ಶ್ರೀಧರ್ಮಸ್ಥಳ ಸಂಸ್ಥೆ ಹಲವು ಜನಪರ ಕಾರ್ಯ ನಡೆಸುತ್ತಿದೆ. ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಇದೀಗ 31 ಮಂದಿ ನಿರ್ಗತಿಕರಿಗೆ ವಾತ್ಸಲ್ಯ ಕಿಟ್, ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು 1 ಸಾವಿರ ರು. ಜೊತೆಗೆ ಅವರಿಗೆ ಅತ್ಯಗತ್ಯವಾದ ಪರಿಕರ ಆಹಾರ ಪದಾರ್ಥವನ್ನು ಹಲವು ವರ್ಷಗಳಿಂದ ಒದಗಿಸುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಶ್ರೀಧರ್ಮಸ್ಥಳ ಗ್ರಾಮೀಣ ಸಂಸ್ಥೆ ತಾಲೂಕಿನ ಬಡವರು ಹಾಗೂ ನಿರ್ಗತಿಕರ ನೆರವಿಗೆ ಸಹಕಾರ ನೀಡುತ್ತಾ ಬಂದಿದೆ ಎಂದು ಮೈಸೂರು ಪ್ರಾದೇಶಿಕ ನಿರ್ದೇಶಕ ಜಯಂತ್ ಪೂಜಾರಿ ತಿಳಿಸಿದರು.

ಪಟ್ಟಣದ ರಂಗನಾಥ ನಗರದಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ನೀಡಲಾದ ನಿರ್ಗತಿಕರ ವಾತ್ಸಲ್ಯ ಕಿಟ್ ಹಾಗೂ ಮಾಸಾಶನ ವಿತರಿಸಿ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಹಲವು ಜನಪರ ಕಾರ್ಯ ನಡೆಸುತ್ತಿದೆ ಎಂದರು.

ಕ್ಷೇತ್ರದಲ್ಲಿ ಇದೀಗ 31 ಮಂದಿ ನಿರ್ಗತಿಕರಿಗೆ ವಾತ್ಸಲ್ಯ ಕಿಟ್, ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು 1 ಸಾವಿರ ರು. ಜೊತೆಗೆ ಅವರಿಗೆ ಅತ್ಯಗತ್ಯವಾದ ಪರಿಕರ ಆಹಾರ ಪದಾರ್ಥವನ್ನು ಹಲವು ವರ್ಷಗಳಿಂದ ಒದಗಿಸುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಿರ್ಗತಿಕರನ್ನು ಗುರುತಿಸುವ ಕಾರ್ಯ ನಡೆಸುತ್ತಿದೆ ಎಂದರು.

ಈ ವೇಳೆ ಕ್ಷೇತ್ರದ ಯೋಜನಾಧಿಕಾರಿ ಗಣಪತಿ ಭಟ್, ಪುರಸಭಾ ಮಾಜಿ ಸದಸ್ಯರಾದ ಎಸ್.ಟಿ.ರಾಜು, ನಳಿನ ಸೇರಿದಂತೆ ಸಂಘದ ಪದಾಧಿಕಾರಿಗಳು ಸೇರಿದಂತೆ ಇತರರ ಉಪಸ್ಥಿತಿಯಲ್ಲಿ ನಿರ್ಗತಿಕರಿಗೆ ವಾತ್ಸಲ್ಯ ಕಿಟ್‌ನ್ನು ವಿತರಿಸಿದರು.

ಮಡಿವಾಳ ಮಾಚೀದೇವರ ಜಯಂತಿ ಆಚರಣೆ

ಪಾಂಡವಪುರ:

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಮಡಿವಾಳ ಮಾಚೀದೇವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಮಡಿವಾಳ ಮಾಚೀದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಬಿಜೆಪಿ ತಾಲೂಕು ಅಧ್ಯಕ್ಷ ಧನಂಜಯ್, ಒಬಿಸಿ ಅಧ್ಯಕ್ಷ ರಾಮಚಂದ್ರು ಚಾಲನೆ ನೀಡಿದರು.

ಒಬಿಸಿ ಅಧ್ಯಕ್ಷ ರಾಮಚಂದ್ರು ಮಾತನಾಡಿ, ಮಡಿವಾಳ ಮಾಚೀದೇವರು ಬಸವಣ್ಣನವರ ಆ ಸ್ಥಾನದಲ್ಲಿ ವಚನ ಸಾಹಿತ್ಯಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದರು. ಬಸವಣ್ಣನವರ ಆದೇಶದಂತೆ ವಚನ ಸಾಹಿತ್ಯ ಸಂರಕ್ಷಣೆ ಮಾಡಿಕೊಂಡು ಬಂದಿದ್ದಾರೆ ಎಂದರು.

ವಚನ ಸಾಹಿತ್ಯ ಕ್ಷೇತ್ರಕ್ಕೆ ಬಸವಣ್ಣ ಅವರ ಕೊಡುಗೆ ಅಪಾರವಾಗಿದೆ. ಹಾಗಾಗಿ ಮಡಿವಾಳ ಮಾಚೀದೇವರು ಜಯಂತಿಯನ್ನು ಆಚರಿಸುತ್ತಿದ್ದೇವೆ. ಬಿಜೆಪಿ ಕಾರ್ಯಾಚಾಲಯದಲ್ಲಿ ಎಲ್ಲಾ ಶರಣರ ಜಯಂತಿಯನ್ನು ಆಚರಣೆ ಮಾಡುವ ಮೂಲಕ ಶರಣರನ್ನು ಸ್ಮರಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಈ ವೇಳೆ ಮಂಡಲದ ಅಧ್ಯಕ್ಷ ಧನಂಜಯ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್, ದುರ್ಗೇಶ್, ಬಳಘಟ್ಟ ಅಶೋಕ್, ಶಂಭೂನಹಳ್ಳಿ ಮಂಜುನಾಥ್, ನಗರ ಅಧ್ಯಕ್ಷ ಸೋಮಶೇಖರ್, ಚಿಕ್ಕಮರಳಿ ನವೀನ್. ಅಗಟಹಳ್ಳಿ ರಘು. ನಾಗಣ್ಣ ಸೇರಿದಂತೆ ಹಲವರು ಹಾಜರಿದ್ದರು.