ಕನ್ನಡಪ್ರಭ ವಾರ್ತೆ ಶಿರಾ

ತಾಲೂಕು ಸೇರಿದಂತೆ ನಗರದಾದ್ಯಂತ ಶ್ರೀರಾಮ ನವಮಿ ಹಬ್ಬವನ್ನು ಸಡಗರ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ನಗರದ ಶ್ರೀರಾಮ ದೇವಾಲಯ, ಶ್ರೀ ಗವಿ ಆಂಜನೇಯ ದೇವಸ್ಥಾನ, ಶ್ರೀ ಸಾಕ್ಷಿ ಆಂಜನೇಯ ಸ್ವಾಮಿ ದೇವಸ್ಥಾನ, ನಗರದ ಜ್ಯೋತಿನಗರದಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನ, ಹಳೇ ತಾಲೂಕು ಕಚೇರಿ ಮುಂಭಾಗದ ಅಂಜನೇಯ ಸ್ವಾಮಿ ದೇವಸ್ಥಾನ, ಬಯಲು ಆಂಜನೇಯ ಸ್ವಾಮಿ ದೇವಸ್ಥಾನ, ಖಾಸಗಿ ಬಸ್ ನಿಲ್ದಾಣದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನ, ಬನ್ನಿ ನಗರದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನ ಸೇರಿದಂತೆ ನಗರದ ವಿವಿಧೆಡೆ ಭಕ್ತರು ಶ್ರೀರಾಮ ನಮವಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಿ ಬಳಿಕ ಕೋಸಂಬರಿ, ಪಾನಕ ವಿತರಿಸಿದರು.

ನಗರದ ರಿಯಲ್ ಎಸ್ಟೇಟ್ ಉದ್ಯಮಿಗಳಿಂದ ಹಳೆ ತಾಲೂಕು ಕಚೇರಿ ಮುಂಭಾಗ ಇರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಪಾನಕ ಕೋಸಂಬರಿ ವಿತರಿಸಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಪರಿಷತ್ ಸದಸ್ಯ ಆರ್.ಉಗ್ರೇಶ್, ಅಪ್ಪಿ ರಂಗನಾಥ್, ಗೋಪಾಲಕೃಷ್ಣ, ನಿಸರ್ಗ ಸುರೇಶ್, ನಿಜಲಿಂಗಪ್ಪ, ಲಕ್ಷ್ಮಣ ಶಾಸ್ತ್ರಿ, ಭೀಮಣ್ಣ, ದಯಾನಂದ, ರಮೇಶ್, ನಾಗರಾಜು, ಕಾರಳ್ಳಪ್ಪ, ಶಿವನಾಗ, ಲಿಂಗಣ್ಣ, ರಾಜಕುಮಾರ್ ನಾಯ್ಕ ಸೇರಿದಂತೆ ಹಲವರು ಭಾಗವಹಿಸಿದ್ದರು.೨೭ಶಿರಾ೧: ಶಿರಾ ನಗರದ ಹಳೇ ತಾಲೂಕು ಕಚೇರಿ ಮುಂಭಾಗದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಪಾನಕ ಕೋಸಂಬರಿ ವಿತರಿಸಲಾಯಿತು.