ಸಾರಾಂಶ
ಚಾಮರಾಜನಗರ ಜಿಲ್ಲೆಗೆ ಸಂಸದರಾಗಿದ್ದ ವಿ.ಶ್ರೀನಿವಾಸ ಪ್ರಸಾದ್ ಅವರ ಕೊಡುಗೆ ಅಪಾರ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಲಹಳ್ಳಿ ತೋಟೇಶ್ ಹೇಳಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಚಾಮರಾಜನಗರ ಜಿಲ್ಲೆಗೆ ಸಂಸದರಾಗಿದ್ದ ವಿ.ಶ್ರೀನಿವಾಸ ಪ್ರಸಾದ್ ಅವರ ಕೊಡುಗೆ ಅಪಾರ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಲಹಳ್ಳಿ ತೋಟೇಶ್ ಹೇಳಿದರು.ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಅಗಲಿದ ಹಿರಿಯ ಚೇತನ ಶ್ರೀನಿವಾಸ ಪ್ರಸಾದ್ ನಿಧನದ ಹಿನ್ನೆಲೆ ಆಯೋಜಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿ, ಶ್ರೀನಿವಾಸ ಪ್ರಸಾದ್ ಅವರು ಅಪರೂಪದ ವ್ಯಕ್ತಿತ್ವದವರು. ಅವರ ನಿಧನದಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ಅವರೊಬ್ಬ ಶ್ರೇಷ್ಠ ಮತ್ತು ನೇರ ನುಡಿಯ ರಾಜಕಾರಣಿ ಎಂದರು.ಮೊಂಬತ್ತಿ ಬೆಳಗಿ ಶ್ರದ್ದಾಂಜಲಿ: ಅಗಲಿದ ಹಿರಿಯ ಚೇತನ, ಕೇಂದ್ರದ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರಿಗೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು. ಪ್ರಸಾದ್ ಅವರ ಭಾವಚಿತ್ರವನ್ನು ಇಟ್ಟು ಮೊಂಬತ್ತಿ ಬೆಳಗಿ, ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಮೌನಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಬಸ್ತೀಪುರ ರವಿ, ನಗರಸಭೆ ಮಾಜಿ ಅಧ್ಯಕ್ಷ ಬಸ್ತೀಪುರ ಶಾಂತರಾಜು, ಬೀಮನಗರ ರಮೇಶ್, ಸದಸ್ಯರುಗಳಾದ ಜಯಮೇರಿ, ರಾಘವೇಂದ್ರ, ಎ.ಪಿ.ಶಂಕರ್, ಮಾಜಿ ಉಪಾಧ್ಯಕ್ಷ ಹರ್ಷ, ಕೃಷ್ಣವೇಣಿ, ನರಸಿಂಹನ್, ಮಾಜಿ ಪುರಸಭಾ ಸದಸ್ಯ ಲಿಂಗರಾಜು, ಮುಖಂಡರುಗಳಾದ ಪಾಪಣ್ಣ, ಖಿಜರ್, ಸೋಮಣ್ಣ, ರಾಜೇಶ್, ಆಟೋ ಶಿವು, ಪ್ರಭುಸ್ವಾಮಿ, ಬಸಂತ್, ಚಿನ್ನಸ್ವಾಮಿ ಮಾಳಿಗೆ, ವಾಚ್ ಕುಮಾರ್, ಸಿಗ್ಬತ್ ಉಲ್ಲಾ, ಶಿವಮಲ್ಲು, ರಮೇಶ್, ರಾಜೇಂದ್ರ, ಸ್ವಾಮಿ ನಂಜಪ್ಪ, ತಮ್ಮಯ್ಯ, ಇಮ್ರಾನ್, ಆನಂದ್, ದಿಲೀಪ್, ಭೀಮನಗರ ಯಜಮಾನರು ಪಾಪಣ್ಣ ಇನ್ನಿತರಿದ್ದರು.