ಸಾರಾಂಶ
‘ಅಕ್ಕಪಕ್ಕದ ಜನರು ಯಾವುದೇ ಧರ್ಮ, ಜಾತಿಯವರಾಗಿರಲಿ, ಅವರು ಸಂಕಟದಲ್ಲಿದ್ದಾಗ ನೀನು ಸಂತೋಷಪಡಬೇಡ’ ಎಂಬುದನ್ನು ನಮ್ಮ ಸನಾತನ ಧರ್ಮ ಬೋಧಿಸಿದೆ. ಇಂತಹ ತತ್ವ ಸಿದ್ಧಾಂತಗಳಿಂದ ಭಾರತವನ್ನು ಇಡೀ ಜಗತ್ತು ಗುರುಸ್ಥಾನದಲ್ಲಿ ನೋಡುತ್ತಿದೆ.
ಕನ್ನಡಪ್ರಭ ವಾರ್ತೆ ಕುದೂರು
ಸೌಹಾರ್ದಯುತವಾಗಿ ಬದುಕಿದರೆ ಅದು ಸುಂದರ ದೇಶವಾಗಿ ರೂಪುಗೊಳ್ಳುತ್ತದೆ ಎಂಬುದನ್ನು ಅಯೋಧ್ಯ ರಾಮಮಂದಿರ ಲೋಕಾರ್ಪಣೆಯ ಕಾರ್ಯಕ್ರಮ ದೇಶೀಯ ಜನರಿಗೆ ತಿಳಿಸಿಕೊಟ್ಟಿದೆ ಎಂದು ಗ್ರಾಪಂ ಸದಸ್ಯ ಕೆ.ಟಿ.ವೆಂಕಟೇಶ್ ಹೇಳಿದರು.ಕುದೂರು ಗ್ರಾಮದಲ್ಲಿ ಏರ್ಪಡಿಸಿದ್ದ ಶ್ರೀ ರಾಮತಾರಕ ಹೋಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಅಕ್ಕಪಕ್ಕದ ಜನರು ಯಾವುದೇ ಧರ್ಮ, ಜಾತಿಯವರಾಗಿರಲಿ, ಅವರು ಸಂಕಟದಲ್ಲಿದ್ದಾಗ ನೀನು ಸಂತೋಷಪಡಬೇಡ’ ಎಂಬುದನ್ನು ನಮ್ಮ ಸನಾತನ ಧರ್ಮ ಬೋಧಿಸಿದೆ. ಇಂತಹ ತತ್ವ ಸಿದ್ಧಾಂತಗಳಿಂದ ಭಾರತವನ್ನು ಇಡೀ ಜಗತ್ತು ಗುರುಸ್ಥಾನದಲ್ಲಿ ನೋಡುತ್ತಿದೆ ಎಂದರು.ಗ್ರಾಪಂ ಮಾಜಿ ಸದಸ್ಯ ಜಗದೀಶ್ ಮಾತನಾಡಿ, ಯಾವ ಗ್ರಾಮದಲ್ಲಿ ಧಾರ್ಮಿಕ ಕಾರ್ಯಗಳು ಹೆಚ್ಚೆಚ್ಚು ನಡೆಯುತ್ತವೆಯೋ ಅಂತಹ ಗ್ರಾಮಗಳಲ್ಲಿ ಬರ ಎಂಬುದು ಸುಳಿಯುವುದಿಲ್ಲ ಎಂದು ತಿಳಿಸಿದರು.
ಶ್ರೀರಾಮಮಂದಿರದ ಕಾರ್ಯದರ್ಶಿ ನಾರಾಯಣ ಮೂರ್ತಿ ಮಾತನಾಡಿ, ಕೂಲಿ ಕೆಲಸ ಮಾಡುವ ಜನರು ತಾವು ಕೂಡಿಟ್ಟ ಹಣವನ್ನು ಶ್ರೀರಾಮದೇವಾಲಯದ ನಿರ್ಮಾಣಕ್ಕೆ ತಲುಪಿಸಿದ್ಧಾರೆ, ಅದರಲ್ಲಿ ಉಳಿದ ಹಣವನ್ನು ಇಂದಿನ ಕಾರ್ಯಕ್ರಮದ ಅನ್ನದಾಸೋಹಕ್ಕೆ ನೀಡಿದ್ದಾರೆ. ಇಂತಹ ವಿಶಾಲಹೃದಯವುಳ್ಳ ಜನರ ಹೃದಯದಲ್ಲಿನ ಪ್ರೀತಿಯನ್ನು ಯಾವುದೇ ಅಳತೆಮಾಪನಗಳಿಂದ ಅಳೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.ಈ ಸಂದರ್ಭದಲ್ಲಿ ಶ್ರೀರಾಮಸೇವಾ ಸಮಿತಿಯ ಉಮಾಪತಿ, ಕೆ.ಬಿ.ಚಂದ್ರಶೇಖರ್, ಯತೀಶ್, ಶಂಕರ್, ನಾಗಪ್ರಸಾದ್, ನಾಗೇಂದ್ರ, ಕೇಶವಮೂರ್ತಿ, ಪದ್ಮನಾಭ್, ರವಿ, ಪ್ರವೀಣ್, ಮುನಿರಾಜು, ಗೋವಿಂದರಾಜ್, ಶೇಷಪ್ಪ, ಗಂಗಣ್ಣ, ಶಿವರಾಂ ಮತ್ತಿತರರು ಭಾಗವಹಿಸಿದ್ದರು.
------------------------22ಕೆಆರ್ ಎಂಎನ್ 10,11.ಜೆಪಿಜಿ10.ಕುದೂರು ಗ್ರಾಮದ ಶ್ರೀರಾಮಮಂದಿರದಲ್ಲಿ ಏರ್ಪಡಿಸಿದ್ದ ಶ್ರೀರಾಮತಾರಕ ಹೋಮ
11. ಶ್ರೀ ರಾಮನ ಹಾಲುಗಲ್ಲದ ಮೂರ್ತಿಗೆ ವಿಶೇಷ ಅಲಂಕಾರ-----------------------------