ಸಾರಾಂಶ
ಅಮೀನಗಡ: ಪಟ್ಟಣದ ಸೂಳೇಬಾವಿ ಕ್ರಾಸ್‌ನಲ್ಲಿರುವ ಶ್ರೀ ಶೈಲಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯ ನಿಮಿ ಹಿಂದಿನದಿನರಾತ್ರಿ ಶಿವಯೋಗದ ವಿಶೇಷಪೂಜೆ ಭಕ್ತರಿಗೆ ದರ್ಶನ ಭಾಗ್ಯ, ಮರುದಿನ ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಶ್ರೀಶೈಲ ಮಲ್ಲಿಕಾರ್ಜುನ ದೇವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಕನ್ನಡಪ್ರಭ ವಾರ್ತೆ ಅಮೀನಗಡ
ಪಟ್ಟಣದ ಸೂಳೇಬಾವಿ ಕ್ರಾಸ್‌ನಲ್ಲಿರುವ ಶ್ರೀ ಶೈಲಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯ ನಿಮಿ ಹಿಂದಿನದಿನರಾತ್ರಿ ಶಿವಯೋಗದ ವಿಶೇಷಪೂಜೆ ಭಕ್ತರಿಗೆ ದರ್ಶನ ಭಾಗ್ಯ, ಮರುದಿನ ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಶ್ರೀಶೈಲ ಮಲ್ಲಿಕಾರ್ಜುನ ದೇವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.ರಥೋತ್ಸವಕ್ಕೆ ಪೊಲೀಸರನ್ನು ಮಂಗಳವಾದ್ಯಗಳೊದಿಗೆ ಕರೆ ತಂದು ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥೋತ್ಸವದಲ್ಲಿ ಶಂಕ್ರಪ್ಪ ಬಡದಾನಿ, ಕೂಡ್ಲೆಪ್ಪ ರಂಜಣಗಿ, ಸಿ.ಎಂ.ಅನವಾಲ, ಹನುಮಂತಪ್ಪ ಮಜ್ಜಗಿಯವರ, ಚಂದ್ರಶೇಖರ ಸಾಂತಗೇರಿ, ಶ್ರೀಶೈಲ ಯರಗೇರಿ, ಚನ್ನಬಸು ರಂಜಣಗಿ, ಗಣೇಶ ರಾಮದುರ್ಗ, ವಿಕ್ರಂ ಹೊಂಬಳ್ಳಿ, ಅಮರೇಶ ಮಡ್ಡಿಕಟ್ಟಿ, ಪಪಂ ಸದಸ್ಯ ತುಕಾರಾಮ ಲಮಾಣಿ ಹಾಗೂ ಅಮೀನಗಡ, ಸೂಳೇಬಾವಿ, ರಕ್ಕಸಗಿ ಭಕ್ತರು ಭಾಗವಹಿಸಿದ್ದರು.