ಸಾರಾಂಶ
ಇತಿಹಾಸ ಪ್ರಸಿದ್ಧ ಪಟ್ಟಣದ ಶ್ರೀ ಬೇಟೆರಾಯ ಸ್ವಾಮಿಯ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಮಧ್ಯಾಹ್ನ ವಿಜೃಂಭಣೆಯಿಂದ ನೆರವೇರಿತು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಇತಿಹಾಸ ಪ್ರಸಿದ್ಧ ಪಟ್ಟಣದ ಶ್ರೀ ಬೇಟೆರಾಯ ಸ್ವಾಮಿಯ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಮಧ್ಯಾಹ್ನ ವಿಜೃಂಭಣೆಯಿಂದ ನೆರವೇರಿತು. ಬ್ರಹ್ಮ ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ಬೇಟೆರಾಯಸ್ವಾಮಿ ಮೂಲ ದೇವರಿಗೆ ಪಂಚಾಮೃತ, ಕ್ಷೀರಾಭಿಷೇಕ ಸೇರಿದಂತೆ ದೇವಾಲಯದಲ್ಲಿ ಅನೇಕ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತಾದಿಗಳು ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.ಬೆಳಗ್ಗೆ ಶಾಸಕ ಎಂ.ಟಿ.ಕೃಷ್ಣಪ್ಪ ಆಗಮಿಸಿ ದೇವರ ದರ್ಶನ ಪಡೆದು ಸದನಕ್ಕೆ ತೆರಳಿದರು. ತಹಸೀಲ್ದಾರ್ ಕುಂ.ಇ.ಅಹಮದ್ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸ್ವಪ್ನಾ ನಟೇಶ್, ಪಟ್ಟಣ ಪಂಚಾಯ್ತಿ ಸದಸ್ಯರಾದ ಟಿ. ಆರ್.ಸುರೇಶ್, ಮಧು, ಚಿದಾನಂದ್, ಯಜಮಾನ್ ಮಹೇಶ್, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ, ವೆಂಕಟೇಶ್ ಕೃಷ್ಣಪ್ಪ, ಉದ್ಯಮಿ ಎಂ.ಡಿ.ಮೂರ್ತಿ, ಹೆಲಿಕ್ಯಾಫ್ಟರ್ ರಾಜಶೇಖರ್, ಸೇರಿದಂತೆ ಹಲವಾರು ಮುಖಂಡರು ಆಗಮಿಸಿದ್ದರು. ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಭಕ್ತಿ ಭಾವದಿಂದ ರಥಕ್ಕೆ ಬಾಳೆಹಣ್ಣು, ಧವನವನ್ನು ಎಸೆದರು. ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.