ಎಸ್ಸೆಸ್ಸೆಫ್‌ ಮಾರತಹಳ್ಳಿ ಡಿವಿಷನ್ ಸಾಹಿತ್ಯೋತ್ಸವ: ಎಚ್ಎಎಲ್ ಚಾಂಪಿಯನ್‌

| Published : Oct 29 2024, 12:52 AM IST

ಎಸ್ಸೆಸ್ಸೆಫ್‌ ಮಾರತಹಳ್ಳಿ ಡಿವಿಷನ್ ಸಾಹಿತ್ಯೋತ್ಸವ: ಎಚ್ಎಎಲ್ ಚಾಂಪಿಯನ್‌
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಸಮಿತಿ ಮುಖ್ಯಸ್ಥ ಫಾರೂಕ್ ಅಮಾನಿ ಮುಖ್ಯ ಭಾಷಣ ಮಾಡಿದರು. ಡಿವಿಷನ್ ಅಧ್ಯಕ್ಷ ಸಫ್ವಾನ್ ಹನೀಫಿ ಅಶ್ಅರೀ ಪ್ರಾಸ್ತಾವಿಕ ಭಾಷಣ ಮಾಡಿದರು.

ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್‌ ಫೆಡರೇಶನ್‌(ಎಸ್ಸೆಸ್ಸೆಫ್‌) ಇದರ ಬೆಂಗಳೂರಿನ ಜಿಲ್ಲೆಯ ಮಾರತಹಳ್ಳಿ ಡಿವಿಷನ್‌ ಮಟ್ಟದ ಸಾಹಿತ್ಯೋತ್ಸವ ಭಾನುವಾರ ಇಲ್ಲಿನ ಕೆ.ಎಂ.ಪಿ ಚರ್ಚ್ ಶಾಲೆಯಲ್ಲಿ ನಡೆಯಿತು.ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಿವಿಷನ್‌ ಮಟ್ಟದ ಐದು ಯೂನಿಟ್‌ಗಳಿಂದ ನೂರಕ್ಕೂ ಮಿಕ್ಕ ಸ್ಪರ್ಧಾರ್ಥಿಗಳು ಪಾಲ್ಗೊಂಡರು. ನಾಲ್ಕು ವೇದಿಕೆಗಳಲ್ಲಿ ನೂರರಷ್ಟು ಸ್ಪರ್ಧೆಗಳು ನಡೆಯಿತು. ಭಾಗವಹಿಸಿ ವಿಜೇತರಾದ ಸ್ಪರ್ಧಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಸ್ವಾಗತ ಸಮಿತಿ ಮುಖ್ಯಸ್ಥ ಉಮ್ಮರ್ ಹಾಜಿಯವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರುಗಿತು. ಕಾರ್ಯಕ್ರಮವನ್ನು ಜಿಲ್ಲಾ ಸಾಹಿತ್ಯೋತ್ಸವ ಕನ್ವೀನರ್ ಅಲ್ತಾಫ್ ಅಲಿ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಮುಖ್ಯಸ್ಥ ಫಾರೂಕ್ ಅಮಾನಿ ಮುಖ್ಯ ಭಾಷಣ ಮಾಡಿದರು. ಡಿವಿಷನ್ ಅಧ್ಯಕ್ಷ ಸಫ್ವಾನ್ ಹನೀಫಿ ಅಶ್ಅರೀ ಪ್ರಾಸ್ತಾವಿಕ ಭಾಷಣ ಮಾಡಿದರು. ಡಿವಿಷನ್ ಮಟ್ಟದಲ್ಲಿ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿದ ಎಚ್.ಎ.ಎಲ್ ಯೂನಿಟ್‌ಗೆ ರಾಜ್ಯ ನಾಯಕರಾದ ಅಬೂಬಕ್ಕರ್ ಅಹ್ಸನಿ, ಬೆಂಗಳೂರು ಜಿಲ್ಲಾ ನೇತಾರರಾದ ಅಖ್ತರ್ ಹುಸೈನ್, ಖಲೀಲ್, ಮಜೀದ್, ಫಿರ್ದೌಸ್ ಹಾಗೂ ಇನ್ನಿತರ ನಾಯಕರು ಸೇರಿ ಟ್ರೋಫಿ ನೀಡಿದರು.ಸುಹೈಳ್ ಖುತುಬಿ ಸ್ವಾಗತಿಸಿ, ಸ್ವಾಗತ ಸಮೀತಿ ಕನ್ವೀನರ್ ನಿಸಾಮುದ್ದೀನ್ ಸಖಾಫಿ ಧನ್ಯವಾದ ಸಲ್ಲಿಸಿದರು ಎಂದು ಡಿವಿಷನ್ ಪ್ರಧಾನ ಕಾರ್ಯದರ್ಶಿ ನೌಶಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.