ಗೊಲ್ಲರ ಸಂಘದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ: ಮನರಂಜನೆ ನೀಡಿದ ಮಡಿಕೆ ಒಡೆಯುವ ಸ್ಪರ್ಧೆ

| Published : Aug 30 2024, 01:14 AM IST

ಗೊಲ್ಲರ ಸಂಘದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ: ಮನರಂಜನೆ ನೀಡಿದ ಮಡಿಕೆ ಒಡೆಯುವ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕನಕಪುರದ ಪ್ರಮುಖ ಬೀದಿಗಳಲ್ಲಿ ಶ್ರೀ ಕೃಷ್ಣನ ವಿಗ್ರಹ ಉತ್ಸವ ಮೆರವಣಿಗೆ ಜಾನಪದ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

ಕನಕಪುರ: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ಕೃಷ್ಣನ ವಿಗ್ರಹ ಉತ್ಸವ ಮೆರವಣಿಗೆ ಜಾನಪದ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

ತಾಲೂಕಿನ ಗೊಲ್ಲರ ಸಂಘದ ವತಿಯಿಂದ ನಗರದ ಕೋಟೆ ಕಿಲ್ಲೆ ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಕೃಷ್ಣನ ಜನ್ಮಾಷ್ಟಮಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು, ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ನಗರದ ರಾಜಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು,ವಿವಿಧ ಜಾನಪದ ಕಲಾತಂಡಗಳೊಂದಿಗೆ ನೂರಾರು ಮಹಿಳೆಯರು ಸಮವಸ್ತ್ರ ಧರಿಸಿ ಪೂರ್ಣ ಕುಂಭ ಕಳಸದೊಂದಿಗೆ ಕೃಷ್ಣನ ವಿಗ್ರಹದ ಪಲ್ಲಕ್ಕಿ ಉತ್ಸವ ದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು ಜಾನಪದ ಕಲಾ ತಂಡಗಳ ಪ್ರದರ್ಶನ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದವು.

ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕಿಲ್ಲೆ ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಭರತನಾಟ್ಯ ಏರ್ಪಡಿಸಲಾಗಿತ್ತು,ಮಕ್ಕಳಿಗೆ ಶ್ರೀ ಕೃಷ್ಣ ವೇಷಙೂಷಣ ಮತ್ತ ನೃತ್ಯ ಸ್ಪರ್ಧೆ ಗಳನ್ನು ಆಯೋಜನೆ ಮಾಡಲಾಗಿತ್ತು.

ಕಳೆದ 11 ವರ್ಷದಿಂದ ನಗರದಲ್ಲಿ ತಾಲೂಕು ಗೊಲ್ಲರ ಸಂಘದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗ ವಾಗಿ ವಿವಿಧಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ‌್ಯಕ್ರಮ ವನ್ನು ನಡೆಸಿಕೊಂಡು ಬರಲಾಗುತ್ತಿದೆ,ಮಡಿಕೆ ಹೊಡೆಯುವ ಸ್ಪರ್ಧೆ ಯಲ್ಲಿ 30 ಕ್ಕೂ ಹೆಚ್ಚು ಯುವಕರು ಪಾಲ್ಗೋಂಡಿದ್ದರು,ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಮಡಿಕೆ ಹೊಡೆಯುವ ಸ್ಪರ್ಧೆ ಜನರಿಗೆ ಮನರಂಜನೆ ನೀಡತು.

ಈ ಸ್ವರ್ದೆಯಲ್ಲಿ ಪಾಲ್ಗೊಂಡ ಉತ್ತಮ ಪ್ರದರ್ಶನ ನೀಡಿದ 3 ಸ್ಪರ್ಧಿಗಳಿಗೆ ನಗದು ಬಹುಮಾನಗಳನ್ನು ನೀಡಲಾಯಿತು. ಅಜಯ್ ಪ್ರಥಮ, ಹೇಮಂತ್ ದ್ವಿತೀಯ, ಪ್ರಜ್ವಲ್ ತೃತೀಯ ಬಹುಮಾನವನ್ನು ಪಡೆದುಕೊಂಡರು.

ಗೊಲ್ಲರ ಸಂಘದ ಅಧ್ಯಕ್ಷ ಸುರೇಶ್, ಕೆಂಕೇರಮ್ಮ ದೇವಾಲಯ ಸೇವಾ ಟ್ರಸ್ಟ್ ಅಧ್ಯಕ್ಷ ಚಿಕ್ಕಲಿಂಗಣ್ಣ, ಕಾರ‌್ಯದರ್ಶಿ ಮಹದೇವ್, ನಗರಸಭೆಯ ಸದಸ್ಯರಾದ ನಾ.ಚಿ ನಾಗರಾಜು, ಎ.ಪಿ. ಕೃಷ್ಣಪ್ಪ, ಟೆಂಟ್ ರಾಮಣ್ಣ, ಬಿಜೆಪಿ ಮಂಜುನಾಥ್ , ಹೋಟೆಲ್ ನಾಗರಾಜು, ಕೆಳಗಲಕೋಟೆ ಹನುಮಂತರಾಜು ಸೇರಿದಂತೆ ಗೊಲ್ಲರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.