ಶೃಂಗೇರಿತಾಲೂಕಿನಾದ್ಯಂತ ಕಳೆದ 3-4ದಿನಗಳಿಂದ ಅಬ್ಬರಿಸುತ್ತಿದ್ದ ಮಳೆ ಮಂಗಳವಾರ ಮಧ್ಯಾಹ್ನದ ವೇಳೆಗೆ ತಗ್ಗಿದರೂ ಇದರಿಂದ ಉಂಟಾಗಿರುವ ಪರಿಣಾಮಕ್ಕೆ ಜನ ಜೀವನ ಅಸ್ತವ್ಯಸ್ತವಾಗಿದೆ.

ಕನ್ನಡಪ್ರಭ ವಾರ್ತೆ, ಶೃಂಗೇರಿ

ತಾಲೂಕಿನಾದ್ಯಂತ ಕಳೆದ 3-4ದಿನಗಳಿಂದ ಅಬ್ಬರಿಸುತ್ತಿದ್ದ ಮಳೆ ಮಂಗಳವಾರ ಮಧ್ಯಾಹ್ನದ ವೇಳೆಗೆ ತಗ್ಗಿದರೂ ಇದರಿಂದ ಉಂಟಾಗಿರುವ ಪರಿಣಾಮಕ್ಕೆ ಜನ ಜೀವನ ಅಸ್ತವ್ಯಸ್ತವಾಗಿದೆ.

ಪ್ರಮುಖವಾಗಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದೆಲ್ಲೆಡೆ ವಿದ್ಯುತ್ ಇಲ್ಲದೇ ಜನ ಪರದಾಡುವಂತಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಗುರುವಾರ ಸಂಜೆ ಕಡಿತಗೊಂಡಿದ್ದ ವಿದ್ಯುತ್ ಸಂಪರ್ಕ ಮಂಗಳವಾರದ ಸಂಜೆ ಬಂದು ಜನ ನಿಟ್ಟುಸಿರು ಬಿಡುವಂತಾಗಿದೆ. ಪಟ್ಟಣದಲ್ಲಿ ಕೆಲ ಹೊತ್ತು ವಿದ್ಯುತ್ ಬಂದು ಹೋಗಿ ಕಣ್ಣಾಮುಚ್ಚಾಲೆ ಯಾಗುತ್ತಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಕಳೆದ 5 ದಿನಗಳಿಂದ ವಿದ್ಯುತ್ ಸಂಪರ್ಕವೇ ಇಲ್ಲದೇ, ಗ್ರಾಮಗಳು ಕಗ್ಗತ್ತಲಲ್ಲಿ ಮುಳುಗಿದ್ದವು, ಮೊಬೈಲ್ ಗಳು ,ಇನ್ ವರ್ಟರ್ ಬ್ಯಾಟರಿಗಳು ಚಾರ್ಜ್ ಇಲ್ಲದೇ ಸಂಪೂರ್ಣ ನಿಷ್ಕ್ರೀಯವಾಗಿ ಕುಡಿಯುವ ನೀರಿಗೂ ಪರ ದಾಟ ಕಂಡುಬಂದಿತು. ಗ್ರಾಮೀಣ ಪ್ರದೇಶಗಳಲ್ಲಿ ಕತ್ತಲ ಭಾಗ್ಯ ಇನ್ನೂ ಮುಂದುವರಿದಿದೆ. ವರ್ಕ್ ಫ್ರಮ್ ಹೋಮ್ ಕೆಲಸ ಮಾಡುವವರು ಕರೆಂಟ್, ಇಂಟರ್ ನೆಟ್ ಇಲ್ಲದೆ ಮರಳಿ ಪಟ್ಟಣಗಳಿಗೆ ತೆರಳುವ ಯೋಚನೆಯಲ್ಲಿದ್ದರು.

ಕಚೇರಿ, ನೆಮ್ಮದಿ ಕೇಂದ್ರ,ಗ್ರಾಮಒನ್ ಕೇಂದ್ರ, ಪಡಿತರ ಅಂಗಡಿಗಳಲ್ಲಿ ಎಲ್ಲೆಡೆ ವಿದ್ಯುತ್ ಇಲ್ಲದೇ ಕೆಲಸ ಕಾರ್ಯಗಳೇ ಸ್ಥಬ್ದಗೊಂಡಿವೆ. ಪಟ್ಟಣದಲ್ಲಿ ವಿದ್ಯುತ್ ಅವಲಂಬಿತ ವಾಣಿಜ್ಯಚಟುವಟಿಕೆಗಳು, ಹೋಟೇಲುಗಳು ಬಹುತೇಕ ಬಂದ್ ಆಗಿದ್ದವು. ಕುಗ್ರಾಮಗಳಲ್ಲಿ ಮೊಬೈಲ್ ಸಂಪರ್ಕವಿಲ್ಲದೇ ತುರ್ತು ಕೆಲಸ ಕಾರ್ಯಗಳಿಗೆ ಪರದಾಡುತ್ತಿರುವುದು ಕಂಡು ಬಂದಿತು.7 ಶ್ರೀ ಚಿತ್ರ 5-ಕೃಷ್ಣ ಸಾಲ್ಮರ

7 ಶ್ರೀ ಚಿತ್ರ 6,ರಾಜೇಶ್ ಮೇಘಳಬೈಲು