ಮಂಡ್ಯ ತಾಲೂಕಿನ ಹೊಳಲು ಗ್ರಾಮದ ಶ್ರೀಆಂಜನೇಯ ಸರ್ಕಲ್, ಎಚ್.ಎಂ.ನಾಯಕರ ಸರ್ಕಲ್ ಹಾಗೂ ಶ್ರೀಸಿದ್ದಪ್ಪಾಜಿ ದೇವಸ್ಥಾನದಲ್ಲಿ ಶ್ರೀರಾಮ ಆಂಜನೇಯ ಭಕ್ತ ಸಮಿತಿಯಿಂದ ಶ್ರೀರಾಮನವಮಿ ಅಂಗವಾಗಿ ದೇವರಿಗೆ ವಿಶೇಷ ಪೂಜೆ, ಅಪ್ಪುವಿನ ಭಾವಚಿತ್ರಕ್ಕೂ ಸಹ ಪೂಜೆ ಮಾಡಿ ಭಕ್ತಾದಿಗಳಿಗೆ ಮಜ್ಜಿಗೆ, ಪಾನಕ, ಕೋಸಂಬರಿ, ಹಾಗೂ ಸಿಹಿತಿಂಡಿಯನ್ನು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಹೊಳಲು ಗ್ರಾಮದ ಶ್ರೀಆಂಜನೇಯ ಸರ್ಕಲ್, ಎಚ್.ಎಂ.ನಾಯಕರ ಸರ್ಕಲ್ ಹಾಗೂ ಶ್ರೀಸಿದ್ದಪ್ಪಾಜಿ ದೇವಸ್ಥಾನದಲ್ಲಿ ಶ್ರೀರಾಮ ಆಂಜನೇಯ ಭಕ್ತ ಸಮಿತಿಯಿಂದ ಶ್ರೀರಾಮನವಮಿ ಅಂಗವಾಗಿ ದೇವರಿಗೆ ವಿಶೇಷ ಪೂಜೆ, ಅಪ್ಪುವಿನ ಭಾವಚಿತ್ರಕ್ಕೂ ಸಹ ಪೂಜೆ ಮಾಡಿ ಭಕ್ತಾದಿಗಳಿಗೆ ಮಜ್ಜಿಗೆ, ಪಾನಕ, ಕೋಸಂಬರಿ, ಹಾಗೂ ಸಿಹಿತಿಂಡಿಯನ್ನು ವಿತರಿಸಲಾಯಿತು.

ಈ ವೇಳೆ ಶ್ರೀರಾಮ ಸೇನೆ ಸಮಿತಿ ಸದಸ್ಯ ಜಯರಾಮ್, ಕಾರ್ತಿಕ್, ನವೀನ್, ಸಂಜು, ಭರತ್, ಗುರು , ಸಾಗರ್ , ಅನು,

ಕೃಷ್ಣ ಬೇಕರಿ, ಯೋಗೇಶ್, ಬಸವಚಾರಿ, ಸಂಪತ್, ಲಕ್ಷ್ಮಣ್, ವಿಕಾಸ್, ಬೋರಯ್ಯ , ಶಂಕರ್ , ಎಂ.ಪಿ. ಸಂತೋಷ್ ಹಾಗೂ ಹೊಳಲು ಗ್ರಾಮಸ್ಥರು, ಶ್ರೀರಾಮ ಸೇವಾ ಸಮಿತಿಯ ಸದಸ್ಯರು ಹಾಜರಿದ್ದರು.

ತಗ್ಗಹಳ್ಳಿಯಲ್ಲಿಯೂ ಶ್ರೀರಾಮನವಮಿ ಆಚರಣೆ

ಮಂಡ್ಯ:

ತಾಲೂಕಿನ ತಗ್ಗಹಳ್ಳಿಯಲ್ಲಿ ಗ್ರಾಮಸ್ಥರು ಶ್ರೀರಾಮನವಮಿ ಅಂಗವಾಗಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಗ್ರಾಮದ ಸರ್ಕಲ್‌ನಲ್ಲಿ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿದ ಗ್ರಾಮಸ್ಥರು, ವಿಶ್ವಮಾನವ ಕುವೆಂಪು ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಯುವಕರು ನಂತರ ಸಾರ್ವಜನಿಕರು, ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿದರು.

ಈ ವೇಳೆ ಕೇಬಲ್ ಮಂಜು, ರುದ್ರೇಶ್ , ಪ್ರದೀಪ್, ಸ್ವಾಮಿ, ಮಂಜೇಶ್ ಸೇರಿದಂತೆ, ತಗ್ಗಹಳ್ಳಿ, ಪುರ, ಕಮ್ಮನಾಯಕನಹಳ್ಳಿ, ಯಡಗನಹಳ್ಳಿ, ಗೋಪನಹಳ್ಳಿ ಸುತ್ತಾಮುತ್ತಲ ಗ್ರಾಮದ ಮುಖಂಡರು, ಯುವಕರು, ಮಕ್ಕಳು ಸೇರಿದಂತೆ ಹಲವರು ಇದ್ದರು.ಶ್ರೀರಾಮನವಮಿ ಮಜ್ಜಿಗೆ, ಪಾನಕ ಹಾಗೂ ಕೋಸಂಬರಿ ವಿತರಣೆ

ಕನ್ನಡಪ್ರಭ ವಾರ್ತೆ ಪಾಂಡವಪುರ

ಶ್ರೀರಾಮನವಮಿ ಪ್ರಯುಕ್ತ ಪಟ್ಟಣದ ಹಿರೋಡೆಬೀದಿಯ ಶ್ರೀರಾಮಾಂಜನೇಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯಿಂದ ಮಜ್ಜಿಗೆ, ಪಾನಕ ಹಾಗೂ ಕೋಸಂಬರಿಯನ್ನು ವಿತರಿಸಲಾಯಿತು.

ಪಟೇಲ್ ಪ್ರಸಾದ್ ಮತ್ತವರ ಕುಟುಂಬ ಶ್ರೀರಾಮಾಂಜನೇಯ ಹಾಗೂ ಶ್ರೀರಾಮ ಮಂದಿರದ ವಿಶೇಷ ಪೂಜೆ ಸಲ್ಲಿಸಿದರು. ಮಹಾ ಮಂಗಳಾರತಿ ಬಳಿಕ ಭಕ್ತಾದಿಗಳಿಗೆ ಮಜ್ಜಿಗೆ, ಪಾನಕ ಹಾಗೂ ಕೋಸಂಬರಿ ವಿತರಿಸಲಾಯಿತು.

ಈ ವೇಳೆ ತಹಸೀಲ್ದಾರ್ ಎಸ್.ಸಂತೋಶ್, ಯಜಮಾನರಾದ ಶಿವಣ್ಣ, ಚಂದ್ರೇಗೌಡ, ಪುರಸಭೆ ಮಾಜಿ ಸದಸ್ಯ ಪಿ.ಎಸ್.ಲಿಂಗರಾಜು (ಗುಣ), ಉಮಶಂಕರ್, ಪೇಟ್ರೋಲ್‌ ಬಾಂಕ್ ರಮೇಶ್, ಗೀರಿಶ್, ಸದಸ್ಯ ಆರ್.ಸೋಮಶೇಖರ್, ದೀಲಿಪ್ಪ, ಚಂದ್ರಶೇಖರ್, ಅರ್ಚಕರಾದ ನಾಗಣ್ಣ, ನರಹರಿ, ಗುರು ಇತರರಿದ್ದರು. ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶ್ರೀರಾಮನವಮಿ ಆಚರಣೆ ಮಾಡಲಾಯಿತು.