ಸಾರಾಂಶ
ತೋಟ್ಟಿಲೋತ್ಸವವು ಅಪಾರ ಮಹಿಳೆಯರು ಜೋಗುಳ ಹಾಡುವ ಮೂಲಕ ತೋಟ್ಟಿಲೋತ್ಸವ ಸಂಭ್ರಮದಿಂದ ನಡೆಸಿದರು
ಗಜೇಂದ್ರಗಡ: ಸ್ಥಳೀಯ ಗಂಜಿಪೇಟೆಯ ಸೀತಾರಾಮದೇವರ ದೇವಸ್ಥಾನದಲ್ಲಿ ಬುಧವಾರ ಶ್ರೀರಾಮ ನವಮಿಯನ್ನು ಸಕಲ ಸದ್ಭಕ್ತರು ವೈಭವ ಪೂರ್ವಕವಾಗಿ ಆಚರಿಸಿದರು.
ಶ್ರೀರಾಮ ಉತ್ಸವದ ಪ್ರಯುಕ್ತ ಬೆಳಗ್ಗೆ ಭಜನಾ ಸಪ್ತಾಹದೊಂದಿಗೆ ಅಖಂಡ ನಾಮಸ್ಮರಣೆ ಹಾಗೂ ರಾಮಾಯಣ ಪ್ರವಚನ ನಡೆಯಿತು.ಗುರು ಜಗನ್ನಾಥದಾಸರ ಭಜನಾ ಮಂಡಳಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀರಾಮನ ಉತ್ಸವ ಮೂರ್ತಿಯೊಂದಿಗೆ ಪಲ್ಲಕ್ಕಿ ಉತ್ಸವದ ಮರವಣಿಗೆ ಕಳಸದೊಂದಿಗೆ ಸಕಲ ಸದ್ಭಕ್ತರು ವೈಭವದಿಂದ ಮೆರವಣಿಗೆ ನಡೆಸಿದರು.
ನಂತರ ಅಪಾರ ಮಹಿಳೆಯರು ಶ್ರೀರಾಮನ ತೋಟ್ಟಿಲೋತ್ಸವು ಸಂಭ್ರಮದಿಂದ ನೆರವೇರಿಸಿದರು. ಬಳಿಕ ದೇವಸ್ಥಾನದಲ್ಲಿ ಕೋಸಂಬರಿ, ಪಾನಕ ವಿನಿಯೋಗ ಮಾಡಲಾಯಿತು. ಸಕಲ ಸದ್ಭಕ್ತರು ಆಗಮಿಸಿ ಶ್ರೀರಾಮನ ಕೃಪೆಗೆ ಪಾತ್ರರಾದರು. ಸ್ಥಳೀಯ ಅಗಸಿ ಬಳಿಯ ಹನುಮಂತ ದೇವರ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರದಲ್ಲಿ ಶ್ರೀರಾಮನಾಮ ಸ್ಮರಣೆಯನ್ನು ಭಕ್ತರು ನಡೆಸಿದರು. ವಿಶೇಷ ಪೂಜೆ, ಅಲಂಕಾರ, ಅಭಿಷೇಕ, ಪಟ್ಟಾಭಿಷೇಕ, ಸೀತಾ ಕಲ್ಯಾಣ, ಉತ್ಸವಗಳು ನಡೆಸಿದರು.ಶ್ರದ್ಧಾಭಕ್ತಿಯಿಂದ ಶ್ರೀರಾಮನವಮಿ ಆಚರಣೆ:
ಪಟ್ಟಣದ ಪತ್ತಾರಗಲ್ಲಿಯ ವಿಶ್ವನಾಥ ಸೀತಾ ರಾಮಚಂದ್ರ ಮಂದಿರ ಹಾಗೂ ಗಂಜಿಪೇಟೆ ಶ್ರೀರಾಮ ದೇವರ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಉತ್ಸವವನ್ನು ಸಕಲ ಸದ್ಭಕ್ತರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.ಇಲ್ಲಿನ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ಭಜನಾ ಸಪ್ತಾಹ ಅಖಂಡ ನಾಮಸ್ಮರಣೆ ಹಾಗೂ ರಾಮಾಯಣ ಪ್ರವಚನ ಅಂತ್ಯಗೊಳಿಸಲಾಯಿತು ಹಾಗೂ ಬೆಳಗ್ಗೆ ಶ್ರೀರಾಮ, ರುದ್ರ ದೇವರಿಗೆ ರುದ್ರಾಭಿಷೇಕ ಪೂಜೆಯೊಂದಿಗೆ ವಿಶೇಷ ಅಲಂಕಾರಿಕ ಪೂಜೆ ಹಾಗೂ ಶ್ರೀರಾಮನ ತೋಟ್ಟಿಲೋತ್ಸವವು ಅಪಾರ ಮಹಿಳೆಯರು ಜೋಗುಳ ಹಾಡುವ ಮೂಲಕ ತೋಟ್ಟಿಲೋತ್ಸವ ಸಂಭ್ರಮದಿಂದ ನಡೆಸಿದರು. ನಂತರ ರಾಮಚಂದ್ರ ಗಾಡಗೋಳಿ ಇವರಿಂದ ಪ್ರವಚನ ನಡೆಯಿತು.
ಕಲ್ಲಿನಾಥ ಜೀರೆ, ಶ್ರೀನಿವಾಸ ತೈಲಂಗ, ರಘುನಾಥಭಟ್ಟ ತಾಸಿನ, ಕೆ.ಸತ್ಯನಾರಯಣಭಟ್ಟ, ಕೃಷ್ಣಾಚಾರ್ಯ ಇಟಗಿ, ಸಂಜೀವ ಜೋಶಿ, ವಾಸು ಕುಲಕರ್ಣಿ, ಲಕ್ಷ್ಮೀಕಾಂತ ಗಾಡಗೋಳಿ, ಕೆ. ಸತ್ಯನಾರಾಯಣಭಟ್ಟ, ರಾಮಚಂದ್ರ ರಾಜಪುರೋಹಿತ ಸೇರಿದಂತೆ ಸಕಲ ಸದ್ಭಕ್ತರು ಭಾಗವಹಿಸಿ ಕೋಸಂಬರಿ, ಪಾನಕ, ಅಲ್ಪೋಪಹಾರದೊಂದಿಗೆ ತೀರ್ಥ, ಪ್ರಸಾದ ಸ್ವೀಕರಿಸಿ ಶ್ರೀರಾಮನ ಕೃಪೆಗೆ ಪಾತ್ರರಾದರು.