ನಾಲ್ಕು ಕೋಟಿ ಅಂದಾಜು ಮೊತ್ತದ ಅವ್ಯವಹಾರ ನಡೆದಿದೆ ಎಂದು ಆರೋಪ
-ಶಾಸಕ ದರ್ಶನ್ ವಿರುದ್ಧ ಮಾಜಿ ಶಾಸಕ ಬಿ.ಹರ್ಷವರ್ಧನ್ ಆಕ್ರೋಶ
-ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ 2024-25ನೇ ಸಾಲಿನಲ್ಲಿ ಅವ್ಯವಹಾರ--ನಾಲ್ಕು ಕೋಟಿ ಅಂದಾಜು ಮೊತ್ತದ ಅವ್ಯವಹಾರ ನಡೆದಿದೆ ಎಂದು ಆರೋಪಫೋಟೋ- 3ಎಂವೈಎಸ್ 55
-----------ಕನ್ನಡಪ್ರಭ ವಾರ್ತೆ ನಂಜನಗೂಡುಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ 2024-25ನೇ ಸಾಲಿನಲ್ಲಿ ಅವ್ಯವಹಾರವಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಅವರು ಆರೋಪಿಸಿರುವುದರಲ್ಲಿ ವಾಸ್ತವವಾಗಿ ಯಾವುದೇ ಹುರುಳಿಲ್ಲ ಎಂದು ಮಾಜಿ ಶಾಸಕ ಬಿ.ಹರ್ಷವರ್ಧನ್ ಹೇಳಿದರು.ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಇತ್ತೀಚೆಗೆ ದೇವಾಲಯದಲ್ಲಿ ಸಭೆ ನಡೆಸಿ ದೇವಸ್ಥಾನದಲ್ಲಿ 2024-25ನೇ ಸಾಲಿನಲ್ಲಿ ನಾಲ್ಕು ಕೋಟಿ ಅಂದಾಜು ಮೊತ್ತದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದರು. ಆದರೆ ಈ ಸಂಬಂಧ ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡದೆ ಅನವಶ್ಯಕ ಆರೋಪಗಳನ್ನು ಮಾಡುವುದು ಸರಿಯಲ್ಲ, ಇದರಿಂದ ರಾಜ್ಯದ 5ನೇ ಶ್ರೀಮಂತ ದೇವಾಲಯ ಎಂಬ ಹೆಗ್ಗಳಿಕೆ ಹೊಂದಿರುವ ದೇವಾಲಯದ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದ್ದು, ಜೊತೆಗೆ ದೇಗುಲದ ಆದಾಯವೂ ಭವಿಷ್ಯದಲ್ಲಿ ಕಡಿತಗೊಳ್ಳುವ ಆತಂಕವಿದೆ. ಸೂಕ್ತ ದಾಖಲೆಗಳೊಂದಿಗೆ ಶಾಸಕರು ತಪ್ಪಿತಸ್ಥರು ಯಾರು ಎಂಬದನ್ನು ಜನತೆಯ ಮುಂದಿಡಬೇಕು ಬದಲಾಗಿ ದಾಖಲೆ ರಹಿತ ಆರೋಪ ಸರಿಯಲ್ಲ ಎಂದರು. ಬೆಳ್ಳಿ ರಥ ನಿರ್ಮಾಣ ಕಾಮಗಾರಿ ನೆನೆಗುದಿಗೆಶಾಸಕ ದರ್ಶನ್ ಧ್ರುವನಾರಾಯಣ ಅವರು ಬಿಳಿಗಿರಿ ರಂಗನಬೆಟ್ಟದ ದೇವಾಲಯದ ಬಗ್ಗೆ ತೋರುವ ಕಾಳಜಿಯನ್ನು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಬಗ್ಗೆ ತೋರುತ್ತಿಲ್ಲ, ಇದರಿಂದಾಗಿ ನಾನು ಈ ಹಿಂದೆ ಶಾಸಕನಾಗಿದ್ದ ವೇಳೆ ಜಾರಿಗೊಳಿಸಲು ಮುಂದಾಗಿದ್ದ ಬೆಳ್ಳಿ ರಥ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿದೆ, ಸದ್ಯ ಮಾರುಕಟ್ಟೆಯಲ್ಲಿ ಬೆಳ್ಳಿ ದರ ದುಪ್ಪಟ್ಟು ಪ್ರಮಾಣದಲ್ಲಿ ಏರಿಕೆಯಾಗಿದ್ದು, ಜೊತೆಗೆ ದೇವಾಲಯಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿದೆ, ಇನ್ನು ಭಕ್ತರ ಅನುಕೂಲಕ್ಕಾಗಿ 75 ಕೊಠಡಿಗಳ ವಸತಿಗೃಹ ನಿರ್ಮಾಣಕ್ಕೆ ಅಗತ್ಯ ಅನುಮೋದನೆ ಪಡೆದುಕೊಳ್ಳಲಾಗಿತ್ತು, ಆದರೆ ಶಾಸಕರು ಯೋಜನೆಯನ್ನು ಜಾರಿಗೊಳಿಸದೆ ತಡೆ ಹಿಡಿಯುವ ಮೂಲಕ ದೇವಾಲಯದ ಪ್ರಗತಿಗೆ ಅಡ್ಡಿಯಾಗಿದ್ದಾರೆ ಎಂದು ಅವರು ದೂರಿದರು. ಅನುಮತಿ ಇಲ್ಲದೆ ಕಚೇರಿ ಪರಿವರ್ತನೆಶ್ರೀಕಂಠೇಶ್ವರ ದೇವಾಲಯದಲ್ಲಿ ಪುರಾತತ್ವ ಇಲಾಖೆಯ ಜಿಲ್ಲಾಧಿಕಾರಿ ಅನುಮತಿ ಇಲ್ಲದೆ ಶೌಚಾಲಯ ಕಟ್ಟಡವನ್ನು, ಕಾರ್ಯನಿರ್ವಹಣಾಧಿಕಾರಿಗಳ ಕಚೇರಿಯಾಗಿ ಪರಿವರ್ತನೆ ಮಾಡಲಾಗಿದೆ, ಕೇವಲ ನಿರ್ಮಿತಿ ಕೇಂದ್ರದ ಮೂಲಕ ಎಲ್ಲ ಕಾಮಗಾರಿಗಳನ್ನು ನೀಡಿ ಅವರ ಮೇಲೆ ಒತ್ತಡ ಏರಿ ಕೆಲಸ ಮಾಡಿಸಲಾಗುತ್ತಿದೆ.ಎಸಿ ಯಂತ್ರ ಅಳವಡಿಸದೆ 4.5 ಲಕ್ಷ ಬಿಲ್2026ನೇ ಸಾಲಿನಲ್ಲಿ ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನದಲ್ಲಿ ಎಸಿ ಅಳವಡಿಸಿರುವುದಾಗಿ 4.5 ಲಕ್ಷ ಬಿಲ್ ಮಾಡಲಾಗಿದೆ, ವಾಸ್ತವವಾಗಿ ಎಸಿ ಯಂತ್ರವನ್ನೇ ಅಳವಡಿಸಿಲ್ಲ, 2026ನೇ ಸಾಲಿನಲ್ಲಿ ನಡೆದ ಅವ್ಯವಹಾರವನ್ನು ಮುಚ್ಚಿ ಹಾಕಲು ಶಾಸಕರು ಅಧಿಕಾರಿಗಳ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಡಿಸಿಎಂ ಕಾಟಾಚಾರದ ಬರ ವೀಕ್ಷಣೆಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ತಾಲೂಕಿನ ಕವಲಂದೆ ವ್ಯಾಪ್ತಿಯ ಹಳ್ಳಿಗಳ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ರೈತರನ್ನು ಪೂರ್ಣ ಪ್ರಮಾಣದಲ್ಲಿ ಬೆಳೆ ಒಣಗಿರುವುದು ಕಂಡುಬಂದಿಲ್ಲ ಎನ್ನುವ ಮೂಲಕ ಬರದ ತೀವ್ರತೆಯ ನೋವಿನಲ್ಲಿರುವ ರೈತರಿಗೆ ಸಾಂತ್ವನ ಹೇಳುವ ಬದಲಾಗಿ ಕಾಟಾಚಾರದ ವೀಕ್ಷಣೆ ನಡೆಸಿದ್ದಾರೆ ಎಂದು ಹೇಳಿದರು.ಜಿಪಂ ಮಾಜಿ ಸದಸ್ಯ ಸಿ. ಚಿಕ್ಕರಂಗ ನಾಯಕ, ಬಿಜೆಪಿ ಮಂಡಲ ಅಧ್ಯಕ್ಷ ಕೆಂಡಗಣ್ಣಪ್ಪ, ನಗರ ಘಟಕದ ಅಧ್ಯಕ್ಷ ಸಿದ್ಧರಾಜು, ನಗರಸಭೆ ಮಾಜಿ ಸದಸ್ಯರಾದ ಮಹದೇವ ಪ್ರಸಾದ್, ಕಪಿಲೇಶ್, ಮುಖಂಡರಾದ ಪುಟ್ಟಸ್ವಾಮಿ, ರಾಘವೇಂದ್ರ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಿದ್ಧರಾಜು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ವಿಷ್ಣು ಇದ್ದರು.