ಪ್ರೆಸಿಡೆಂಟ್‌ ಎಲೆವನ್‌ ತಂಡಕ್ಕೆ ಎಸ್‌ಆರ್‌ಕೆ ಟ್ರೋಪಿ

| Published : May 23 2024, 01:01 AM IST

ಪ್ರೆಸಿಡೆಂಟ್‌ ಎಲೆವನ್‌ ತಂಡಕ್ಕೆ ಎಸ್‌ಆರ್‌ಕೆ ಟ್ರೋಪಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ: ಯಾವುದೇ ಕ್ರೀಡೆ ಇರಲಿ ಭಾಗವಹಿಸುವುದು ಮುಖ್ಯ. ಎಲ್ಲರು ಗೆಲ್ಲುವುದಕ್ಕೆ ಆಟವಾಡುತ್ತಾರೆ, ಆದರೆ, ಗೆಲುವು ಎಲ್ಲರಿಗೂ ಸಿಗುವುದಿಲ್ಲ. ಯಾರು ಪರಿಶ್ರಮ ಪಡುತ್ತಾರೋ ಅರ್ಹವಾಗಿ ಗೆಲುವು ಪಡೆಯುತ್ತಾರೆ. ಕ್ರೀಡೆಯಲ್ಲಿ ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಿದರೆ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಮುಧೋಳ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರನ್ನ ಬೆಳಗಲಿಯ ಧರೆಪ್ಪ ಸಾಂಗ್ಲಿಕರ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ:ಯಾವುದೇ ಕ್ರೀಡೆ ಇರಲಿ ಭಾಗವಹಿಸುವುದು ಮುಖ್ಯ. ಎಲ್ಲರು ಗೆಲ್ಲುವುದಕ್ಕೆ ಆಟವಾಡುತ್ತಾರೆ, ಆದರೆ, ಗೆಲುವು ಎಲ್ಲರಿಗೂ ಸಿಗುವುದಿಲ್ಲ. ಯಾರು ಪರಿಶ್ರಮ ಪಡುತ್ತಾರೋ ಅರ್ಹವಾಗಿ ಗೆಲುವು ಪಡೆಯುತ್ತಾರೆ. ಕ್ರೀಡೆಯಲ್ಲಿ ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಿದರೆ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಮುಧೋಳ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರನ್ನ ಬೆಳಗಲಿಯ ಧರೆಪ್ಪ ಸಾಂಗ್ಲಿಕರ ಹೇಳಿದರು.

ಪಟ್ಟಣದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಎಸ್ಆರ್‌ಕೆ ಟ್ರೋಪಿ ಕ್ರಿಕೆಟ್ ಪಂದ್ಯಾವಳಿಯ ಬಹುಮಾನ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಇಂದಿನ ಯುವಕರು ದುಶ್ಚಟಗಳಿಗೆ ದಾಸರಾಗದೇ ನಿತ್ಯ ಒಂದು ಗಂಟೆಯಾದರೂ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಸಲಹೆ ನೀಡಿದರು.ಪ್ರೊ.ಶಿವಲಿಂಗ್ ಸಿದ್ನಾಳ ಮಾತನಾಡಿ, ಇಂದಿನ ಮಕ್ಕಳು ಮೊಬೈಲ್ ಆಟಗಳನ್ನು ಆಡುವ ಮೂಲಕ ಮಾನಸಿಕ ಸ್ಥಿಮಿತತೆಯನ್ನೇ ಕಳೆದುಕೊಂಡಿದ್ದಾರೆ. ಅಲ್ಲದೇ, ಆಸ್ಪತ್ರೆಗೆ ದಾಖಲಾಗುತ್ತಿರುವುದು ಇಂದಿನ ದುರಂತ. ಮಕ್ಕಳಿಗೆ ಆಟವಾಡಲು ಮೊಬೈಲ್‌ ಕೊಡುವ ಬದಲು ಮೈದಾನಕ್ಕೆ ಕಳುಹಿಸಿದರೆ ಆರೋಗ್ಯವಾಗಿರುತ್ತಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ದೇಶಾರಟ್ಟಿ, ಬಾಳಕೃಷ್ಣ ಮಳವದೇ ಮಾತನಾಡಿದರು.ಅಶೋಕ ಅಂಗಡಿ, ಶ್ರೀಶೈಲ ಪಾಟೀಲ, ಅಶೋಕ ತಳವಾರ, ಗಜಗಾಂವಕರ, ಬಲವಂತಗೌಡ ಪಾಟೀಲ, ಅಶೋಕ ಅಂಗಡಿ, ಲಕ್ಕಪ್ಪ ಭಜಂತ್ರಿ, ಚಂದ್ರು ಮೊರೆ, ಇಜಾಜ್ ಯಾದವಾಡ ಉಪಸ್ಥಿತರಿದ್ದರು.ಈ ವೇಳೆ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖಂಡರಾದ ಬಸವರಾಜ್ ರಾಯರ, ಮಹಾದೇವ ಕಡಬಲ್ಲವರ, ಹಣಮಂತ ವಗ್ಗರ, ಮಹಾಲಿಂಗ ಇಂಗಳಗಿ, ಶಿವಶಂಕರ ಗುಜ್ಜರ, ಪ್ರಕಾಶ ಕರ್ಲಟ್ಟಿ, ರಾಜು ಜಕ್ಕಣ್ಣವರ, ಮಹಾಲಿಂಗ ಮಾಳಿ, ಲಕ್ಷ್ಮಣ ಮಾಂಗ, ಯಾಸಿನ ಪಾಂಡು, ಬಶೀರ್ ಕೆಂಭಾವಿ, ಸಿಕಂದರ ಸಾಂಗ್ಲಿಕರ ಸೇರಿ ಹಲವರು ಇದ್ದರು. ಕಾರ್ಯಕ್ರಮವನ್ನು ಜಯರಾಮ ಶೆಟ್ಟಿ ನಿರೂಪಿಸಿದರು, ಲಕ್ಷ್ಮಣ ಕಿಶೋರ ಸ್ವಾಗತಿಸಿದರು, ಶ್ರೀಕಾಂತ್ ಮಾಗಿ ಬಹುಮಾನ ವಿತರಣೆ ಹಾಗೂ ವಂದನಾರ್ಪಣೆ ನೆರವೇರಿಸಿದರು.---------------

ಬಾಕ್ಸ್‌ಪ್ರೆಸಿಡೆಂಟ್ ಎಲೆವನ್‌ಗೆ ಟ್ರೋಪಿ:ಎಸ್ಆರ್‌ಕೆ ಕಪ್ ಟಿ-20 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಕಪ್‌ ಗೆದ್ದು ಪ್ರಸಿಡೆಂಟ್‌ ಎಲೆವೆನ್‌ ತಂಡ ₹1 ಲಕ್ಷ ನಗದು ಬಹುಮಾನ ಪಡೆದುಕೊಂಡಿತು. ದ್ವಿತೀಯ ಸ್ಥಾನ ಪಡೆದ ರಾಂಭವ ಗಾರ್ಮೆಂಟ್ಸ್‌ ತಂಡ ₹50 ಸಾವಿರ ಬಹುಮಾನ ಪಡೆಯಿತು. ಅಪ್ಪಾಸಾಹೇಬ್‌ ನಾಲಬಂಧ ಮಾಲೀಕತ್ವದ ಪ್ರೆಸಿಡೆಂಟ್ ಎಲೆವನ್‌ ತಂಡ ಅಂತಿಮ ಪಂದ್ಯದಲ್ಲಿ ಬಾಳಕೃಷ್ಣ ಮಾಳವದೇ ಮಾಲೀಕತ್ವದ ರಾಂಭವ ಗಾರ್ಮೆಂಟ್ಸ್‌ ತಂಡವನ್ನು ಒಂಬತ್ತು ವಿಕೆಟಗಳಿಂದ ಸುಲಭವಾಗಿ ಗೆದ್ದು ಚಾಂಪಿಯನ್‌ ಆಗಿ ಹೊರಹೊಮ್ಮಿತು.ಅಂತಿಮ ಪಂದ್ಯದಲ್ಲಿ ರಾಂಭವ ಗಾರ್ಮೆಂಟ್ಸ್‌ ಎಲೆವನ್‌ ನಾಲ್ಕು ಓವರಗಳಲ್ಲಿ 42 ರನ್‌ ಗಳಿಸಿತು ಇದಕ್ಕೆ ಉತ್ತರವಾಗಿ ಆಡಿದ ಪ್ರೆಸಿಡೆಂಟ್ ಎಲೆವನ್‌ ಕೇವಲ 2.3 ಓವರಗಳಲ್ಲಿ 43 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.