ಎಸ್ಸೆಸ್ಸೆಲ್ಸಿ ಪರೀಕ್ಷೆ: ಮಳವಳ್ಳಿ ತಾಲೂಕಿಗೆ ಶೇ.73.59 ರಷ್ಟು ಫಲಿತಾಂಶ

| Published : May 11 2024, 12:40 AM IST

ಎಸ್ಸೆಸ್ಸೆಲ್ಸಿ ಪರೀಕ್ಷೆ: ಮಳವಳ್ಳಿ ತಾಲೂಕಿಗೆ ಶೇ.73.59 ರಷ್ಟು ಫಲಿತಾಂಶ
Share this Article
  • FB
  • TW
  • Linkdin
  • Email

ಸಾರಾಂಶ

ಮಳವಳ್ಳಿ ತಾಲೂಕಿನಲ್ಲಿ 3151 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2267 ವಿದ್ಯಾರ್ಥಿಗಳು ಉತೀರ್ಣರಾಗಿರುತ್ತಾರೆ. 1531 ಬಾಲಕರು ಹಾಗೂ 1620 ಬಾಲಕಿಯರಲ್ಲಿ 947 ಬಾಲಕರು, 1320 ಬಾಲಕಿಯರು ಉತ್ತೀರ್ಣರಾಗಿದ್ದಾರೆ. 584 ಬಾಲಕರು, 308 ಬಾಲಕಿಯರು ಅನುತೀರ್ಣಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಶೇ.73.59 ರಷ್ಟು ಫಲಿತಾಂಶ ಬಂದಿದೆ. ತಾಲೂಕಿನ ಮಾರೇಗೌಡನದೊಡ್ಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಎಚ್.ವಿ.ವಿನಯ್ 621 ಅಂಕ ಪಡೆದು ಜಿಲ್ಲೆಗೆ 2ನೇ ಸ್ಥಾನ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಚಂದ್ರಪಾಟೀಲ್ ತಿಳಿಸಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ 3151 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2267 ವಿದ್ಯಾರ್ಥಿಗಳು ಉತೀರ್ಣರಾಗಿರುತ್ತಾರೆ. 1531 ಬಾಲಕರು ಹಾಗೂ 1620 ಬಾಲಕಿಯರಲ್ಲಿ 947 ಬಾಲಕರು, 1320 ಬಾಲಕಿಯರು ಉತ್ತೀರ್ಣರಾಗಿದ್ದಾರೆ. 584 ಬಾಲಕರು, 308 ಬಾಲಕಿಯರು ಅನುತೀರ್ಣಗೊಂಡಿದ್ದಾರೆ ಎಂದರು. ತಾಲೂಕಿನ 75 ಶಾಲೆಗಳಲ್ಲಿ ಪಂಡಿತಹಳ್ಳಿಯ ಹೋಲಿ ಏಂಜಲೇಸ್, ಜ್ಞಾನಗಂಗಾ, ಮುರಾರ್ಜಿ ದೇಸಾಯಿ ಹಲಗೂರು, ಜೆಜೆ ಪಬ್ಲಿಕ್ ಸ್ಕೂಲ್ ಹಲಗೂರು, ಸಪ್ತಗಿರಿ ಹಲಗೂರು 7 ಶಾಲೆಗಳು ಶೇ. 100 ರಷ್ಟು ಫಲಿತಾಂಶವನ್ನು ಪಡೆದುಕೊಂಡಿವೆ. ತಾಲೂಕಿನ ಮಾರೇಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಎಚ್.ವಿ ವಿನಯ್ 621 , ಹಲಗೂರು ಜೆಜೆ ಪಬ್ಲಿಕ್ ಸ್ಕೂಲ್‌ನ ಎಚ್‌.ಎನ್. ರೇಷ್ಮಾ 615, ಪಟ್ಟಣದ ಅನಿತಾ ಪ್ರೌಢಶಾಲೆಯ ಎಲ್ ಸ್ನೇಹ 615, ಮಾರೇಹಳ್ಳಿ ಅದರ್ಶ ಶಾಲೆ ಬಿ. ಶ್ರೀರಕ್ಷ 610, ಮಾರೇಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆ ಜಿ.ಎಂ ಚಿರಂಜೀವಿ 609, ವೇದಿಕಾ ಮಹೇಶ್ 608, ಜೆಜೆ ಪಬ್ಲಿಕ್‌ಸೂಲ್‌ನ ಎಚ್‌.ಪಿ. ಭೂಮಿಕಾ 606 ಅಂಕ ಪಡೆದು ಉತೀರ್ಣರಾಗಿದ್ದಾರೆ.

ತಾಲೂಕಿನ ಮಾರೇಹಳ್ಳಿ ಅದರ್ಶ ಶಾಲೆಯ ಎಂ.ಆರ್. ತಾರಣಿ 605, ಎಚ್‌.ಎಸ್. ರಕ್ಷಿತಾ 604, ಕೆ.ಎಂ.ಮಾನೀಷ್ 603, ಕಿರುಗಾವಲು ಸರ್ಕಾರಿ ಪ್ರೌಢಶಾಲೆಯ ಬಿ.ಎನ್. ತೇಜಸ್ವೀನಿ 602, ಅನಿತಾ ಶಾಲೆಯ ಕೆ.ಪಿ ಅರ್ಚನಾ 602, ಟಿ.ಆರ್. ಬಿಂದುಶ್ರೀ 602, ಮಾರೇಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಜಿ. ನಾಗು 602 , ಕೆ.ಆರ್.ನಿತ್ಯಶ್ರೀ 602, ಕಿರುಗಾವಲು ಆದರ್ಶ ಪ್ರೌಢಶಾಲೆಯ ಬಿ.ಆರ್. ರಕ್ಷಿತಾ 601 ಅಂಕ ಪಡೆದಿದ್ದಾರೆಂದು ಮಾಹಿತಿ ನೀಡಿದರು.

ಕಡಿಮೆ ಅಂಕ ಪಡೆದ ಹಾಗೂ ಅನುತೀರ್ಣರಾದ ವಿದ್ಯಾರ್ಥಿಗಳಿಗೆ ಇನ್ನೂ ಎರಡು ಪರೀಕ್ಷೆ ಬರೆಯಲು ಅವಕಾಶವಿದೆ, ಫೇಲಾದ ಮಕ್ಕಳಿಗೆ ಆತ್ಮಸ್ಥೆರ್ಯ ತುಂಬಿ ಪರೀಕ್ಷೆಗೆ ತಯಾರು ಮಾಡುವಂತೆ ಈಗಾಗಲೇ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೇ ಮುಂದಿನ ಪರೀಕ್ಷೆಯನ್ನು ಎದುರಿಸಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿನಯ್, ರೇಷ್ಮಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಣ ಸಂಯೋಜಕರಾದ ಡಿ.ಬಿ ದಯಾನಂದ್, ರವಿಕುಮಾರ್, ಬಾಬು ಸೇರಿದಂತೆ ಇತರರು ಇದ್ದರು.