ಸಾರಾಂಶ
ಕೊಲಕಾಡಿ ಕುಂಜಾರಗಿರಿ ಶ್ರೀ ಮಹಾಲಿಂಗೇಶ್ವರ ಶಾಸ್ತಾವು ದೇವಸ್ಥಾನದ ಕಲ್ಲಬೆಟ್ಟು ದಿ. ಅಪ್ಪಿ ಪುಟ್ಟಣ್ಣ ಶೆಟ್ಟಿ ವೇದಿಕೆಯಲ್ಲಿ ಕೊಲಕಾಡಿ ಕುಂಜಾರಗಿರಿ ಶ್ರೀ ಮಹಾಲಿಂಗೇಶ್ವರ ಶಾಸ್ತಾವು ಸೇವಾ ಯುವಕ ಸಂಘದ ವಾರ್ಷಿಕೋತ್ಸವ ನೆರವೇರಿತು.
ಕನ್ನಡಪ್ರ ಭವಾರ್ತೆ ಮೂಲ್ಕಿ
ಯುವ ಜನಾಂಗ ಸಂಸ್ಕಾರ, ಸಂಸ್ಕೃತಿ ಬೆಳೆಸಿಕೊಂಡು ಧಾರ್ಮಿಕತೆ ಮೈಗೂಡಿಸಿಕೊಂಡು ಧರ್ಮ ರಕ್ಷಣೆ ಮಾಡಿದರೆ ಜೀವನದಲ್ಲಿ ಸಾಧಕರಾಗಲು ಸಾಧ್ಯ ಎಂದು ಕೊಲಕಾಡಿ ಕುಂಜಾರಗಿರಿ ಶ್ರೀ ಮಹಾಲಿಂಗೇಶ್ವರ ಶಾಸ್ತಾವು ದೇವಳದ ಅರ್ಚಕ ಶ್ರೀಕಾಂತ್ ಭಟ್ ಕೊಲಕಾಡಿ ಹೇಳಿದ್ದಾರೆ.ಕೊಲಕಾಡಿ ಕುಂಜಾರಗಿರಿ ಶ್ರೀ ಮಹಾಲಿಂಗೇಶ್ವರ ಶಾಸ್ತಾವು ದೇವಸ್ಥಾನದ ಕಲ್ಲಬೆಟ್ಟು ದಿ. ಅಪ್ಪಿ ಪುಟ್ಟಣ್ಣ ಶೆಟ್ಟಿ ವೇದಿಕೆಯಲ್ಲಿ ನಡೆದ ಕೊಲಕಾಡಿ ಕುಂಜಾರಗಿರಿ ಶ್ರೀ ಮಹಾಲಿಂಗೇಶ್ವರ ಶಾಸ್ತಾವು ಸೇವಾ ಯುವಕ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ್ ಕೋಟ್ಯಾನ್ ನಡಿಕುದ್ರು ಅಧ್ಯಕ್ಷತೆ ವಹಿಸಿದ್ದರು.ಪಂಜಿನಡ್ಕ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶಂಕರ್ ಶೆಟ್ಟಿ ಶಿಮಂತೂರು ಹಾಗೂ ಹಿರಿಯ ಕೃಷಿಕ ಕಕ್ವ ಉಪ್ಪಿಕಳ ದಾಮೋದರ ಮೂಲ್ಯ ಅವರನ್ನು ಸನ್ಮಾನಿಸಲಾಯಿತು.
ಯುವಕ ಸಂಘದ ಗೋಪಿನಾಥ ಪಡಂಗ, ಗಂಗಾಧರ ಶೆಟ್ಟಿ, ಬರ್ಕೆ ತೋಟ, ಮಿಥೇಶ್ ಬಂಗೇರ ಅವರನ್ನು ಗೌರವಿಸಲಾಯಿತು.ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ತೋಕೂರು ಹಿಂದುಸ್ತಾನಿ ಸ. ಹಿ. ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ವನಿತಾ ಎಸ್. ಶೆಟ್ಟಿ, ಭಾರತೀಯ ಭೂಸೇನೆಯ ನಿವೃತ್ತ ಯೋಧ ಮಾಧವ ಪೂಜಾರಿ ಕಿಲ್ಪಾಡಿ, ಪ್ರಭಾ ಕೆ. ಬಂಗೇರ ಮುಂಬೈ, ಲಕ್ಷ್ಮಣ ಪೂಜಾರಿ, ತುಕಾರಾಮ ಶೆಟ್ಟಿ, ಯುವಕ ಸಂಘದ ಗೌರವಾಧ್ಯಕ್ಷರಾದ ರಂಗನಾಥ ಶೆಟ್ಟಿ, ಅಣ್ಣು ಕೋಟ್ಯಾನ್, ಅಧ್ಯಕ್ಷ ಅನಿಲ್ ಕುಮಾರ್ ಮತ್ತಿತರರು ಇದ್ದರು.
ಅನನ್ಯ ಪ್ರಾರ್ಥಿಸಿದರು ಅನಿಲ್ ಕುಮಾರ್ ಸ್ವಾಗತಿಸಿದರು. ದಿವಾಕರ ಕಕ್ವ ವಂದಿಸಿದರು. ಚಿದಾನಂದ ಕೊಲಕಾಡಿ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.