ಶಂಕರ ಜಯಂತಿಯ ಪ್ರಯುಕ್ತ ಶ್ರೀ ಶಂಕರ ರಥ ಮೆರವಣಿಗೆ

| Published : May 02 2025, 11:45 PM IST

ಸಾರಾಂಶ

ಈ ಮೆರವಣಿಗೆಯಲ್ಲಿ ನಾದಸ್ವರ, ಮಂಗಳವಾದ್ಯ, ಅರ್ಚಕ ಪುರೋಹಿತರ ವೇದ ಬಳಗ, ಮಹಿಳಾ ಭಜನಾ ಮಂಡಳಿ ಸೇರಿದಂತೆ 100 ಹೆಚ್ಚು ಮಂದಿ ಚಾಮರಾಜಪುರಂ, ಲಕ್ಷ್ಮೀಪುರಂ, ಕೃಷ್ಣಮೂರ್ತಿಪುರಂ ಬಡಾವಣೆಯವರು ಭಾಗವಹಿಸಿದ್ದರು. ನಂತರ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಶಂಕರ ಜಯಂತಿಯ ಪ್ರಯುಕ್ತ ನಗರದ ಚಾಮರಾಜಪುರಂ ಗೀತಾ ರಸ್ತೆಯಲ್ಲಿರುವ ಶ್ರೀ ಪ್ರಸನ್ನ ವಿಘ್ನೇಶ್ವರ ದೇವಸ್ಥಾನದ ವತಿಯಿಂದ ಶಂಕರಚಾರ್ಯರ ಮೂರ್ತಿಯ ಶ್ರೀ ಶಂಕರ ರಥ ಮೆರವಣಿಗೆಯನ್ನು ಶುಕ್ರವಾರ ಆಯೋಜಿಸಲಾಗಿತ್ತು.ಈ ಮೆರವಣಿಗೆಯಲ್ಲಿ ನಾದಸ್ವರ, ಮಂಗಳವಾದ್ಯ, ಅರ್ಚಕ ಪುರೋಹಿತರ ವೇದ ಬಳಗ, ಮಹಿಳಾ ಭಜನಾ ಮಂಡಳಿ ಸೇರಿದಂತೆ 100 ಹೆಚ್ಚು ಮಂದಿ ಚಾಮರಾಜಪುರಂ, ಲಕ್ಷ್ಮೀಪುರಂ, ಕೃಷ್ಣಮೂರ್ತಿಪುರಂ ಬಡಾವಣೆಯವರು ಭಾಗವಹಿಸಿದ್ದರು. ನಂತರ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.ಶ್ರೀ ಪ್ರಸನ್ನ ವಿಘ್ನೇಶ್ವರ ದೇವಸ್ಥಾನದ ಅಧ್ಯಕ್ಷ ಜಯರಾಂ, ಕಾರ್ಯದರ್ಶಿ ಮೋಹನ್ ರಾಮ್, ಮಧು, ಮುರಳಿ, ಶ್ರೀರಾಮ್, ಸಂದೀಪ್, ನಗರ ಪಾಲಿಕೆ ಮಾಜಿ ಸದಸ್ಯ ಜಗದೀಶ್, ಬ್ರಾಹ್ಮಣ ಸಂಘದ ಗ್ರಾಮಾಂತರ ಅಧ್ಯಕ್ಷ ಗೋಪಾಲ್ ರಾವ್, ಮೂಡ ಮಾಜಿ ಸದಸ್ಯ ನವೀನ್ ಕುಮಾರ್, ಬಿಜೆಪಿ ಮುಖಂಡ ಜೋಗಿ ಮಂಜು, ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಮುಖಂಡರಾದ ಅಜಯ್ ಶಾಸ್ತ್ರಿ, ಟಿ.ಎಸ್. ಅರುಣ್, ಸುಚೇಂದ್ರ, ಸಿದ್ದೇಶ್ ಮೊದಲಾದವರು ಇದ್ದರು.