ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕಿನ ಇತಿಹಾಸ ಪ್ರಸಿದ್ಧ ಅಳಿಲಘಟ್ಟ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿಯ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ನಡುವೆ ಬುಧವಾರ ಅದ್ಧೂರಿಯಾಗಿ ಜರುಗಿತು. ಬ್ರಹ್ಮರಥೋತ್ಸವದ ಪ್ರಯುಕ್ತ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿಗೆ ಬೆಳಿಗ್ಗೆ ಸುಪ್ರಭಾತ ಸೇವೆ, ಅಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ಸಾಗಸಂದ್ರ ಶ್ರೀ ಕೆಂಪಮ್ಮ ದೇವಿಯ ಆಗಮನದೊಂದಿಗೆ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ಹಾಗೂ ಶ್ರೀ ಕೆಂಪಮ್ಮ ದೇವಿಯ ಉತ್ಸವದೊಂದಿಗೆ ಬ್ರಹ್ಮ ರಥೋತ್ಸವಕ್ಕೆ ಆಗಮಿಸಿತು. ಮಧ್ಯಾಹ್ನ ಆರಂಭವಾದ ಬ್ರಹ್ಮ ರಥೋತ್ಸವಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಸುಡು ಬಿಸಿಲು ಲೆಕ್ಕಿಸದೆ ಜೈ ಘೋಷಣೆ ಕೂಗುತ್ತಾ ಬ್ರಹ್ಮ ರಥೋತ್ಸವ ಎಳಿದು ಭಕ್ತಿರು ದೇವರ ಕೃಪೆಗ ಪಾತ್ರರಾದರು. ರಥಕ್ಕೆ ಬಾಳೆಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು. ರಥೋತ್ಸವದಲ್ಲಿ ಭಾಗವಹಿಸಿದ ಭಕ್ತಾಧಿಗಳಿಗೆ ಅಲ್ಲಲ್ಲಿ ಪಾನಕ ಫಲಹಾರ ಹಾಗೂ ಮಜ್ಜಿಗೆಯನ್ನು ಉತ್ತರಿಸಲಾಯಿತು. ಇದೇ ಸಂದರ್ಭದಲ್ಲಿ ಮುಖಂಡರಾದ ಪುಟ್ಟರಾಜು, ನಾಗೇಶ್, ಶ್ರೀನಿವಾಸ್, ಲೋಕೇಶ್, ನಾಗಪ್ಪ, ಕೆಂಪರಾಜು ,ಗೋಪಾಲಶೆಟ್ಟಿ, ಕಾಂತರಾಜು ಗೋಪಿನಾಥ್ , ಅರ್ಚಕ ಹರೀಶ್ ದೇವಾಲಯ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.