ಶ್ರೀರಂಗಪಟ್ಟಣ ದಸರಾ; ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಗೆಲುವಿಗಾಗಿ ಸೆಣಸಾಟ

| Published : Sep 27 2025, 12:00 AM IST

ಸಾರಾಂಶ

21 ರಿಂದ 50 ವರ್ಷ ಒಳಪಟ್ಟವರ ಪುರುಷರ ವಿಭಾಗದಲ್ಲಿ ಅರಳಿಕಟ್ಟೆ ಬಾಯ್ಸ್ ತಂಡ- ಪ್ರಥಮ ಸ್ಥಾನ ಮತ್ತು ಶ್ರೀರಂಗಪಟ್ಟಣ ಪೊಲೀಸ್ ತಂಡ-ದ್ವಿತೀಯ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಅಗ್ರಹಾರ ಮಂಜುಳ ತಂಡ- ಪ್ರಥಮ ಸ್ಥಾನ ಹಾಗೂ ಶ್ರೀರಂಗಪಟ್ಟಣ ರೋಟರಿ ತಂಡ- ದ್ವಿತೀಯ ಸ್ಥಾನ ಪಡೆಯಿತು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣ ದಸರಾ ಅಂಗವಾಗಿ ಪಟ್ಟಣದ ತಾಲೂಕು ಕ್ರೀಡಾಂಗಣ ಆವರಣದಲ್ಲಿ ನಡೆದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ವಿವಿಧ ಸಂಘ ಸಂಸ್ಥೆಗಳ 100ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿ ತಮ್ಮ ಗೆಲುವಿಗಾಗಿ ಸೆಣಸಾಟ ನಡೆಸಿದರು.

20 ವರ್ಷ ಒಳಪಟ್ಟ ಹಾಗೂ 21 ವರ್ಷದಿಂದ 50 ವರ್ಷದ ವಯೋಮಾನದ ಮಹಿಳೆಯರು ಮತ್ತು ಪುರುಷರ ಪ್ರತ್ಯೇಕ ತಂಡಗಳಿಗೆ ನಡೆದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಅಂತಿಮವಾಗಿ 20 ವರ್ಷ ಒಳಪಟ್ಟವರ ಪುರುಷರ ವಿಭಾಗದಲ್ಲಿ ಅರಳಿಕಟ್ಟೆ ಬಾಯ್ಸ್ ತಂಡ-ಪ್ರಥಮ ಸ್ಥಾನ ಮತ್ತು ಶ್ರೀರಂಗಪಟ್ಟಣ ಬಾಯ್ಸ್ ತಂಡ -ದ್ವಿತೀಯ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಕುಮಾರಿ ಹರ್ಷಿತ ಮತ್ತು ತಂಡ -ಪ್ರಥಮ ಸ್ಥಾನ ಹಾಗೂ ಕುಮಾರಿ ವರ್ಷಿತ ಮತ್ತು ತಂಡ- ದ್ವಿತೀಯ ಸ್ಥಾನ ಪಡೆಯಿತು.