ಕನ್ನಡಪ್ರಭ ವಾರ್ತೆ ಗುಬ್ಬಿ
ಪಟ್ಟಣದಲ್ಲಿ ಶ್ರೀ ರುಖ್ಮಾಯಿ, ಶ್ರೀ ಪಾಂಡುರಂಗಸ್ವಾಮಿ 22ನೇ ವರ್ಷದ ದಿಂಡಿ ಉತ್ಸವವನ್ನು ಭಾನುವಾರ ಅದ್ಧೂರಿಯಾಗಿ ನಡೆಸಲಾಯಿತು. ಬೆಳಿಗ್ಗೆ 12ಗಂಟೆಗೆ ಮಹಾಮಂಗಳಾರತಿ, ನಂತರ ಶ್ರೀ ಪಾಂಡುರಂಗ, ಶ್ರೀ ರುಕ್ಷ್ಮಿಣಿ ದೇವರಮೂರ್ತಿಗಳು, ಸಾಧು ಸಂತರ ಪಾದುಕೆ ಮತ್ತು ಭಾವಚಿತ್ರವನ್ನು ವಿಶೇಷ ಹೂವಿನಪಲ್ಲಕ್ಕಿ ರಥದಲ್ಲಿ ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಕಲಾ ತಂಡಗಳಾದ ವೀರಗಾಸೆ, ಭದ್ರಾಕಾಳಿ, ಚಿಟ್ಟಿಮೇಳೆ, ಮಕ್ಕಳಿಂದ ಚಕ್ಕೆ ಭಾಜನೆ, ಕರಗ ನೃತ್ಯ, ನವಿಲು ಕುಣುತ, ಗೊಂಬೆ ಕುಣಿತ, ನಾಸಿಕ್ ಡೋಲ್ ಡೊಳ್ಳುಕುಣಿತ, ಕೇರಳದ ಚಂಡೆ ವಾದ್ಯ, ತಮಟೆ ವಾದ್ಯ ಇನ್ನೂ ಮುಂತಾದ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಎಲ್ಲಾ ಪ್ರಮುಖ ಬೀದಿಗಳಿಗೆ ವಿಶೇಷ ವಿದ್ಯುತ್ ದೀಪಗಳ ಅಲಂಕಾರದೊಂದಿಗೆ ಮದ್ದು ಬಾಣ ಬಿರುಸು ಪ್ರದರ್ಶನ ಸಾವಿರಾರು ಭಕ್ತರ ಕಣ್ಮನ ಸೆಳೆಯಿತು. ಪಟ್ಟಣದ ಬಸ್ ನಿಲ್ದಾಣ ಬಳಿ ಮೆರವಣಿಗೆ ತಲುಪಿದ ಸಮಯದಲ್ಲಿ ಶ್ರೀ ಪಾಂಡುರಂಗ ಮತ್ತು ಶ್ರೀ ರುಕ್ಮಿಣಿ ದೇವರುಗಳ 22ಅಡಿ ಎತ್ತರದ ಭಾವಚಿತ್ರಕ್ಕೆ ವಿಶೇಷವಾಗಿ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜೆ ನಡೆಸಲಾಯಿತು. ಉತ್ಸವದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ಮಂಜುನಾಥ್ ಮಾಳೋದೆ, ಮಹೇಶ್ ಅಂಬೇಕರ್, ಜಿ.ಬಿ.ಚಂದನ್ ರಾವ್ ನಾಜರೆ, ಪಿ.ಮೋಹನ್ ಕುಮಾರ್ ಮಿರಸ್ಕರ್, ಎಸ್.ಓ.ಬಾಸುತ್ಕರ್, ರವಿ ಮಿರಸ್ಕರ್, ಆನಂದ್ ರಾವ್, ಜಿ.ಕೆ. ಮಾಳೋದೆ, ನಾಗದೀಪ್ ಮಾಳೋದೆ, ಕಿರಣ್ ಕುಮಾರ್ ಮಿರಸ್ಕರ್, ಜಿ.ಕೆ.ಮಂಜುನಾಥ್ ರಾವ್ ಮಾಳೋದೆ, ಡಾ.ಮೌರ್ಯ, ಹದಿನೆಂಟು ಕೋಮಿನ ಮುಖಂಡ ಕೆಂಪೇಗೌಡ, ರೇಣುಕಾಸ್ವಾಮಿ, ಭಾವಸಾರ ಕ್ಷತ್ರಿಯ ಸಮಾಜದ ಮುಖಂಡರು, ಸಾರ್ವಜನಿಕರು ಇದ್ದರು.ಶ್ರೀ ರುಖ್ಮಾಯಿ, ಶ್ರೀ ಪಾಂಡುರಂಗಸ್ವಾಮಿ ದಿಂಡಿ ಉತ್ಸವ
ಪಟ್ಟಣದಲ್ಲಿ ಶ್ರೀ ರುಖ್ಮಾಯಿ, ಶ್ರೀ ಪಾಂಡುರಂಗಸ್ವಾಮಿ 22ನೇ ವರ್ಷದ ದಿಂಡಿ ಉತ್ಸವವನ್ನು ಭಾನುವಾರ ಅದ್ಧೂರಿಯಾಗಿ ನಡೆಸಲಾಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.