ಕ್ರೀಡೆಗಳಿಗೆ ಮಹತ್ವ ನೀಡಬೇಕು: ಪೊನ್ನಣ್ಣ

| Published : May 12 2024, 01:19 AM IST

ಸಾರಾಂಶ

ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಮಕ್ಕಳು ಮಾನಸಿಕವಾಗಿ ಸಮಚಿತ್ತರಾಗುತ್ತಾರೆ. ಹಾಗಾಗಿ ಕ್ರೀಡೆಗಳಿಗೆ ಮಹತ್ವ ನೀಡಬೇಕು.

ಕನ್ನಡ ಪ್ರಭ ವಾರ್ತೆ ನಾಪೋಕ್ಲು

ಕ್ರೀಡಾಕೂಟಗಳಲ್ಲಿ ಮಕ್ಕಳು ಭಾಗವಹಿಸಿದರೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಮಚಿತ್ತ ರಾಗುತ್ತಾರೆ. ಆದುದರಿಂದ ಕ್ರೀಡೆಗಳಿಗೆ ಮಹತ್ವ ನೀಡಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ಸಮೀಪದ ಕಕ್ಕಬ್ಬೆಯ ಪ್ರೌಢ ಶಾಲಾ ಮೈದಾನದಲ್ಲಿ ಮೇದ ಜನಾಂಗದ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ 4 ನೇ ವರ್ಷದ ಪುರುಷರ ಕ್ರಿಕೆಟ್ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಕ್ರೀಡಾಕೂಟ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಾಡಿಕಾರ ಕುಟುಂಬದ ಹಿರಿಯ ವ್ಯಕ್ತಿ ಎಂ.ಟಿ.ದಾಸಪ್ಪ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ಕೆಪಿಸಿಸಿ ಉಪ ಅಧ್ಯಕ್ಷ ಶೈಲಾ ಕುಟ್ಟಪ್ಪ, ಕೆಡಿಪಿ ಸದಸ್ಯ ಬಾಚಮಂಡ ಲವ ಚಿಣ್ನಪ್ಪ, ಬುಡಕಟ್ಟು ಜನಾಂಗದ ಅಧ್ಯಕ್ಷ ಕುಡಿಯರ ಮುತ್ತಪ್ಪ, ಫೈನರಿ ಜಮಾತ್ ಅಧ್ಯಕ್ಷ ಶೌಕತ್ ಆಲಿ, ಅರಮನೆ ಪಾಲೆ ಜನಾಂಗದ ನಿರ್ದೇಶಕ ದೇವಯ್ಯ, ವೇದ ಜನಾಂಗದ ಜನಪದ ಕಲಾವಿದ ಸಾಬು ಚಿನ್ನಪ್ಪ, ಚೆಂದಮ್ಮ ಬೋಜಕ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಬಳಿಕ ವಿವಿಧ ಕ್ರೀಡಾಕೂಟಗಳು ಜರುಗಿತು.