ಪ್ಯಾಟಮ್ ಪ್ಯಾಸ್ಕುೃಲ್ ನೇತೃತ್ವದ ಶ್ರೀಲಂಕಾ ಅಧಿಕಾರಿಗಳ ಹಾಗೂ ಪತ್ರಕರ್ತರ ನಿಯೋಗ ಶನಿವಾರ ಮಂಗಳೂರು ಪ್ರೆಸ್ ಕ್ಲಬ್‌ಗೆ ಭೇಟಿ ನೀಡಿತು.
ಮಂಗಳೂರು: ಶ್ರೀಲಂಕಾದ ಆರ್ಥಿಕ ಸಚಿವಾಲಯದ ಮಾಜಿ ಮಾಧ್ಯಮ ಕಾರ್ಯದರ್ಶಿ, ಏಷ್ಯನ್ ಮೀಡಿಯಾ ಮತ್ತು ಕಲ್ಚರಲ್ ಎಸೋಸಿಯೇಶನ್ ಅಧ್ಯಕ್ಷ ಪ್ಯಾಟಮ್ ಪ್ಯಾಸ್ಕುೃಲ್ ನೇತೃತ್ವದ ಶ್ರೀಲಂಕಾ ಅಧಿಕಾರಿಗಳ ಹಾಗೂ ಪತ್ರಕರ್ತರ ನಿಯೋಗ ಶನಿವಾರ ಮಂಗಳೂರು ಪ್ರೆಸ್ ಕ್ಲಬ್‌ಗೆ ಭೇಟಿ ನೀಡಿತು.ಪತ್ರಕರ್ತರ ಜತೆ ಸಂವಾದ ನಡೆಸಿದ ನಿಯೋಗದ ಸದಸ್ಯ, ಶ್ರೀಲಂಕಾ ಪ್ರಧಾನಿ ಕಚೇರಿಯ ಮಾಜಿ ಮಾಧ್ಯಮ ಕಾರ್ಯದರ್ಶಿ ನಿಶಾಂತ ಆಲ್ವಿಸ್ ಮಾತನಾಡಿ, ಶ್ರೀಲಂಕಾಕ್ಕೆ ಸಂಕಷ್ಟ ಎದುರಾದಾಗಲೆಲ್ಲ ಭಾರತ ನೆರವಿಗೆ ಬಂದಿದೆ. ಕೊರೋನಾ, ಚಂಡಮಾರುತ, ಪ್ರವಾಹ ಸಂದರ್ಭಗಳಲ್ಲಿ ಭಾರತದ ಸಹಾಯ ಹಸ್ತವನ್ನು ಎಂದೂ ಮರೆಯುವಂತಿಲ್ಲ. ಭಾರತ ಮತ್ತು ಶ್ರೀಲಂಕಾ ಮಧ್ಯೆ ಇರುವ ಅವಿನಾಭಾವ ಸಂಬಂಧವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಜವಾಬ್ದಾರಿ ಉಭಯ ದೇಶಗಳ ಪ್ರಜೆಗಳ ಮೇಲಿದೆ ಎಂದರು.ಶ್ರೀಲಂಕಾದ ಹಿರಿಯ ಪತ್ರಕರ್ತರಾದ ಸಂಜೀವ ತಿಸೇರಾ, ಹೇಮಂತ ಕುಮಾರಸಿಂಗೆ, ದಾಮಿಸಿರಿ ಅಜಿತ್, ತುಷಾರ ಹೆಟ್ಟಿರಾಚಿ ನಿಯೋಗದ ಇತರ ಸದಸ್ಯರಾಗಿದ್ದರು. ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಪ್ರಧಾನ ಕಾರ್ಯದರ್ಶಿ ರಾಜೇಶ್ ಕೆ..ಪೂಜಾರಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ನಿಯೋಗದ ಸದಸ್ಯರನ್ನು ಗೌರವಿಸಿದರು.
ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಆರಿಫ್ ಪಡುಬಿದ್ರಿ, ವಿಲ್ಪ್ರೆಡ್ ಡಿಸೋಜಾ, ಖಜಾಂಚಿ ವಿಜಯ ಕೋಟ್ಯಾನ್, ಕಾರ್ಯದರ್ಶಿ ಸತೀಶ್ ಇರಾ, ಜೀವನ್, ದಯಾ ಕುಕ್ಕಾಜೆ, ಸಂದೀಪ್ ಕುಮಾರ್ ಎಂ, ಭಾಸ್ಕರ ರೈ ಕಟ್ಟ, ಪ್ರಣಾಮ್, ಅಭಿಜಿತ್ ಕೊಲ್ಪೆ ಇದ್ದರು. ಹಿರಿಯ ಪತ್ರಕರ್ತ ರಾಮಚಂದ್ರ ಭಂಡಾರ್ಕಾರ್ ಇದ್ದರು.