ದ.ಕ. ಜಿಲ್ಲೆಯ ಪ್ರತಿಷ್ಠಿತ ಸೌಹಾರ್ದ ಸಹಕಾರಿ ಸಂಸ್ಥೆ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ 2026 ನೇ ಅರ್ಧ ಆರ್ಥಿಕ ವರ್ಷ ಸೆಪ್ಟೆಂಬರ್ 30 ರ ಅಂತ್ಯದಲ್ಲಿ ಕಳೆದ ಸಾಲಿಗಿಂತ ಶೇಕಡ 35ರಷ್ಟು ಹೆಚ್ಚಿನ ನಿವ್ವಳ ಲಾಭ ಗಳಿಸಿ ಅಪೂರ್ವ ಸಾಧನೆ ಮಾಡಿದೆ. ಹಾಗೆಯೇ ಗಳಿಸಿದ ಲಾಭದಲ್ಲಿ ತೆಗೆದಿಟ್ಟ ಒಟ್ಟು ರಿಸರ್ವ್ ಫಂಡ್ 6 ಕೋಟಿ ರು. ಇದ್ದು, ಇದು ಸಂಸ್ಥೆಯ ಸದೃಢತೆಯ ಸಂಕೇತವಾಗಿದೆ. ಅಲ್ಲದೆ ಕಳೆದ ತಿಂಗಳು ಒಂದು ಕೋಟಿ ರು. ವೆಚ್ಚದಲ್ಲಿ ಸ್ವಂತ ಜಾಗವನ್ನೂ ಖರೀದಿಸಿ ಆರನೇ ಶಾಖೆಯನ್ನು ತೆರೆದಿದೆ.
ಮಂಗಳೂರು: ದ.ಕ. ಜಿಲ್ಲೆಯ ಪ್ರತಿಷ್ಠಿತ ಸೌಹಾರ್ದ ಸಹಕಾರಿ ಸಂಸ್ಥೆ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ 2026 ನೇ ಅರ್ಧ ಆರ್ಥಿಕ ವರ್ಷ ಸೆಪ್ಟೆಂಬರ್ 30 ರ ಅಂತ್ಯದಲ್ಲಿ ಕಳೆದ ಸಾಲಿಗಿಂತ ಶೇಕಡ 35ರಷ್ಟು ಹೆಚ್ಚಿನ ನಿವ್ವಳ ಲಾಭ ಗಳಿಸಿ ಅಪೂರ್ವ ಸಾಧನೆ ಮಾಡಿದೆ. ಹಾಗೆಯೇ ಗಳಿಸಿದ ಲಾಭದಲ್ಲಿ ತೆಗೆದಿಟ್ಟ ಒಟ್ಟು ರಿಸರ್ವ್ ಫಂಡ್ 6 ಕೋಟಿ ರು. ಇದ್ದು, ಇದು ಸಂಸ್ಥೆಯ ಸದೃಢತೆಯ ಸಂಕೇತವಾಗಿದೆ. ಅಲ್ಲದೆ ಕಳೆದ ತಿಂಗಳು ಒಂದು ಕೋಟಿ ರು. ವೆಚ್ಚದಲ್ಲಿ ಸ್ವಂತ ಜಾಗವನ್ನೂ ಖರೀದಿಸಿ ಆರನೇ ಶಾಖೆಯನ್ನು ತೆರೆದಿದೆ.ಸಹಕಾರಿಯ ಉದ್ಯೋಗಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಶ್ರೀಶಾ ಸೌಹಾರ್ದ ಸೊಸೈಟಿ ಅಧ್ಯಕ್ಷ ಎಂ.ಎಸ್. ಗುರುರಾಜ್ ರವರು, ಶ್ರೀಶಾ ಸೊಸೈಟಿಯ ನಿವ್ವಳ ಲಾಭ 2025 ಸೆಪ್ಟೆಂಬರ್ 30 ಕ್ಕೆ 95 ಲಕ್ಷ ರು.ಗಳಿದ್ದರೆ ಈ ಅರ್ಧ ಆರ್ಥಿಕ ವರ್ಷ ಸೆಪ್ಟೆಂಬರ್ 30 ಕ್ಕೆ 140 ಲಕ್ಷ ರು. ನಿವ್ವಳ ಲಾಭ ಗಳಿಸಿ ಶೇ.35ರ ಪ್ರಗತಿ ಸಾಧಿಸಿದೆ. ಸಾಮಾನ್ಯವಾಗಿ ಯಾವುದೇ ಹಣಕಾಸು ಸಂಸ್ಥೆಗಳಿಗೆ ಮಳೆ, ಶೈಕ್ಷಣಿಕ ವರ್ಷದ ಆರಂಭವೂ ಸೇರಿದಂತೆ ಅನೇಕ ಕಾರಣಗಳಿಂದ ಮೊದಲ ಅರ್ಧ ಆರ್ಥಿಕ ವರ್ಷದಲ್ಲಿ ಲಾಭ ಗಳಿಕೆಯ ಪ್ರಮಾಣ ಕಡಿಮೆ ಇರುವುದು ಸ್ವಾಭಾವಿಕ. ಈ ಅವಧಿಯಲ್ಲಿಯೇ ಹೆಚ್ಚಿನ ಶ್ರಮವಹಿಸಿ ಹೆಚ್ಚಿನ ಲಾಭ ಗಳಿಸುವುದು ಶ್ರೀಶಾ ಸೊಸೈಟಿಯ ಯೋಚನೆ. ಇದು ಆರ್ಥಿಕ ವರ್ಷದ ಅಂತ್ಯದ ಒತ್ತಡವನ್ನು ಕಡಿಮೆ ಮಾಡುತ್ತದೆ.
ಈ ಸಾಧನೆಗೆ ಆಡಳಿತ ಮಂಡಳಿಯ ಶಿಸ್ತುಬದ್ಧ ಆಡಳಿತ ಮತ್ತು ಸಹಕಾರಿಯ ಸಿಬ್ಬಂದಿ ವರ್ಗದ ಅವಿರತ ಶ್ರಮ ಮತ್ತು ನಗುಮುಖದ ಸೇವೆಯೇ ಕಾರಣ. ಆದ್ದರಿಂದಲೇ ಅನೇಕ ವರ್ಷಗಳಿಂದ ಸದಸ್ಯರಿಗೆ ನಿರಂತರ ಶೇಕಡ 25 ಡಿವಿಡೆಂಟ್ ನೀಡಲು ಸಾಧ್ಯವಾಗುತ್ತಿದೆ. ನಿವ್ವಳ ಲಾಭ ಗಳಿಕೆಯ ಹೆಚ್ಚಳಕ್ಕೆ ಸದಸ್ಯರ ಅವಶ್ಯಕತೆಗಳಿಗೆ ನಾವು ನೀಡುವ ತಡಮಾಡದ ಸ್ಪಂದನೆ ಹಾಗೂ ಸಾಲ ವಸೂಲಾತಿಯೇ ಕಾರಣ ಎಂದರು.ಕಳೆದ ತಿಂಗಳು ಸೆಪ್ಟೆಂಬರ್‌ನಲ್ಲಿ ಪದವಿನಂಗಡಿಯ ಸನ್ನಿಧಿ ಎನ್ಲೆವ್ ವಾಣಿಜ್ಯ ಕಟ್ಟಡದಲ್ಲಿ ಸ್ವಂತ ಸ್ಥಳವನ್ನು ಖರೀದಿಸಿ ಆರನೇ ಶಾಖೆಯನ್ನು ತೆರೆಯಲಾಗಿದ್ದು, ಸದಸ್ಯರ ಉತ್ತಮ ಸ್ಪಂದನೆಯಿಂದಾಗಿ ಶಾಖೆಯು ಅತ್ಯುತ್ತಮ ವ್ಯವಹಾರ ನಡೆಸುತ್ತಿದೆ.
ಸಮಾಜಮುಖಿ ಕಾರ್ಯಕ್ಕೆ ಪ್ರೋತ್ಸಾಹ: ಶ್ರೀಶಾ ಸೊಸೈಟಿಯು ಆರಂಭದ ದಿನಗಳಿಂದಲೂ ತಾನು ಗಳಿಸಿದ ಲಾಭದ ದೊಡ್ಡ ಪಾಲನ್ನು ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವ ಮೂಲಕ ಮರಳಿ ಸಮಾಜಕ್ಕೆ ನೀಡುತ್ತಾ ಬಂದಿದ್ದು ಮಾದರಿಯಾಗಿದೆ. ರಾಜ್ಯದ ಅನೇಕ ಜಿಲ್ಲೆಗಳ ಸೌಹಾರ್ದ ಸೊಸೈಟಿಗಳ ಆಡಳಿತ ಮಂಡಳಿಯವರು ಆಡಳಿತ ಮತ್ತು ನಿರ್ವಹಣೆಗಳ ಅಧ್ಯಯನಕ್ಕಾಗಿ ಶ್ರೀಶಾ ಸೊಸೈಟಿಗೆ ಭೇಟಿ ನೀಡುತ್ತಿವೆ. 2024 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಬೆಂಗಳೂರು ಇದರ ವತಿಯಿಂದ ‘ಉತ್ತಮ ಸಹಕಾರಿ’ ಎಂಬ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಶ್ರೀಶಾ ಸೊಸೈಟಿ ಅಧ್ಯಕ್ಷ ಎಂ.ಎಸ್. ಗುರುರಾಜ್ ಅವರಿಗೆ ನೀಡಿ ಸನ್ಮಾನಿಸಲಾಗಿತ್ತು.