ಒಣಗಿದ ಕಬ್ಬುಬೆಳೆ ಸಮೀಕ್ಷೆಗೆ ಎಸ್‌ಎಸ್‌ ಗಣೇಶ್ ಭರವಸೆ

| Published : May 17 2024, 12:32 AM IST

ಒಣಗಿದ ಕಬ್ಬುಬೆಳೆ ಸಮೀಕ್ಷೆಗೆ ಎಸ್‌ಎಸ್‌ ಗಣೇಶ್ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿರು ಬೇಸಿಗೆಯಲ್ಲಿ ತಾಲೂಕಿನ ಕುಕ್ಕವಾಡ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ನೀರಿಲ್ಲದೇ ಒಣಗಿ ನಾಶವಾದ ಕಬ್ಬಿನ ಬೆಳೆಯ ಸಮೀಕ್ಷೆ ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ದಾವಣಗೆರೆ ಸಕ್ಕರೆ ಕಂಪನಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ, ಹಿರಿಯ ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ ಭರವಸೆ ನೀಡಿದ್ದಾರೆ.

- ಸ್ವಂತ ಕಾರ್ಖಾನೆಯಿಂದಲೇ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಕೆ

- ಕಬ್ಬಿನ ಬಾಕಿ ಇನ್ನು 2-3 ದಿನದಲ್ಲೇ ಬೆಳೆಗಾರರಿಗೆ ಪಾವತಿ ಭರವಸೆ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಬಿರು ಬೇಸಿಗೆಯಲ್ಲಿ ತಾಲೂಕಿನ ಕುಕ್ಕವಾಡ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ನೀರಿಲ್ಲದೇ ಒಣಗಿ ನಾಶವಾದ ಕಬ್ಬಿನ ಬೆಳೆಯ ಸಮೀಕ್ಷೆ ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ದಾವಣಗೆರೆ ಸಕ್ಕರೆ ಕಂಪನಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ, ಹಿರಿಯ ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ ಭರವಸೆ ನೀಡಿದರು.

ನಗರದ ಲಕ್ಷ್ಮೀ ಫ್ಲೋರ್ ಮಿಲ್ ಆವರಣದಲ್ಲಿ ಗುರುವಾರ ತಮ್ಮನ್ನು ಭೇಟಿ ಮಾಡಿದ್ದ ರೈತ ಮುಖಂಡರಾದ ತೇಜಸ್ವಿ ವಿ.ಪಟೇಲ್‌, ಕೊಳೇನಹಳ್ಳಿ ಬಿ.ಎಂ. ಸತೀಶ, ಹದಡಿ ಜಿ.ಸಿ. ನಿಂಗಪ್ಪ, ಮುದಹದಡಿ ದಿಳ್ಯಪ್ಪ, ಶಂಭುಲಿಂಗನಗೌಡ, ಕುಕ್ಕವಾಡ ಡಿ.ಬಿ.ಶಂಕರ, ಕೆ.ಸಿ.ಶಿವಕುಮಾರ ಮತ್ತಿತರೆ ರೈತರ ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಎಸ್.ಎಸ್.ಗಣೇಶ ರೈತರಿಗೆ ಭರವಸೆ ನೀಡಿದರು.

ಒಣಗಿರುವ ಕಬ್ಬಿನ ಬೆಳೆ ಸಮೀಕ್ಷೆಯನ್ನು ತಮ್ಮ ಕಾರ್ಖಾನೆಯಿಂದ ನಡೆಸಿ, ಸರ್ಕಾರಕ್ಕೆ ಬೆಳೆ ನಾಶವಾದ ವರದಿ ಸಲ್ಲಿಸುತ್ತೇವೆ. ರೈತರ ನಿಯೋಗವು ಒಣಗಿರುವ ಕಬ್ಬಿನ ಬೆಳೆ ಸಮೀಕ್ಷೆ ಸೇರಿದಂತೆ ಬಾಕಿ ಇರುವ ಕಬ್ಬು ಬಿಲ್‌ ರೈತರಿಗೆ ತಕ್ಷಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೀರಿ. ಇನ್ನು 2-3 ದಿನದಲ್ಲೇ ಕಬ್ಬಿನ ಬಿಲ್ ಹಣವನ್ನೂ ಬಿಡುಗಡೆ ಮಾಡುತ್ತೇವೆಂದು ಭರವಸೆ ನೀಡುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದರು.

ನಿಯೋಗದಲ್ಲಿ ಹೂವಿನಮಡು ಶಶಿ, ಓಬಲೇಶ, ರವಿಕುಮಾರ, ಕುಕ್ಕುವಾಡ ಕೆ.ಜಿ.ರವಿಕುಮಾರ, ನಾಗರಸನಹಳ್ಳಿ ಚನ್ನಪ್ಪ, ಕೊಳೇನಹಳ್ಳಿ ಕೆ.ಶರಣಪ್ಪ, ಲಿಂಗಮೂರ್ತಯ್ಯ ಮುಂತಾದವರು ಇದ್ದರು.

- - - (* ಈ ಫೋಟೋ-ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಬಹುದು)

-16ಕೆಡಿವಿಜಿ21, 22:

ದಾವಣಗೆರೆಯಲ್ಲಿ ರೈತ ಮುಖಂಡರ ನಿಯೋಗದೊಂದಿಗೆ ದಾವಣಗೆರೆ ಶುಗರ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕ, ಅಧ್ಯಕ್ಷ ಎಸ್.ಎಸ್.ಗಣೇಶ ಸಮಾಲೋಚನೆ ನಡೆಸಿದರು. ಹೂವಿನಮಡು ಶಶಿ, ಓಬಲೇಶ, ರವಿಕುಮಾರ, ಕುಕ್ಕುವಾಡ ಕೆ.ಜಿ.ರವಿಕುಮಾರ, ನಾಗರಸನಹಳ್ಳಿ ಚನ್ನಪ್ಪ ಇತರರು ಇದ್ದರು.