ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

| Published : Aug 17 2025, 01:32 AM IST

ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪಾಂಡವಪುರ ಪಟ್ಟಣ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳು ಶ್ರೀಕೃಷ್ಣ, ರಾಧೆ, ರುಕ್ಮಿಣಿ, ಅರ್ಜುನ, ಭೀಮ, ದುರ್ಯೋಧನ, ಅಷ್ಟಲಕ್ಷ್ಮೀಯರ ವೇಷಭೂಷಣ ಧರಿಸಿ ಪ್ರದರ್ಶಿಸುವ ಮೂಲಕ ಕೃಷ್ಣಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪಟ್ಟಣ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳು ಶ್ರೀಕೃಷ್ಣ, ರಾಧೆ, ರುಕ್ಮಿಣಿ, ಅರ್ಜುನ, ಭೀಮ, ದುರ್ಯೋಧನ, ಅಷ್ಟಲಕ್ಷ್ಮೀಯರ ವೇಷಭೂಷಣ ಧರಿಸಿ ಪ್ರದರ್ಶಿಸುವ ಮೂಲಕ ಕೃಷ್ಣಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಣೆ ಮಾಡಿದರು.

ಶ್ರೀಕೃಷ್ಣವೇಷಭೂಷಣ ಸ್ಪರ್ಧೆಗೆ ಶಾಲೆ ನೂರಾರು ಮಕ್ಕಳು ಶ್ರೀಕೃಷ್ಣ ಹಲವು ಅವತಾರಗಳ ವೇಷಭೂಷಣಗಳನ್ನು ಧರಿಸಿ ಶಾಲೆಗೆ ಆಗಮಿಸಿದ್ದರು. ಬ್ರಹ್ಮಲೋಕ, ಕೈಲಾಶ, ವೈಕುಂಠ, ಅಷ್ಟಲಕ್ಷ್ಮೀಯರು, ಮಹಾಭಾರತದಲ್ಲಿ ಬರುವ ಪಾಂಡವರು, ಕೌರವರ ವೇಷಭೂಷಣಗಳು ಎಲ್ಲರು ಮನಸೊರೆಗೊಂಡರು. ಇನ್ನೂ ಕೃಷ್ಣನ ಅವತಾರದಲ್ಲಿ ಮಕ್ಕಳು ನೀಡಿದ ಪ್ರದರ್ಶನಗಳನ್ನು ಕಂಡು ಪೋಷಕರು, ಗಣ್ಯರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಭಾರತೀಯರು ದೇಶದಾದ್ಯಂತ ವಿಜೃಂಭಣೆಯಿಂದ ಮಾಡುತ್ತಿದ್ದಾರೆ. ನಾವು ಶ್ರೀಕೃಷ್ಣ ಹತ್ತು ಅವತರಾಗಳನ್ನು ನೋಡಿದ್ದೇವೆ. ಇಂದಿನ ಸ್ಪರ್ಧೆಯಲ್ಲಿ ಶ್ರೀಕೃಷ್ಣನ ಹತ್ತು ಅವತಾರಗಳ ಜತೆಗೆ ಇನ್ನೂ ಹಲವು ಅವತಾರಗಳನ್ನು ಕಣ್ತುಂಬಿಕೊಂಡಂತಾಯಿತು ಎಂದರು.

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪೋಷಕರು, ಶಿಕ್ಷಕರು ಹೆಚ್ಚಿನ ಪರಿಶ್ರಮ ಹಾಕಿ ಮಕ್ಕಳನ್ನು ಶ್ರೀಕೃಷ್ಣ ಹಲವು ಅವತಾರಗಳಲ್ಲಿ ಕರೆತಂದು ಭಾಗವಹಸಿದ್ದಾರೆ. ಮಕ್ಕಳಿಗೆ ಶ್ರೀಕೃಷ್ಣನಲ್ಲಿ ಇದ್ದಂತಹ ಒಳ್ಳೆಯ ಗುಣಗಳನ್ನು ಮೈಗೂಡಿಸಿ ಸಮಾಜದಲ್ಲಿ ಸನ್ಮಾರ್ಗದಲ್ಲಿ ನಡೆಸಿ ಸಮಾಜಕ್ಕೆ ಮಾದರಿ ಮಾಡಬೇಕು ಎಂದರು.

ಪತ್ರಕರ್ತ ಬಿ.ಎಸ್.ಜಯರಾಮು ಮಾತನಾಡಿ, ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳನ್ನು ವಿಶೇಷವಾಗಿ ಅಲಂಕಾರ ಮಾಡಿಕೊಂಡು ಬಂದಿರುವುದರಲ್ಲಿ ಪೋಷಕರ ಶ್ರಮ ಹೆಚ್ಚಿದೆ ಎಂದರು.

ಪತ್ರಕರ್ತ ಚನ್ನಮಾದೇಗೌಡ ಮಾತನಾಡಿ, ಸಮಾಜದಲ್ಲಿ ಅಶಾಂತಿ, ಅಧರ್ಮ ಸೃಷ್ಟಿಯಾದಾಗಲೆಲ್ಲ ವಿಷ್ಣು ಹಲವು ಅವತಾರಗಳನ್ನು ತಾಳಿ ದುಷ್ಟರನ್ನು ಸಂಹರಿಸಿ ಶಾಂತಿ ನೆಲೆಸಿದ್ದಾರೆ. ಶ್ರೀಕೃಷ್ಣ ಸದಾ ಸಮಾಜದಲ್ಲಿ ಶಾಂತಿ ನೆಲೆಸುವುದಕ್ಕಾಗಿ ಅವತಾರ ತಾಳಿ ಧರ್ಮದ ಪರವಾಗಿ ಇದ್ದವರು. ಹಾಗಾಗಿ ಪೋಷಕರು ಮಕ್ಕಳಿಗೆ ಶ್ರೀಕೃಷ್ಣನ ಆದರ್ಶಗಳನ್ನು ಮೈಗೂಡಿಸಿ ಸಂಸ್ಕಾರ ಕಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ವೀರಶೈವ ಮುಖಂಡ ಎಸ್.ಎ.ಮಲ್ಲೇಶ್, ಸಿ.ಆರ್.ರಮೇಶ್, ನಾಗಸುಂದರ್, ರವಿಕುಮಾರ್, ಕೃಷ್ಣೇಗೌಡ, ಮಧು, ಮಂಜು ಹಾಜರಿದ್ದರು.