ಸಾರಾಂಶ
- ಮಾಜಿ ಶಾಸಕ ಎಚ್.ಪಿ. ಮಂಜುನಾಥ್
ಕನ್ನಡಪ್ರಭ ವಾರ್ತೆ ಹುಣಸೂರುವಿ. ಶ್ರೀನಿವಾಸಪ್ರಸಾದ್ ಹಾಗೂ ಎಚ್. ವಿಶ್ವನಾಥ್ ನನ್ನ ರಾಜಕೀಯ ಜೀವನಕ್ಕೆ ಮೊದಲ ಮೆಟ್ಟಿಲು ಹಾಕಿಕೊಟ್ಟ ಮಹನೀಯರಾಗಿದ್ದಾರೆ ಎಂದು ಎಂದು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ವಿ. ಶ್ರೀನಿವಾಸಪ್ರಸಾದ್ ಸ್ಮರಣಾರ್ಥ ಆಯೋಜಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.ನನ್ನ ರಾಜಕೀಯ ಮೊದಲ ಹೆಜ್ಜೆಯಲ್ಲಿ ಅವರ ದೊಡ್ಡ ಕೊಡುಗೆ ಇದೆ. ನನಗೆ ಮೊದಲ ಸಲ ಕಾಂಗ್ರೆಸ್ ಟಿಕೆಟ್ ದೊರೆಯಲು ಕಾರಣರು. ಹುಣಸೂರಿನಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದ ಶ್ರೀನಿವಾಸಪ್ರಸಾದ ಅವರು ನನ್ನ ಮೊದಲ ಚುನಾವಣೆ ವೇಳೆ ಸಿದ್ದರಾಮಯ್ಯ ಅವರನ್ನು ಹುಣಸೂರಿಗೆ ಸ್ವತಃ ಕರೆತಂದು ನನ್ನ ಪರ ಪ್ರಚಾರ ನಡೆಸಿ, ಗೆಲುವಿಗೆ ಕಾರಣರಾಗಿದ್ದವರೆಂದು ಸ್ಮರಿಸಿದರು.
ವಿ. ಶ್ರೀನಿವಾಸಪ್ರಸಾದ್ ಅವರು ತಮಗೆ ಸಿಕ್ಕ ಅಧಿಕಾರದ ಅವಧಿಯಲ್ಲಿ ದಮನಿತರು, ಬಡವರ ಪರವಾಗಿ ಕೆಲಸ ಮಾಡಿ ಸೈ ಎನಿಸಿಕೊಂಡವರು. ಯುವ ರಾಜಕಾರಣಿಗಳನ್ನು ಬೆಳೆಸಿ, ಅಧಿಕಾರ ಕಲ್ಪಿಸಿಕೊಟ್ಟವರು. ನೇರ, ನಿಷ್ಟುರವಾದಿ, ಸದಾ ನ್ಯಾಯದ ಪರವಾಗಿ ರಾಜಕಾರಣ ನಡೆಸಿದ ಶ್ರೀನಿವಾಸಪ್ರಸಾದ ಅವರು ಸಜ್ಜನ ರಾಜಕಾರಣಿ ಎಂದು ಸ್ಮರಿಸಿದರು.ಶ್ರೀನಿವಾಸಪ್ರಸಾದ ಅವರ ಸಹೋದರ ವಿ. ರಾಮಸ್ವಾಮಿ ಮಾತನಾಡಿ, ಶ್ರೀನಿವಾಸಪ್ರಸಾದ್ ಹುಣಸೂರಿನೊಂದಿಗೆ ಅದರಲ್ಲೂ ಮಂಜುನಾಥ ಅವರ ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಕೊನೆತನಕವು ಸ್ವಾಭಿಮಾನಿಯಾಗಿದ್ದರೆಂದರು.
ಮುಖಂಡರಾದ ಹರಿಹರ ಆನಂದಸ್ವಾಮಿ, ಡಿ.ಕೆ. ಕುನ್ನೇಗೌಡ, ಹಂದನಹಳ್ಳಿ ಸೋಮಶೇಖರ್, ಎಪಿಎಂಸಿ.ಮಾಜಿ ಅಧ್ಯಕ್ಷ ರವಿಗೌಡ, ಅಣ್ಣಯ್ಯನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣ್, ಕಾರ್ಯಾಧ್ಯಕ್ಷ ವಕೀಲ ಪುಟ್ಟರಾಜು, ಎಸ್. ಜಯರಾಂ ಮಾತನಾಡಿದರು.ಸಭೆಯಲ್ಲಿ ಪಟ್ಟಣ ಕಾಂಗ್ರೆಸ್ ಅಧ್ಯಕ್ಷ ಕಲ್ಕುಣಿಕೆ ರಮೇಶ್, ಪ್ರೇಮಕುಮಾರ್, ಮುಖಂಡರಾದ ಬಿಳಿಕೆರೆ ಬಸವರಾಜು, ಎ.ಪಿ. ಸ್ವಾಮಿ, ಶಿರೇನಹಳ್ಳಿ ಬಸವರಾಜೇಗೌಡ, ಚಿಕ್ಕಸ್ವಾಮಿ, ಕೆಂಪೇಗೌಡ ಯುವ ಪಡೆ ಅಧ್ಯಕ್ಷ ಪಾಂಡುಕುಮಾರ್, ರಾಘು, ಕುಮಾರ್, ಶ್ರೀನಿವಾಸ್, ಜಾಕೀರ್ ಹುಸೇನ್, ಶಾಂತಾ ರಮೇಶ್, ಕಲ್ಪನಾ, ಸುಮತಿ, ನೇತ್ರ, ರೇಣುಕ ಭಾಗವಹಿಸಿದ್ದರು.