ಮೇ 12ರಂದು ಶ್ರೀಸಣ್ಣಕ್ಕಿರಾಯೇಶ್ವರಸ್ವಾಮಿ ವಾರ್ಷಿಕೋತ್ಸವ, ಕುಂಭಾಭಿಷೇಕ

| Published : May 11 2025, 11:50 PM IST

ಮೇ 12ರಂದು ಶ್ರೀಸಣ್ಣಕ್ಕಿರಾಯೇಶ್ವರಸ್ವಾಮಿ ವಾರ್ಷಿಕೋತ್ಸವ, ಕುಂಭಾಭಿಷೇಕ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡರಸಿನಕೆರೆ ಗ್ರಾಮದಲ್ಲಿ ಮೇ 12ರಂದು ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀಸಣ್ಣಕ್ಕಿರಾಯೇಶ್ವರ ಸ್ವಾಮಿ ದೇವಾಲಯದ 12ನೇ ವರ್ಷದ ವಾರ್ಷಿಕೋತ್ಸವ, ಕುಂಭಾಭಿಷೇಕ ಜಾತ್ರಾ, ಬಸವಣ್ಣ ಭಾವಚಿತ್ರದೊಂದಿಗೆ ಗ್ರಾಮಗಳಲ್ಲಿ ಬೆಳ್ಳಿ ಪಲ್ಲಕ್ಕಿ ಉತ್ಸವ ಜರುಗಲಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ದೊಡ್ಡರಸಿನಕೆರೆ ಗ್ರಾಮದಲ್ಲಿ ಮೇ 12ರಂದು ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀಸಣ್ಣಕ್ಕಿರಾಯೇಶ್ವರ ಸ್ವಾಮಿ ದೇವಾಲಯದ 12ನೇ ವರ್ಷದ ವಾರ್ಷಿಕೋತ್ಸವ, ಕುಂಭಾಭಿಷೇಕ ಜಾತ್ರಾ, ಬಸವಣ್ಣ ಭಾವಚಿತ್ರದೊಂದಿಗೆ ಗ್ರಾಮಗಳಲ್ಲಿ ಬೆಳ್ಳಿ ಪಲ್ಲಕ್ಕಿ ಉತ್ಸವ ಜರುಗಲಿದೆ.

ಈಗಾಗಲೇ ವಿವಿಧ ಪೂಜಾ ಕೈಂಕರ್ಯಗಳು ದೇಗುಲದಲ್ಲಿ ನಡೆಯುತ್ತಿದ್ದು, ಮೇ 12ರ ಬೆಳಗ್ಗೆ 8 ಗಂಟೆಗೆ ಶ್ರೀಸ್ವಾಮಿ ಬಸಪ್ಪಗಳಿಗೆ ಅಭಿಷೇಕ ಪೂಜೆ ನಂತರ ಗ್ರಾಮದ ಗಡಿ ಶ್ರೀಸಣ್ಣಕ್ಕಿರಾಯಸ್ವಾಮಿ ದೇವಸ್ಥಾನದಿಂದ ಶ್ರೀ ಕಾಲ ಭೈರವೇಶ್ವರಸ್ವಾಮಿ ಬಸವಪ್ಪ ಮತ್ತು ಶ್ರೀಸಣ್ಣಕ್ಕಿ ರಾಯೇಶ್ವರಸ್ವಾಮಿ ಬಸಪ್ಪ, ಶ್ರೀಏಳೂರಮ್ಯ, ಶ್ರೀಕಾಳಮ್ಮ ದೇವರುಗಳೊಂದಿಗೆ ದೇವರಹಳ್ಳಿ ಕಾಲುವೆ ಹತ್ತಿರ ಅಗ್ನಿ ಪೂಜೆ, ಹೂವು-ಹೊಂಬಾಳೆ ಸಹಿತ, ಕುಂಭಾರಾಧನೆ ಉತ್ಸವ ಮೆರವಣಿಗೆ, ಸ್ವಾಮೀಜಿಗಳೊಂದಿಗೆ ಉತ್ಸವದೊಂದಿಗೆ ಶ್ರೀಕ್ಷೇತ್ರಕ್ಕೆ ಬರಮಾಡಿಕೊಂಡು ಕುಂಭಾಭಿಷೇಕ ಮಹೋತ್ಸವ ನೆರವೇರಲಿದೆ.

ನಂತರ ಮೆರವಣಿಗೆ, ಕತ್ತಿಪವಾಡ, ಗೊರವಯ್ಯರುಗಳ ಮಡೆವುಸೇವೆ, ದೂಳಮರಿಸೇವೆ, ಒಳ್ಳೆದೀವಟಿಗೆ ಪತ್ತಿನ ಸಲಾಮು, ಚಾಮರ ಸೇವೆ, ಸಣ್ಣಕ್ಕಿರಾಯೇಶ್ವರ ಸ್ವಾಮಿ ಸಹೋದರಿಯರಾದ ಶ್ರೀಎಳೂರಮ್ಯ ಶ್ರೀಕಾಳಮ್ಮ ತಾಯಿ ಅಮ್ಮನವರಿಗೆ ಮಡ್ಲಕ್ಕಿಸೇವೆ, ಬಸವಪ್ಪಗಳು, ಮತ್ತು ಪೆಟ್ಟಿ ದೇವರು ಶ್ರೀಎಳೂರಮ್ಮ, ಶ್ರೀಕಾಳಮ್ಮ, ಬಸವಪ್ಪನ ಸನ್ನಿಧಿಗೆ ಬರಮಾಡಿಕೊಂಡು ಗದ್ದಿಗೆ ಪೂಜೆ ನಂತರ ಶ್ರೀಎಳೂರಮ್ಮ ಸನ್ನಿಧಿಯಲ್ಲಿ ಹೂ-ಹೊಂಬಾಳೆ ಪೂಜೆ ನಂತರ ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಜರುಗಲಿದೆ.

ಮೇ 13 ರಂದು ಬೆಳಗ್ಗೆ ಬಸವಪ್ಪನ ಸನ್ನಿಧಿಯಲ್ಲಿ ಗೊರವಯ್ಯನವರ ಮಣೆವುಸೇವೆ, ಹೊಳೆದಿವಟಿಗೆ, ಪತ್ತಿನ ಸಲಾಮು, ಚಾಮರ ಸೇವೆಗಳೊಂದಿಗೆ ಮಹಾಮಂಗಳಾರತಿ ಯಜಮಾನರುಗಳಿಗೆ ಮತ್ತು ಗ್ರಾಮಸ್ಥರಿಗೆ ಗಂಧಪ್ರಸಾದ ಸೇವೆ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಜಯಪ್ರಕಾಶ್‌ಗೌಡ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಕೆಂಗೇರಿ ವಿಶ್ವ ಒಕ್ಕಲಿಗ ಮಠದ ಪೀಟಾಧ್ಯಕ್ಷ ಡಾ. ನಿಶ್ಚಲಾನಂದನಾಥ ಸ್ವಾಮೀಜಿ, ಹೊಸದುರ್ಗ ಕನಕಧಾಮದ ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಮಠ ಶ್ರೀಈಶ್ವರಾನಂದಪುರಿ ಮಹಾ ಸ್ವಾಮೀಜಿ, ಗುಲ್ಬರ್ಗ ವಿಭಾಗದ ಕಾಗಿನೆಲೆ ಮಹಾಸಂಸ್ಥಾನ ಮಠ, ಕನಕಗುರುಪಿಠ ಶ್ರೀಸಿದ್ದರಾಮನಂದ ಮಹಾ ಸ್ವಾಮೀಜಿ, ರಾಮೋಹಳ್ಳಿ ಶ್ರೀನಾಗದುರ್ಗಾ ಪೀಠ ಮಹಾ ಸಂಸ್ಥಾನಂ ಪೀಠಾಧಿಪತಿ ಶ್ರೀಶಾಸ್ತ್ರಂ ಶ್ರೀ ಶಕ್ತಿಬಾಲ (ಅಮ್ಮ)ನವರು, ಶ್ರೀಸ್ವಾಮಿ ಯೋಗೇಶ್ವರನಂದ ಸ್ವಾಮೀಜಿ, ಬೆಂಗಳೂರಿನ ರಾಮೋಹಳ್ಳಿ ರಾಮಕೃಷ್ಣ ಯೋಗಾಶ್ರಮ ಅಧ್ಯಕ್ಷ ಶ್ರೀಸ್ವಾಮಿ ಯೋಗೇಶ್ವರರನಂದ ಸ್ವಾಮೀಜಿ ಪೂಜಾ ಮಹೋತ್ಸವದಲ್ಲಿ ಪಾಲ್ಗೊಳ್ಳುವರು.

ಶ್ರೀನರಸಿಂಹ ಜಯಂತಿ ಆಚರಣೆ

ಕಿಕ್ಕೇರಿ:

ಶ್ರೀನರಸಿಂಹ ದೇವರ ಜಯಂತಿ ಹೋಬಳಿಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಹೋಬಳಿಯ ಬೋಳಮಾರನಹಳ್ಳಿಯಲ್ಲಿರುವ ಕಂಬದ ನರಸಿಂಹಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ರೈತಾಪಿ ಜನತೆ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ದೇಗುಲದ ಸುತ್ತಾ ಪ್ರದಕ್ಷಿಣೆ ಹಾಕಿ ತಮ್ಮಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಕಿಕ್ಕೇರಿ ಮಾದಾಪುರ, ಅಯ್ಯನಕೊಪ್ಪಲು, ಆನೆಗೊಳ, ಸೊಳ್ಳೇಪುರ, ಬೋಳಮಾರನಹಳ್ಳಿ, ಮಂದಗೆರೆಗಳಲ್ಲಿ ವಿಶೇಷವಾಗಿ ಮನೆಗಳಲ್ಲಿ ನರಸಿಂಹಸ್ವಾಮಿ ದೇವರಿಗೆ ಪೂಜಿಸಿ ಜಯಂತಿಯನ್ನು ಆಚರಿಸಿದರು.

ಕಿಕ್ಕೇರಿಯ ದೊಡ್ಡ ಹಾಗೂ ಚಿಕ್ಕನರಸಿಂಹಸ್ವಾಮಿ ದೇಗುಲ ಹಾಗೂ ಚಿಕ್ಕಳಲೆಯ ಲಕ್ಷ್ಮೀನರಸಿಂಹಸ್ವಾಮಿ ಗುಡಿಯಲ್ಲಿ ವಿಶೇಷ ಪೂಜೆಗಳು ನಡೆದವು. ದೇವರಿಗೆ ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ಕುಂಕುಮಾರ್ಚನೆ ನಡೆಯಿತು. ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.