ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲಶ್ರೀರಾಮ ಸಾಕ್ಷಾತ್ ಭಗವಂತನ ಅವತಾರವಾಗಿದ್ದರೂ ತನ್ನ ಬದುಕಿನುದ್ದಕ್ಕೂ ಸಾಮಾನ್ಯ ಮನುಷ್ಯನಂತೆ ಬದುಕಿ ಸದಾ ನ್ಯಾಯ, ನೀತಿ, ಸತ್ಯ, ಧರ್ಮದ ಮಾರ್ಗದಲ್ಲಿ ನಡೆದು ಇಡೀ ಮನುಕುಲಕ್ಕೆ ಆದರ್ಶಪ್ರಾಯರಾಗಿದ್ದಾರೆಂದು ಶಾಖಾ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ಹೇಳಿದರು.
ಬುಧವಾರ ಪಟ್ಟಣದ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ವಿಶ್ವಹಿಂದೂ ಪರಿಷತ್, ಭಜರಂಗದಳದಿಂದ ಆಯೋಜಿಸಿದ್ದ ಶ್ರೀರಾಮ ನವಮಿ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಮನುಷ್ಯ ತನ್ನ ನಿತ್ಯ ಜೀವನದಲ್ಲಿ ಸನ್ಮಾರ್ಗದತ್ತ ನಡೆದು ಧರ್ಮದ ತಳಹದಿಯಲ್ಲಿ ಬದುಕಿದಾಗ ಮಾತ್ರ ಧರ್ಮ ನಮ್ಮನ್ನು ಸಂರಕ್ಷಣೆ ಮಾಡುತ್ತದೆ. ಇಂದಿನ ಯುವಕರು ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣೆಗೆ ಮಾರುಹೋಗದೆ ಸನಾತನ ಸಂಸ್ಕೃತಿಯತ್ತ ಒಲವು ತೋರುವುದು ಅತ್ಯವಶ್ಯವಾಗಿದೆ ಎಂದರು.ವೀರೇಶ ಶಾಸ್ತ್ರಿ ನಂದಿಹಳ್ಳಿಮಠ ಪೂಜಾ ವಿಧಿ-ವಿಧಾನ ನೆರವೇರಿಸಿದರು. ಪ್ರಮೋದಕುಮಾರ ವಕ್ಕುಂದಮಠ, ಕಾಶಿನಾಥ ಬಿರಾದಾರ, ವಿಜಯ ಮೆಟಗುಡ್ಡ, ಬಸವರಾಜ ಜನ್ಮಟ್ಟಿ, ಬಿ.ಬಿ. ಗಣಾಚಾರಿ, ಮಹಾಂತೇಶ ತುರಮರಿ, ಗೌತಮ ಇಂಚಲ, ನಾರಾಯಣ ನಲವಡೆ, ಡಾ.ಸಾಗರ ಕುಲಕರ್ಣಿ, ಮಹಾಂತೇಶ ಮತ್ತಿಕೊಪ್ಪ, ಮಲ್ಲಿಕಾರ್ಜುನ ಏಣಗಿಮಠ, ಬಸವರಾಜ ಹಣಸಿ, ವಿಜಯ ಪತ್ತಾರ, ಮಹಾಂತೇಶ ಮಾತನವರ, ಮಂಜುನಾಥ ಆದರಗಿ, ಮಹೇಶ ಜಾಧವ, ರಾಜು ಕಟ್ಟಮನಿ, ಅಶೋಕ ಸವದತ್ತಿ, ರಾಜಶೇಖರ ಹರಕುಣಿ, ಸುಭಾಷ ತುರಮರಿ, ಚನ್ನಪ್ಪ ಹಾದಿಮನಿ, ಶ್ರೀಶೈಲ ಇಂಚಲ, ಜಗದೀಶ ಲೋಕಾಪೂರ, ಸಂಗಮೇಶ ಕಾದ್ರೊಳ್ಳಿ, ಶ್ರೀಕಾಂತ ಶಿರಹಟ್ಟಿ, ಸಂತೋಷ ಪಶುಪತಿಮಠ, ಪುಟ್ಟು ಬೆಟಗೇರಿ, ಅರವಿಂದ ಬೆಟಗೇರಿ, ರಾಜು ಬಡಿಗೇರ, ಕೃಷ್ಣಾ ಬಸ್ಮೆ, ಸುಧೀರ ಮಾಳೋದೆ ಮುಂತಾದವರು ಇದ್ದರು. ಪಾನಕ ಮತ್ತು ಜಿಲೇಬಿ ವಿತರಿಸಲಾಯಿತು.