ಶ್ರೀರಾಮನ ನಂಬಿಕಸ್ತ ಭಂಟ ಆಂಜನೇಯ: ನಂಜಾವಧೂತ ಶ್ರೀ

| Published : Aug 10 2024, 01:34 AM IST

ಸಾರಾಂಶ

ಶ್ರೀ ಆಂಜನೇಯ ಸ್ವಾಮಿ ವ್ಯಕ್ತಿತ್ವ ಅತ್ಯಂತ ಆಕರ್ಷಣೆ, ವಿಶೇಷತೆಯಿಂದ ಕೂಡಿದೆ. ಶ್ರೀ ರಾಮನ ಮೇಲಿನ ಆಂಜನೇಯನ ಭಕ್ತಿ, ನಿಷ್ಠೆ ಮತ್ತೊಬ್ಬರಲ್ಲಿ ಕಾಣಲು ಸಾಧ್ಯವಿಲ್ಲ

ಕನ್ನಡಪ್ರಭ ವಾರ್ತೆ ಶಿರಾಶ್ರೀ ಆಂಜನೇಯ ಸ್ವಾಮಿ ವ್ಯಕ್ತಿತ್ವ ಅತ್ಯಂತ ಆಕರ್ಷಣೆ, ವಿಶೇಷತೆಯಿಂದ ಕೂಡಿದೆ. ಶ್ರೀ ರಾಮನ ಮೇಲಿನ ಆಂಜನೇಯನ ಭಕ್ತಿ, ನಿಷ್ಠೆ ಮತ್ತೊಬ್ಬರಲ್ಲಿ ಕಾಣಲು ಸಾಧ್ಯವಿಲ್ಲ. ಆಂಜನೇಯನಿಗೆ ಸ್ವಾರ್ಥವೇ ಇರಲಿಲ್ಲ, ಎಲ್ಲವೂ ಶ್ರೀ ರಾಮನೇ ಆಗಿದ್ದ ಒಬ್ಬ ನಂಬಿಕಸ್ಥ ಭಂಟ ವಿಶ್ವದಲ್ಲಿ ಯಾರಾದರೂ ಇದ್ದರೆ ಅದು ಆಂಜನೇಯ ಮಾತ್ರ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು. ಅವರು ತಾಲೂಕಿನ ಗಜಮಾರನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ಶ್ರೀ ವೀರಾಂಜನೇಯ ಸ್ವಾಮಿಯ ನೂತನ ಚರಬಿಂಬ, ಗೋಪುರ ಕಳಸ, ಪ್ರತಿಷ್ಠಾಪನೆ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡು ನೂತನ ಕಳಸ ಪ್ರತಿಷ್ಠಾಪನೆ ಮಹೋತ್ಸವ ನೆರವೇರಿಸಿ ಭಕ್ತರಿಗೆ ಆರ್ಶೀವಚನ ನೀಡಿದರು. ನಿಷ್ಠೆ ಪ್ರಾಮಾಣಿಕತೆಯಿಂದಲೇ ಭಕ್ತರ ಆರಾಧ್ಯ ದೈವವಾಗಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಗಳು ದೇಶದಲ್ಲಿ ಹೆಚ್ಚು ಕಂಡು ಬರುತ್ತವೆ. ನಾವು ಮಾಡುವ ಸೇವೆಗಳು ನಿಸ್ವಾರ್ಥತೆಯಿಂದ ಕೂಡಿ ಸಮಾಜಮುಖಿ ಚಿಂತನೆ ಉಳ್ಳ ವ್ಯಕ್ತಿತ್ವ ತಮ್ಮದಾದರೆ ನಿಮ್ಮನ್ನು ದೇವರು ಕೈ ಹಿಡಿದು ಮುನ್ನಡೆಸುತ್ತಾನೆ. ಇಡೀ ಬ್ರಹ್ಮಾಂಡವನ್ನು ಮುನ್ನಡೆಸುವ ಕಾಣದ ಶಕ್ತಿಯೇ ದೈವ ಎಂದರು. ಜೆಡಿಎಸ್ ರಾಜ್ಯ ಪರಿಷತ್‌ ಸದಸ್ಯ ಆರ್. ಉಗ್ರೇಶ್ ಮಾತನಾಡಿ ಎಲ್ಲರೂ ಒಗ್ಗೂಡಿ ಗ್ರಾಮದಲ್ಲಿ ದೇವತಾ ಉತ್ಸವ ನಡೆಸಿ ಯಶಸ್ವಿಗೊಳಿಸಿದಾಗ ದೇವರು ಸಂತೃಪ್ತನಾಗಲಿದ್ದು, ಗ್ರಾಮಗಳಲ್ಲಿ ನೆಮ್ಮದಿ ಬದುಕಿಗೆ ಭದ್ರ ಬುನಾದಿ ದೊರಕಲಿದೆ ಎಂದರು. ಈ ಸಂದರ್ಭದಲ್ಲಿ ಕೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಮಲಾಕ್ಷಿ ರಾಮಣ್ಣ, ಉಪಾಧ್ಯಕ್ಷೆ ರಾಧಮಣಿ ರಂಗನಾಥ್, ಮುಖಂಡರಾದ ರಾಮಲಿಂಗಪ್ಪ , ವಕೀಲ ರಾಜಣ್ಣ, ಹರಿಕೃಷ್ಣ, ಜಿ.ಟಿ. ಚಿಕ್ಕಣ್ಣ, ಲಿಂಗರಾಜು, ಚಂದ್ರ ಶೇಖರಯ್ಯ, ಬಪ್ಪರಾಯಪ್ಪ, ಜಿ.ಟಿ .ಲಕ್ಷ್ಮಿಕಾಂತ್, ದ್ಯಾಮಣ್ಣ, ಜಿ.ಟಿ. ರಂಗನಾಥ್ ಸೇರಿದಂತೆ ನೂರಾರು ಭಕ್ತರು ಹಾಜರಿದ್ದರು.