ವಿಜೃಂಭನೆಯಿಂದ ಜರುಗಿದ ಶ್ರೀಮಳೆರಾಜೇಂದ್ರಸ್ವಾಮಿ ಮಹಾರಥೋತ್ಸವ

| Published : Mar 20 2024, 01:16 AM IST

ವಿಜೃಂಭನೆಯಿಂದ ಜರುಗಿದ ಶ್ರೀಮಳೆರಾಜೇಂದ್ರಸ್ವಾಮಿ ಮಹಾರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಜಲತತ್ವ ಸಿದ್ಧಾಂತವನ್ನು ಪ್ರತಿಪಾದಿಸುವ, ಜಲವನ್ನು ಪೂಜಿಸುವ ಮಳೆರಾಯನ ಆರಾಧನೆಸುವ ಹೊಸ ಮುರನಾಳ ಗ್ರಾಮದ ಶ್ರೀ ಮಳೆರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಸಂಜೆ ಸಹಸ್ರಾರು ಭಕ್ತರ ಹರ್ಷೋದ್ಘಾರದ ಮಧ್ಯೆ ಅದ್ಧೂರಿಯಾಗಿ ರಥೋತ್ಸವ ಜರುಗಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಲತತ್ವ ಸಿದ್ಧಾಂತವನ್ನು ಪ್ರತಿಪಾದಿಸುವ, ಜಲವನ್ನು ಪೂಜಿಸುವ ಮಳೆರಾಯನ ಆರಾಧನೆಸುವ ಹೊಸ ಮುರನಾಳ ಗ್ರಾಮದ ಶ್ರೀ ಮಳೆರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಸಂಜೆ ಸಹಸ್ರಾರು ಭಕ್ತರ ಹರ್ಷೋದ್ಘಾರದ ಮಧ್ಯೆ ಅದ್ಧೂರಿಯಾಗಿ ರಥೋತ್ಸವ ಜರುಗಿತು.

ಬೆಳಗ್ಗೆ ಶ್ರೀ ಮಳೆರಾಜೇಂದ್ರಸ್ವಾಮಿಯ ಮೂರ್ತಿಗೆ ಅಭಿಷೇಕ ಮಹಾಮಂಗಳಾರತಿ, ಭಗವತದ್ಗೀತಾ ಪಾರಾಯಣ ನಡೆಯಿತು. ಪುಷ್ಪಾಲಂಕಾರದೊಂದಿಗೆ ವಿಷೇಶ ಪೂಜೆ ಸಲ್ಲಿಸಲಾಯಿತು. ಹರಕೆ ಹೊತ್ತ ಅನೇಕ ಭಕ್ತಾದಿಗಳು ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತಿರಿಸಿದರು.

ಮಧ್ಯಾಹ್ನ ಸಾವಿರಾರು ಮಹಿಳೆಯರ ಆರತಿ ಸೇವೆಯೋಂದಿಗೆ ಶ್ರೀ ಸ್ವಾಮಿಯ ಮೂರ್ತಿ ಹೊತ್ತ ಪಲ್ಲಕ್ಕಿ, ನಂದಿಕೋಲು ಪುರವಂತರ ಸೇವೆ,ಭಾಜಾಭಜಂತ್ರಿ, ಕರಡಿಮಜಲು ಸೇರಿದಂತೆ ಉತ್ಸವ {ಸಣ್ಣ ತೇರುಹುಚ್ಚಯ್ಯ} ಜರುಗಿತು.

ಆರತಿ ಸೇವೆಯಲ್ಲಿ ಸಹಸ್ರಾರು ಮಹಿಳೆಯರು ಪಾಲ್ಘೋಂಡಿದ್ದರು. ಮುಸ್ಲಿಂ ಮಹಿಳೆಯರು ದೀಪಾರತಿಗಳಿಗೆ ಏಣ್ಣೆ ನೀಡಿ ಸೇವೆ ಸಮರ್ಪಿಸಿದರು. ಸಣ್ಣ ರಥೋತ್ಸವ ನಂತರ ಶ್ರೀಮಠದಲ್ಲಿ ಮಳೆರಾಜೇಂದ್ರಸ್ವಾಮಿ ಮೂರ್ತಿಗೆ ಸಕಲ ಭಕ್ತಾದಿಗಳೊಡನೆ ವಿಶೇಷ ಮಂಗಳಾರತಿ ನೆರೆವೇರಿಸಿಲಾಯಿತು.

ಸಂಜೆ ಸಹಸ್ರಾರು ಜನರ ಮಧ್ಯೆ ಜಗದ್ಗುರು ಶ್ರೀ ಮಳೆರಾಜೇಂದ್ರಸ್ವಾಮಿಯ ಮಹಾರಥೋತ್ಸವ ಜರುಗಿತು. ನಂತರ ಜಾತ್ರೆಯಲ್ಲಿ ಪಾಲ್ಗೊಂಡ ಭಕ್ತರು ಮಹಾಪ್ರಸಾದ ಸ್ವೀಕರಿಸಿದರು. ಹಿಂದು-ಮುಸ್ಲಿಂ ಭಾವೈಕ್ಯತೆಯ ಮಠವಾಗಿದ್ದರಿಂದ ಸಕಲ ಧರ್ಮದವರು ಪಾಲ್ಗೊಂಡಿದ್ದರು. ಜಾತ್ರೆಯಲ್ಲಿ ಗ್ರಾಮದ ಯುವಕರು ಆರತಿಸೇವೆಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ಹಾಗೂ ಭಕ್ತಾದಿಗಳಿಗೆ ತಂಪುಪಾನಿಯ ವಿತರಿಸಿದರು.