ಜಗದ್ಗುರು ಶ್ರೀ ಶಂಕರ ಭಗವತ್ಪಾದರ ೧೧ನೇ ವರ್ಷದ ಜಯಂತಿ ಅಂಗವಾಗಿ “ಮನೆ ಮನೆಯಲ್ಲಿ ಶ್ರೀ ಶಂಕರ” ಕಾರ್ಯಕ್ರಮವನ್ನು ನಗರದಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು. ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದಿಂದ ನಡೆದ ಈ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಶ್ರೀ ಗೋಧಾ ಗೋಷ್ಠಿ ಬಂಧುಗಳಿಂದ ಭಜನಾ ಸತ್ಸಂಗ ಭಕ್ತಿಪೂರ್ವಕವಾಗಿ ನೆರವೇರಿತು. ಭಜನೆಗಳ ಮೂಲಕ ಶ್ರೀ ಶಂಕರ ಭಗವತ್ಪಾದರ ತತ್ವ, ಆದ್ವೈತ ಸಂದೇಶ ಹಾಗೂ ಸನಾತನ ಧರ್ಮದ ಮೌಲ್ಯಗಳನ್ನು ಭಕ್ತರಿಗೆ ಮನದಟ್ಟುಗೊಳಿಸಲಾಯಿತು. ನಂತರ ವೇದಬ್ರಹ್ಮ ಬಾಲಸುಬ್ರಹ್ಮಣ್ಯ ಮತ್ತು ವೃಂದದವರಿಂದ ವೇದ ಪಾರಾಯಣ ನಡೆಯಿತು.
ಹಾಸನ: ಜಗದ್ಗುರು ಶ್ರೀ ಶಂಕರ ಭಗವತ್ಪಾದರ ೧೧ನೇ ವರ್ಷದ ಜಯಂತಿ ಅಂಗವಾಗಿ “ಮನೆ ಮನೆಯಲ್ಲಿ ಶ್ರೀ ಶಂಕರ” ಕಾರ್ಯಕ್ರಮವನ್ನು ನಗರದಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು. ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದಿಂದ ನಡೆದ ಈ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಶ್ರೀ ಗೋಧಾ ಗೋಷ್ಠಿ ಬಂಧುಗಳಿಂದ ಭಜನಾ ಸತ್ಸಂಗ ಭಕ್ತಿಪೂರ್ವಕವಾಗಿ ನೆರವೇರಿತು. ಭಜನೆಗಳ ಮೂಲಕ ಶ್ರೀ ಶಂಕರ ಭಗವತ್ಪಾದರ ತತ್ವ, ಆದ್ವೈತ ಸಂದೇಶ ಹಾಗೂ ಸನಾತನ ಧರ್ಮದ ಮೌಲ್ಯಗಳನ್ನು ಭಕ್ತರಿಗೆ ಮನದಟ್ಟುಗೊಳಿಸಲಾಯಿತು. ನಂತರ ವೇದಬ್ರಹ್ಮ ಬಾಲಸುಬ್ರಹ್ಮಣ್ಯ ಮತ್ತು ವೃಂದದವರಿಂದ ವೇದ ಪಾರಾಯಣ ನಡೆಯಿತು. ಈ ಸಂದರ್ಭದಲ್ಲಿ ಗುರುಬಂಧುಗಳು, ಪ್ರತಿಷ್ಠಾನದ ವಿಶ್ವಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದು, ಶಂಕರ ತತ್ವದ ಪ್ರಚಾರ ಹಾಗೂ ಧಾರ್ಮಿಕ ಪರಂಪರೆಯ ಉಳಿವಿಗೆ ಕೈಜೋಡಿಸಿದರು. ಕಾರ್ಯಕ್ರಮದ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸೇವಾಕರ್ತರಿಗೆ ಪ್ರತಿಷ್ಠಾನದ ಪರವಾಗಿ ಅನಂತಾನಂತ ಧನ್ಯವಾದಗಳನ್ನು ಸಲ್ಲಿಸಲಾಯಿತು.“ಎಲ್ಲರಿಗಾಗಿ ಶಂಕರ, ಎಲ್ಲೆಡೆಯೂ ಶಂಕರ” ಎಂಬ ಸಂದೇಶದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು