ಶ್ರೀ ವೀರಪುಲಿಕೇಶಿ ಸಹಕಾರಿ ಬ್ಯಾಂಕಿಗೆ ₹2 ಕೋಟಿ ನಿವ್ವಳ ಲಾಭ: ಎಂ.ಕೆ. ಪಟ್ಟಣಶೆಟ್ಟಿ

| Published : Aug 02 2025, 12:15 AM IST

ಶ್ರೀ ವೀರಪುಲಿಕೇಶಿ ಸಹಕಾರಿ ಬ್ಯಾಂಕಿಗೆ ₹2 ಕೋಟಿ ನಿವ್ವಳ ಲಾಭ: ಎಂ.ಕೆ. ಪಟ್ಟಣಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾದಾಮಿ ಪಟ್ಟಣದ ಪ್ರತಿಷ್ಠಿತ ಶ್ರೀ ವೀರಪುಲಿಕೇಶಿ ಸಹಕಾರಿ ಬ್ಯಾಂಕಿಗೆ ಪ್ರಸಕ್ತ ಸಾಲಿನಲ್ಲಿ ₹2 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಮಾಜಿ ಶಾಸಕ, ಬ್ಯಾಂಕಿನ ಅಧ್ಯಕ್ಷ ಎಂ.ಕೆ. ಪಟ್ಟಣಶೆಟ್ಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಪಟ್ಟಣದ ಪ್ರತಿಷ್ಠಿತ ಶ್ರೀ ವೀರಪುಲಿಕೇಶಿ ಸಹಕಾರಿ ಬ್ಯಾಂಕಿಗೆ ಪ್ರಸಕ್ತ ಸಾಲಿನಲ್ಲಿ ₹2 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಮಾಜಿ ಶಾಸಕ, ಬ್ಯಾಂಕಿನ ಅಧ್ಯಕ್ಷ ಎಂ.ಕೆ. ಪಟ್ಟಣಶೆಟ್ಟಿ ತಿಳಿಸಿದರು.

ಬ್ಯಾಂಕಿನ ಸಭಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 2024-25ನೇ ಸಾಲಿನ 2025 ಮಾರ್ಚ್‌ 31ರ ಅಂತ್ಯಕ್ಕೆ 18293 ಸದಸ್ಯರನ್ನು ಹೊಂದಿದ್ದು, ₹1241.77 ಲಕ್ಷ ಷೇರು ನಿಧಿ, ₹7177.63 ಲಕ್ಷ ನಿಧಿಗಳು, ₹38190.42 ಲಕ್ಷ ಠೇವು ಹೊಂದಿದ್ದು, ₹24876.29 ಲಕ್ಷ ಸಾಲ ವಿತರಿಸಲಾಗಿದೆ. ₹47552.39 ಲಕ್ಷ ದುಡಿಯುವ ಬಂಡವಾಳ, ₹2.54 ಕೋಟಿ ನಿವ್ವಳ ಲಾಭ ಗಳಿಸಿದೆ. ₹903.67 ಲಕ್ಷ ಗ್ರಾಸ್ ಪ್ರಾಫಿಟ್ ಹೊಂದಿದ್ದು, ಪ್ರಾಶಸ್ತ್ಯ, ಘಟಕಗಳಿಗೆ ಶೇ.74.98 ನೀಡಲಾಗಿದೆ. ಶೇ.8ರಷ್ಟು ಲಾಭಾಂಶ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಬ್ಯಾಂಕಿನಿಂದ ಗ್ರಾಹಕರಿಗೆ ಎಸ್.ಎಂ.ಎಸ್, ಆರ್.ಟಿ.ಜಿ.ಎಸ್.ಸೌಲಭ್ಯ, ರೂಪೇ ಕಾರ್ಡ್‌, ಐ.ಎಂ.ಪಿ.ಎಸ್. ಸರ್ವೀಸ್ ಕಲ್ಪಿಸಲಾಗಿದೆ. ಬ್ಯಾಂಕ್ ಈಗಾಗಲೇ ಐದು ಜಿಲ್ಲೆಯ ವ್ಯಾಪ್ತಿ ಹೊಂದಿದ್ದು, ಬರುವ ದಿನಗಳಲ್ಲಿ ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಿಗೆ ವಿಸ್ತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಬ್ಯಾಂಕ್ ಕಳೆದ ಎರಡು ವರ್ಷಗಳಿಂದ ಸದೃಢ ಹಣಕಾಸು ಹೊಂದಿದ ಕೆಟಗರಿಯಲ್ಲಿದೆ. ಗ್ರಾಹಕರಿಗೆ ಹೆಚ್ಚಿನ ಸೌಲಭ್ಯ ನೀಡುತ್ತಿದೆ. ಕುಳಗೇರಿ ಮತ್ತು ರೋಣ ಶಾಖೆಗಳಿಗೆ ಹೊಸ ಕಟ್ಟಡ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ದುಡಿಯುವ ಬಂಡವಾಳ ₹500 ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದ್ದು, ₹25 ಲಕ್ಷ ಮತ್ತು ಮೇಲ್ಪಟ್ಟ ಮೊತ್ತದ ಠೇವಣಿ ಮೇಲಿನ ಬಡ್ಡಿದರ ಶೇ.9ಕ್ಕೆ ಹೆಚ್ಚಿಸಲಾಗಿದೆ.

ಅ.3ರಂದು ಸಾಮಾನ್ಯ ಸಭೆ: ಆಗಸ್ಟ್ 3ರಂದು ಭಾನುವಾರ ಎಸ್.ವಿ.ಪಿ.ಸಂಸ್ಥೆಯ ಬಸವಭವನದಲ್ಲಿ ಬೆಳಗ್ಗೆ 10.30 ಗಂಟೆಗೆ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ಉತ್ತಮ ಗ್ರಾಹಕರು, 145 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಉತ್ತಮ ಮೂರು ಸೊಸೈಟಿಗಳವರಿಗೆ ಸನ್ಮಾನಿಸಲಾಗುವುದು. ಎಂಜಿನಿಯರಿಂಗ್, ವೈದ್ಯಕೀಯ ಪ್ರವೇಶ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಡಿ.ಎಂ. ಪೈಲ್ನಿ, ರ್ದೇಶಕರಾದ ಎ.ಸಿ.ಪಟ್ಟಣದ, ಐ.ಕೆ.ಪಟ್ಟಣಶೆಟ್ಟಿ, ವಿ.ಕೆ.ಬಾಗಲೆ, ಬಿ.ಎಂ. ಟೆಂಗಿನಕಾಯಿ, ಕೆ.ಎಂ. ಪಟ್ಟಣಶೆಟ್ಟಿ, ಎಂ.ಎಸ್. ಹಿರೇಹಾಳ, ಸಿ.ಯು. ಪಟ್ಟಣದ, ಎಂ.ಎಸ್. ತೆಗ್ಗಿನಮನಿ, ಹುಚ್ಚಪ್ಪ ಬೆಳ್ಳಿಗುಂಡಿ, ಬ್ಯಾಂಕಿನ ವ್ಯವಸ್ಥಾಪಕಿ ಎಂ.ಬಿ.ದೇಶನ್ನವರ ಉಪಸ್ಥಿತರಿದ್ದರು.