ತಡ ಮರೆಯಲು ಕ್ರೀಡೆ ಅನಿವಾರ್ಯವಾಗಿದ್ದು, ಗಂಡು ಮಕ್ಕಳಂತೆ ನಾವು ಕೂಡ ಸಾಧನೆ ಮಾಡಬಹುದು. ಆದ್ದರಿಂದ ಕ್ರೀಡೆಯಲ್ಲಿ ಸೋಲು ಗೆಲವನ್ನು ಸಮನಾಗಿ ಸ್ವೀಕರಿಸಬೇಕು. ಹೆಣ್ಣು ಮಕ್ಕಳು ಕೂಡ ಆರೋಗ್ಯವಾಗಿರಬೇಕು. ಈ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿದ್ದು, ಯುರೋಪಿಯನ್ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಸಮಾನತೆ ಇದೆ.
ಕನ್ನಡಪ್ರಭ ವಾರ್ತೆ ಮೈಸೂರುಮಾನಸಿಕ, ದೈಹಿಕವಾಗಿ ಸದೃಢವಾಗಿರಲು ಕ್ರೀಡೆ ಮುಖ್ಯವಾಗಿದ್ದು, ಪ್ರತಿಯೊಬ್ಬ ಮಹಿಳೆಯು ಯಾವುದಾದರೊಂದು ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಬಿ.ಎಂ. ಸವಿತಾ ಕರೆ ನೀಡಿದರು.
ಜಿಲ್ಲಾಡಳಿತ, ಜಿಪಂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಂಗಳವಾರ ನಡೆದ ಮಹಿಳಾ ಕ್ರೀಡಾ ಕೂಟ ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳೆಯರು ಮನೆ ಹಾಗೂ ಕಚೇರಿಗಳಲ್ಲಿ ಎರಡು ಕಡೆಯು ಸಮನಾಗಿ ಕೆಲಸ ಮಾಡುತ್ತಾರೆ. ಒತ್ತಡಗಳು ಇದ್ದೇ ಇರುತ್ತದೆ. ಒತ್ತಡ ಮರೆಯಲು ಕ್ರೀಡೆ ಅನಿವಾರ್ಯವಾಗಿದ್ದು, ಗಂಡು ಮಕ್ಕಳಂತೆ ನಾವು ಕೂಡ ಸಾಧನೆ ಮಾಡಬಹುದು. ಆದ್ದರಿಂದ ಕ್ರೀಡೆಯಲ್ಲಿ ಸೋಲು ಗೆಲವನ್ನು ಸಮನಾಗಿ ಸ್ವೀಕರಿಸಬೇಕು ಎಂದು ಅವರು ತಿಳಿಸಿದರು.
ಜಿಪಂ ಉಪ ಕಾರ್ಯದರ್ಶಿ ಡಾ. ಕೃಷ್ಣಂರಾಜು ಮಾತನಾಡಿ, ಹೆಣ್ಣು ಮಕ್ಕಳು ಕೂಡ ಆರೋಗ್ಯವಾಗಿರಬೇಕು. ಈ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿದ್ದು, ಯುರೋಪಿಯನ್ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಸಮಾನತೆ ಇದೆ. ಆದರೆ ಭಾರತದಲ್ಲಿ ಸಮಾನತೆ ಸಿಕ್ಕಿಲ್ಲದಿದ್ದರೂ ಕೂಡ ಮಹಿಳೆಯರು ಕೂಡ ಪುರುಷರಷ್ಟೇ ಬಲಾಢ್ಯರಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ತಮ್ಮದೇ ಆದ ಸಾಧನೆ ಮಾಡಿದ್ದಾರೆ. ಕ್ರೀಡೆ ಮನಸ್ಸಿಗೆ ಉಲ್ಲಾಸ ಕೊಡುತ್ತದೆ. ನಾವು ಹೈಸ್ಕೂಲಿನಲ್ಲಿ ಓದುವಾಗ ಆಟವಾಡುವುದಕ್ಕೆ, ಬಿಡುವುದನ್ನೇ ಕಾಯುತ್ತಿದ್ದೆವು. ಕೆಲಸ ಮಾಡುವ ಮಹಿಳೆಯರೂ ಕೂಡ ಹೆಚ್ಚಾಗಿ ಕ್ರೀಡೆಯಲ್ಲಿ ಭಾಗವಹಿಸಬೇಕು. ಜೀವನದಲ್ಲೂ ಪ್ರತಿಯೊಬ್ಬರು ಕ್ರೀಡಾ ಮನೋಭಾವ ಬೆಳೆಸಿಕೊಳ್ಲಬೇಕು. ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಂದು ಅವರು ಶುಭ ಕೋರಿದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಸ್ವಾಗತಿಸಿದರು. ಹಿರಿಯ ಭೂ ವಿಜ್ಞಾನಿ ಡಾ.ಕೆ.ಎನ್. ಪುಷ್ಪಾವತಿ, ಎನ್.ಎಸ್.ಎಸ್ ಅಧಿಕಾರಿ ಡಾ. ಲಕ್ಷ್ಮೀ ಪಲೋಡಿ, ಎಂ. ಲಾವಣ್ಯ ಇದ್ದರು.
ವಿಜಯಲಕ್ಷ್ಮೀ ನಿರೂಪಿಸಿದರು. ಆರ್. ಸುಂದರೇಶ್ ವಂದಿಸಿದರು. ಕ್ರೀಡಾ ಕೂಟದಲ್ಲಿ ಹಾಕಿ ಪೆನಾಲ್ಟಿ ಸೂಟ್, ಶೂಟ್ಇನ್ ದಿ ಬ್ಯಾಸ್ಕೆಟ್, ಮ್ಯೂಸಿಕಲ್ ಛೇರ್, ವಾಲಿಬಾಲ್, ಬ್ಯಾಸ್ಕೆಟ್ಬಾಲ್, ಅಥ್ಲೆಟಿಕ್ಸ್, ಗುಂಡು ಎಸೆತ, ಉದ್ದ ಜಿಗಿತ ಆಟಗಳನ್ನು ಆಡಿಸಲಾಯಿತು.