ಸಾರಾಂಶ
ಔರಾದ್ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಬಿವಿಪಿ ವತಿಯಿಂದ ಆಯೋಜಿಸಿದ ವಿವೇಕ ಟ್ರೋಫಿಗೆ ಚಾಲನೆ ನೀಡಿ, ಡಿಡಿಪಿಯು ಚಂದ್ರಕಾಂತ ಶಾಬಾದಕರ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಔರಾದ್
ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಅತಿ ಅವಶ್ಯ ಎಂದು ಡಿಡಿಪಿಯು ಚಂದ್ರಕಾಂತ ಶಾಬಾದಕರ್ ನುಡಿದರು.ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತ್ಯುತ್ಸವ ನಿಮಿತ್ತ ಎಬಿವಿಪಿ ವತಿಯಿಂದ ಆಯೋಜಿಸಿದ ವಿವೇಕ ಟ್ರೋಫಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗೆಲ್ಲುವ ಬಯಕೆಯಿಂದ ಆಟದಲ್ಲಿ ಭಾಗವಹಿಸಿದರೂ ಸಹ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದರು.
ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಮಾತನಾಡಿ, ನಿರಂತರ ಪರಿಶ್ರಮ, ಆತ್ಮವಿಶ್ವಾಸ, ಸಮಯ ಪ್ರಜ್ಞೆಗಳಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಇದನ್ನು ವಿದ್ಯಾರ್ಥಿ ಸಮೂಹ ಅರಿತುಕೊಳ್ಳಬೇಕು. ಕ್ರೀಡೆಯಿಂದ ಮಕ್ಕಳ ಪ್ರತಿಭೆ ಹೆಚ್ಚಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಬೋಧಕರು ಅಭ್ಯಾಸದ ಜತೆ ಮಕ್ಕಳಿಗೆ ಕ್ರೀಡೆಯ ಅಭಿರುಚಿ ಮೂಡಿಸಬೇಕು ಎಂದರು.ಈ ಸಂದರ್ಭದಲ್ಲಿ ಎಬಿವಿಪಿ ನಗರ ಘಟಕದ ಅಧ್ಯಕ್ಷ ಡಿಡಿ ಬೊಳೆಗಾವೆ, ಮಹ್ಮದ ವಕೀಲ್, ಸಿಪಿಐ ರಘುವೀರಸಿಂಗ್ ಠಾಕೂರ್, ಗಂಗಾಧರ್ ನೌಕರರ ಸಂಘದ ಅಧ್ಯಕ್ಷ ರಾಜಕುಮಾರ ಉದಗೀರೆ, ದೈಹಿಕ ಶಿಕ್ಷಣಾಧಿಕಾರಿ ಜೋಯಲ್ ಜೈರಾಜ್, ಹೇಮಂತ, ಶಶಿಕಾಂತ ರಾಕಲೆ, ಅನಿಲ ಮೇತ್ರೆ, ರಮೇಶ ವಾಘಮಾರೆ, ಮಲ್ಲು ಟೇಕರಾಜ್, ಅಂಬಾದಾಸ ನಳಗೆ, ಕಾವೇರಿ, ಅಶೋಕ ಶೆಂಬೆಳ್ಳೆ ಸೇರಿದಂತೆ ಇನ್ನಿತರರಿದ್ದರು. ವಾಲಿಬಾಲ್ ಮತ್ತು ಥ್ರೋಬಾಲ್ ಸೇರಿ ಒಟ್ಟು 33 ತಂಡಗಳು ಭಾಗವಹಿಸಿದ್ದವು.