ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹಬ್ಬದ ಸಂಭ್ರಮ ಮನೆಮಾಡಿತ್ತು. ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಹಾಗೂ ರಾಮಮಂದಿರ ಉದ್ಘಾಟನೆ ಅದ್ಧೂರಿಯಾಗಿ ನಡೆಯುತ್ತಿದ್ದರೇ ಇತ್ತ ದೇವರಹಿಪ್ಪರಗಿ ಪಟ್ಟಣದ ಪುರಾತನ ಹನುಮಾನ್ ಮಂದಿರದಲ್ಲಿ ಬೆಳಗ್ಗೆಯಿಂದಲೇ ಪಟ್ಟಣದ ಪ್ರಮುಖರು ಆರ್‌ಎಸ್‌ಎಸ್ ಹಾಗೂ ವಿಎಚ್‌ಪಿ ತಾಲೂಕು ಘಟಕದಿಂದ ಪೂಜೆ, ಅಭಿಷೇಕ, ಭಜನೆ ಹಾಗೂ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.ಪಟ್ಟಣದ ಜಡೆಮಠದ ಜಡಿ ಸಿದ್ಧೇಶ್ವರ ಶಿವಾಚಾರ್ಯರು ಸಾನ್ನಿಧ್ಯ ಮಾತನಾಡಿ, ನಾಡಿನಾದ್ಯಂತ ಸುಖ, ಶಾಂತಿ, ಸಮೃದ್ಧಿ ಮತ್ತು ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿ ಶ್ರೀರಾಮಚಂದ್ರನ ಬೃಹತ್ ಭಾವಚಿತ್ರಕ್ಕೆ ಪೂಜ ಸಲ್ಲಿಸಿ ರಾಮನಾಮ ಜಪಿಸಿ ನಂತರ ಪ್ರಸಾದ ವಿತರಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣದ ಪ್ರಮುಖರಾದ ಡಾ.ಆರ್.ಆರ್.ನಾಯಕ, ರಮೇಶ ಯಾಳಗಿ, ನರೇಂದ್ರ ನಾಡಗೌಡ, ಗುರುರಾಜ ಕುಲಕರ್ಣಿ, ಸೋಮು ಹಿರೇಮಠ, ಪುನೀತಕುಮಾರ ಹಿಪ್ಪರಗಿ, ರಮೇಶ ಇಳಗೇರ, ರಮೇಶ ಮಾಶಾನವರ, ವಿಎಚ್‌ಪಿ ತಾಲೂಕು ಘಟಕದ ಅಧ್ಯಕ್ಷ ಶ್ರೀಧರ ನಾಡಗೌಡ, ಸುರೇಶ ಕುಂಬಾರ, ಸಂಘದ ಕಾರ್ಯವಾಹ ಗುರುರಾಜ ದೇಸಾಯಿ, ವೆಂಕಟೇಶ ಕುಲಕರ್ಣಿ, ಚೇತನ ಇಂಡಿ, ವೀರೇಶ ಭಾಸುತ್ಕಕ, ಚಿದಾನಂದ ಕುಂಬಾರ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು, ಸಂಘದ ಪದಾಧಿಕಾರಿಗಳು ಹಾಗೂ ಯುವಕರು ಉಪಸ್ಥಿತರಿದ್ದರು.ಮಣೂರ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀರಾಮೋತ್ಸವ:
ದೇವರಹಿಪ್ಪರಗಿ: ತಾಲೂಕಿನ ಮಣೂರ ಗ್ರಾಮದ ವೆಂಕಟೇಶ್ವರ ದೇವಸ್ಥಾನದಲ್ಲಿ ವೆಂಕಟೇಶ್ವರ ವಿದ್ಯಾವರ್ಧಕ ಸಂಸ್ಥೆಯ ವತಿಯಿಂದ ಶಾಲಾ ಆವರಣದಲ್ಲಿ ಶ್ರೀರಾಮೋತ್ಸವ ಆಚರಣೆ ಶ್ರದ್ಧಾ ಭಕ್ತಿ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.ಅಯೋಧ್ಯೆಯ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಾಗೂ ಮಂದಿರದ ಉದ್ಘಾಟನಾ ಕಾರ್ಯಕ್ರಮದ ಪ್ರಯುಕ್ತ ವೆಂಕಟೇಶ್ವರ ದೇವಸ್ಥಾನದ ಅರ್ಚಕರಾದ ಪವನ ಆಚಾರ ಕಟ್ಟಿ ಅವರಿಂದ ಶ್ರೀರಾಮನ ಪೂಜೆಯನ್ನು ಶಾಸ್ತ್ರೋಕ್ತವಾಗಿ ಸಲ್ಲಿಸುವ ಮೂಲಕ ಸಂಸ್ಥೆಯ ಅಧ್ಯಕ್ಷ ಎಲ್ .ಆರ್.ಅಂಗಡಿ ನೇತೃತ್ವದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಗ್ರಾಮದ ಪ್ರಮುಖರು, ಗಣ್ಯರು, ಭಕ್ತಾದಿಗಳು ಹಾಗೂ ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಶ್ರೀರಾಮೋತ್ಸವಕ್ಕೆ ಮೆರುಗು ತಂದಿತ್ತು. ನಂತರ ವಿದ್ಯಾರ್ಥಿಗಳು ಸಿಹಿ ಹಂಚಿ ಸಂತೋಷಪಟ್ಟರು.
ಹುಣಶ್ಯಾಳದಲ್ಲಿ ಶ್ರೀರಾಮನ ಭವ್ಯ ಮೆರವಣಿಗೆ:ದೇವರಹಿಪ್ಪರಗಿ: ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಶ್ರೀರಾಮನ ಭವ್ಯ ಮೆರವಣಿಗೆಯನ್ನು ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಯುವಕರು ಕೂಡಿಕೊಂಡು ಅದ್ಧೂರಿ ಉತ್ಸವದಲ್ಲಿ ಜಯ ಜಯ ರಾಮ ಶ್ರೀರಾಮ ಎಂಬ ಘೋಷಣೆಯೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಯಿತು.