ಶ್ರೀರಾಮ ಮಹಿಮಾ ಪುರುಷ: ಶಾಸಕ ವಿಜಯಾನಂದ ಕಾಶಪ್ಪನವರ

| Published : Jan 23 2024, 01:45 AM IST

ಸಾರಾಂಶ

ಇಳಕಲ್ಲ: ರಾಮನ ಮಹಿಮೆ ಜಗತ್ತಿನಲ್ಲೇ ಪ್ರಸಿದ್ಧಿಯಾಗಿದೆ. ಆತ ಮಹಿಮಾ ಪುರುಷ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ರಾಮಲಲ್ಲಾ ಪ್ರತಿಷ್ಠಾಪನೆ ದಿನವಾದ ಸೋಮವಾರ ಇಳಕಲ್ಲ ನಗರದ ಮಾಹೇಶ್ವರಿ ಸಮಾಜದ ರಾಮ ಮಂದಿರದಲ್ಲಿ ರಾಮ, ಸೀತಾ, ಲಕ್ಷ್ಮಣ ಹಾಗೂ ಹನುಮಂತ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಿ ರಾಜ್ಯದ ಜನರನ್ನು ಸಂತಸ, ಸಮೃದ್ಧಿಯಾಗಿ ಇಡುವಂತೆ ದೇವರಲ್ಲಿ ಪ್ರಾರ್ಥಿಸಿದರು. ನಂತರ ಮಾಹೇಶ್ವರಿ ಸಮಾಜದ ಹತ್ತು ಸಾವಿರಕ್ಕೂ ಅಧಿಕ ಜನರೊಂದಿಗೆ ಭಾವಚಿತ್ರದ ಭವ್ಯ ಮೆರವಣಿಗೆಯಲ್ಲಿ ಭಜನೆಗಳನ್ನು ಮಾಡುತ್ತ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ರಾಮನ ಮಹಿಮೆ ಜಗತ್ತಿನಲ್ಲೇ ಪ್ರಸಿದ್ಧಿಯಾಗಿದೆ. ಆತ ಮಹಿಮಾ ಪುರುಷ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ರಾಮಲಲ್ಲಾ ಪ್ರತಿಷ್ಠಾಪನೆ ದಿನವಾದ ಸೋಮವಾರ ಇಳಕಲ್ಲ ನಗರದ ಮಾಹೇಶ್ವರಿ ಸಮಾಜದ ರಾಮ ಮಂದಿರದಲ್ಲಿ ರಾಮ, ಸೀತಾ, ಲಕ್ಷ್ಮಣ ಹಾಗೂ ಹನುಮಂತ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಿ ರಾಜ್ಯದ ಜನರನ್ನು ಸಂತಸ, ಸಮೃದ್ಧಿಯಾಗಿ ಇಡುವಂತೆ ದೇವರಲ್ಲಿ ಪ್ರಾರ್ಥಿಸಿದರು. ನಂತರ ಮಾಹೇಶ್ವರಿ ಸಮಾಜದ ಹತ್ತು ಸಾವಿರಕ್ಕೂ ಅಧಿಕ ಜನರೊಂದಿಗೆ ಭಾವಚಿತ್ರದ ಭವ್ಯ ಮೆರವಣಿಗೆಯಲ್ಲಿ ಭಜನೆಗಳನ್ನು ಮಾಡುತ್ತ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಭ್ರಮಿಸಿದರು.

ಶಾಸಕರ ಜೊತೆ ರಾಜು ಬೋರಾ, ದೇವಾನಂದ ಕಾಶಪ್ಪನವರ, ಗೋವಿಂದ ಕರವಾ, ನಂದು ಕರವಾ ಹಾಗೂ ಮಾಹೇಶ್ವರಿ ಸಮಾಜದ ಸಾವಿರಾರು ಪ್ರಮುಖರು, ತಾಯಂದಿರು, ಯುವಕರು ಪಾಲ್ಗೊಂಡಿದ್ದರು. ರಾಮ, ಸೀತಾ, ಲಕ್ಷ್ಮಣ ವೇಷಧಾರಿ ಮಕ್ಕಳು ಸಹ ಮೆರವಣಿಗೆಗೆ ಮೆರಗು ತಂದರು. ಮೆರವಣಿಗೆ ರಾಮ ಮಂದಿರದಿಂದ ಹೋರಟು ಸಾಲಪೇಟ, ಕಂಠಿ ವೃತ, ಗ್ರಾಮ ಚಾವಡಿ ಮೂಲಕ ಗಾಂಧಿ ಚೌಕ, ಮುಖ್ಯ ಬಜಾರ್‌ ಬಸವಣ್ಣ ದೇವರ ಗುಡಿ ಎದುರಿನಿಂದ ಹೊರಟು ರಾಮಮಂದಿರ ತಲುಪಿತು. ನಂತರ ಬಂದ ಎಲ್ಲ ರಾಮ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.