ಶ್ರೀಮಠಕ್ಕೂ, ಹೆಬ್ಬಾರ ಸಮಾಜಕ್ಕೂ ಅವಿನಾವ ಭಾವ ಸಂಬಂಧ: ಶಂ.ನಂ.ಕೃಷ್ಣಮೂರ್ತಿ ಭಟ್

| Published : Oct 28 2025, 12:15 AM IST

ಶ್ರೀಮಠಕ್ಕೂ, ಹೆಬ್ಬಾರ ಸಮಾಜಕ್ಕೂ ಅವಿನಾವ ಭಾವ ಸಂಬಂಧ: ಶಂ.ನಂ.ಕೃಷ್ಣಮೂರ್ತಿ ಭಟ್
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಗಳ 75 ನೇ ವರ್ಧಂತಿ ಅಂಗವಾಗಿ ವಜ್ರೋತ್ಸವ ಭಾರತಿ ಆರೋಗ್ಯನಿಧಿ ಸ್ಥಾಪಿಸಲು ಶ್ರೀಮಠದಿಂದ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭಾಗೆ ₹75 ಸಾವಿರ ನೀಡಲಾಗುತ್ತಿದೆ ಎಂದು ಶೃಂಗೇರಿ ಮಠದ ಜಗದ್ಗುರುಗಳ ಆಪ್ತ ಸಹಾಯಕ ಶಂ.ನ.ಕೃಷ್ಣಮೂರ್ತಿ ಭಟ್ ಹೇಳಿದರು.

- ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾ ಸಭಾದ ವಾರ್ಷಿಕ ಸರ್ವ ಸದಸ್ಯರ ಸಭೆ, ಸನ್ಮಾನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ,ನರಸಿಂಹರಾಜಪುರ

ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಗಳ 75 ನೇ ವರ್ಧಂತಿ ಅಂಗವಾಗಿ ವಜ್ರೋತ್ಸವ ಭಾರತಿ ಆರೋಗ್ಯನಿಧಿ ಸ್ಥಾಪಿಸಲು ಶ್ರೀಮಠದಿಂದ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭಾಗೆ ₹75 ಸಾವಿರ ನೀಡಲಾಗುತ್ತಿದೆ ಎಂದು ಶೃಂಗೇರಿ ಮಠದ ಜಗದ್ಗುರುಗಳ ಆಪ್ತ ಸಹಾಯಕ ಶಂ.ನ.ಕೃಷ್ಣಮೂರ್ತಿ ಭಟ್ ಹೇಳಿದರು.ಭಾನುವಾರ ಕೊಪ್ಪದ ಗಾಯತ್ರಿ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭಾದಿಂದ ಏರ್ಪಡಿಸಿದ್ದ ವಾರ್ಷಿಕ ಸರ್ವ ಸದಸ್ಯರ ಸಭೆ ಮತ್ತು ಸನ್ಮಾನ ಸಮಾರಂಭದಲ್ಲಿ ಸಮಾಜ ನೀಡಿದ ಗೌರವ ಸ್ವೀಕರಿಸಿ ಮಾತನಾಡಿದರು. ಜಗದ್ಗುರುಗಳ ಸೇವೆ ಮಾಡುವ ಅವಕಾಶ ನನಗೆ ದೊರಕಿದ್ದು ಜಗದ್ಗುರುಗಳು ವಹಿಸಿದ ಕೆಲಸ ಮಾಡುತ್ತಿದ್ದೇನೆ. ಸಮಾಜದಲ್ಲಿರುವ ಬಡವರಿಗೆ ಅನಾರೋಗ್ಯ ಉಂಟಾದಾಗ ಆರ್ಥಿಕ ನೆರವಿಗೆ ಈ ನಿಧಿ ಬುನಾದಿಯಾಗಿ ಮತ್ತಷ್ಟು ಬೆಳೆದು ನೆರವು ನೀಡುವಂತಾಗಲಿ. ಹೆಬ್ಬಾರ ಸಮಾಜ ಶ್ರೀಮಠದ ಶಿಷ್ಯರಾಗಿ ಜಗದ್ಗುರುಗಳ ಆದೇಶ ಪರಿಪಾಲನೆ ಮಾಡುತ್ತಿದ್ದಾರೆ. ಶ್ರೀಮಠಕ್ಕೂ, ಹೆಬ್ಬಾರ ಸಮಾಜಕ್ಕೂ ಅವಿನಾವ ಭಾವ ಸಂಬಂಧವಿದ್ದು ಸಮಾಜ ಇನ್ನಷ್ಟು ಧಾರ್ಮಿಕ ಕಾರ್ಯ ನಡೆಸುವಂತಾಗಲಿ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾಸಭಾ ಅಧ್ಯಕ್ಷ ವಿಜಯರಂಗ ಕೋಟೆತೋಟ ಮಾತನಾಡಿ, ಮಹಾಸಭಾ ಸ್ಥಾಪನೆ ಯಾಗಿ ಎರಡೂವರೆ ದಶಕವಾಗಿದ್ದು ಕಳೆದ ವರ್ಷ ನಮ್ಮ ಸಂಘಟನೆ ಭಾರತೀಯ ವಿಶ್ವಸ್ಥ ಕಾಯ್ದೆಯಡಿ ನೋಂದಣಿ ಮಾಡಲಾಗಿದೆ. ಶ್ರೀಮಠದ ಶಿಷ್ಯರಾಗಿ ಜಗದ್ಗುರುಗಳ ಆದೇಶದಂತೆ ಧಾರ್ಮಿಕ ಕಾರ್ಯಕ್ರಮ ಅನುಷ್ಠಾನಗೊಳಿಸ ಲಾಗುತ್ತಿದೆ. ಪ್ರತಿ ವರ್ಷ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತಿದ್ದು 10 ಘಟಕದ ಮೂಲಕ ಚಟುವಟಿಕೆ ನಡೆಸಲಾಗುತ್ತಿದೆ ಎಂದರು.ವಜ್ರೋತ್ಸವ ಭಾರತೀ ಆರೋಗ್ಯ ನಿಧಿಗೆ ಶೆಟ್ಟಿಹಳ್ಳಿ ಜಾನಕಮ್ಮಶಂಕರರಾವ್ ₹1.5 ಲಕ್ಷ ಹಾಗೂ ಗೋಳ್ಗಾರ್ ನಾಗೇಂದ್ರರಾವ್ ಹೆಸರಿನಲ್ಲಿ ಅವರ ಪುತ್ರ ಪ್ರಸನ್ನ ₹25 ಸಾವಿರ ನೀಡಿದರು.ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ತುಂಬ್ರಮನೆ ಚಂದ್ರಶೇಖರ್, ಎನ್.ಎಂ.ಸುಮಂತ, ಮಕ್ಕಿಮನೆ ಚಂದ್ರಮೋಹನ್, ಸತೀಶಚಂದ್ರ, ಎಚ್.ಎಸ್.ಮಹೇಶ್, ಕೆ.ವಿ.ಕೃಷ್ಣಮೂರ್ತಿ, ಜಿ.ಎಸ್.ಪ್ರಸನ್ನ, ಧನ್ಯಶ್ರೀ, ಸಮೃದ್ಧಿ ವಿ ಹೆಬ್ಬಾರ್, ಅಂಕಿತಾ, ಮಿಥುನ್ ಗುಡ್ಡೇತೋಟ, ಗೌತಮಿ ಮಧುಕರ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಜಿ.ಸಿ.ಗೋಪಾಲಕೃಷ್ಣ, ಶಿವಶಂಕರರಾವ್, ಪ್ರವೀಣ್ ಕೆಸವೆ, ಯಡಗೆರೆ ಗೋಪಾಲ್, ಸತ್ಯನಾರಾಯಣ, ಜಿ.ಎಸ್.ನಟರಾಜ್, ಚರಣ ಹೆಬ್ಬಾರ, ಎಚ್.ಸಿ.ಗಣೇಶ್‌ರಾವ್ ಇತರರು ಇದ್ದರು.