ಅಭಿವೃದ್ಧಿಯಲ್ಲಿ ಎಸ್‌ಎಸ್‌ಕೆ ಸಮಾಜ ಮಾದರಿ: ಶಶಿಕುಮಾರ ಮೇರವಾಡೆ

| Published : Oct 01 2025, 01:01 AM IST

ಅಭಿವೃದ್ಧಿಯಲ್ಲಿ ಎಸ್‌ಎಸ್‌ಕೆ ಸಮಾಜ ಮಾದರಿ: ಶಶಿಕುಮಾರ ಮೇರವಾಡೆ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್‌ಎಸ್‌ಕೆ ಸಮಾಜದ ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು.

ಗದಗ: ದಸರಾ ಹಬ್ಬದಲ್ಲಿ ಎಸ್‌ಎಸ್‌ಕೆ ಸಮಾಜದವರು ನಾಡಿಗೆ ಉತ್ತಮ ಮಳೆ- ಬೆಳೆ, ಎಲ್ಲರಿಗೂ ಸುಖ, ಸಮೃದ್ಧಿ, ಶಾಂತಿ ಸಿಗಲೆಂದು ಪೂಜಿಸುತ್ತಾರೆ ಎಂದು ಎಸ್‌ಎಸ್‌ಕೆ ಸಮಾಜದ ರಾಜ್ಯಾಧ್ಯಕ್ಷ ಶಶಿಕುಮಾರ ಮೇರವಾಡೆ ತಿಳಿಸಿದರು.ನಗರದ ಹಳೆ ಸರಾಫ್‌ ಬಜಾರದ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಭಾಸ್ಕರಸಾ ಪವಾರ ಸಭಾಂಗಣದ ದಸರಾ ದರ್ಬಾರ ವೇದಿಕೆಯಲ್ಲಿ ಜರುಗಿದ ನಮ್ಮೂರ ದಸರಾ- 2025ರ 5ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಸ್‌ಎಸ್‌ಕೆ ಸಮಾಜದ ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ಗದುಗಿನ ಎಸ್‌ಎಸ್‌ಕೆ ಸಮಾಜದ ಹಿರಿಯರು ಅಭಿವೃದ್ಧಿಯಲ್ಲಿ ಇತರರಿಗೆ ಮಾದರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಎಸ್‌ಎಸ್‌ಕೆ ಸಮಾಜದ ಗುರುಪೀಠ ನಿರ್ಮಾಣಕ್ಕೆ ಸಹಾಯ, ಸಹಕಾರ ನೀಡುವುದಾಗಿ ತಿಳಿಸಿದರು.

ಈ ಹಿಂದಿನ ಜಾತಿಗಣತಿಯಲ್ಲಿ ಎಸ್‌ಎಸ್‌ಕೆ ಸಮಾಜದವರು ರಾಜ್ಯದಲ್ಲಿ 59 ಸಾವಿರ ಜನಸಂಖ್ಯೆ ಇದ್ದಾರೆ ಎಂದು ಅವೈಜ್ಞಾನಿಕವಾಗಿ ತಿಳಿಸಿದ್ದು, ರಾಜ್ಯದಲ್ಲಿ ಸುಮಾರು 10ರಿಂದ 12 ಲಕ್ಷದವರೆಗೆ ನಾವುಗಳಿದ್ದೇವೆ. ಗದಗ- ಬೆಟಗೇರಿ ಅವಳಿ ನಗರದಲ್ಲಿ ಸುಮಾರು 26 ಸಾವಿರ ಜನರು ಮತದಾರರಿದ್ದಾರೆ. ಆದ್ದರಿಂದ ಈಗ ನಡೆಯುತ್ತಿರುವ ಜಾತಿಗಣತಿಯಲ್ಲಿ ಗಣತಿದಾರರು ಮನೆಗೆ ಬಂದಾಗ ಸಮಾಜದವರು ಧರ್ಮ ಕಾಲಂನಲ್ಲಿ ಹಿಂದೂ, ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ಎಸ್‌ಎಸ್‌ಕೆ(ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ) ಎಂದು ಬರೆಸಬೇಕು ಎಂದರು.

ಕರ್ನಾಟಕ ಹೈಟೆಕ್ ಸೀಡ್ಸ್ ಮಾಲಿಕ ವಿನಾಯಕ ಪಾಟೀಲ, ಎಕ್ಸಪೋರ್ಟರ್ ಪ್ರೈ.ಲಿ ಮಾಲೀಕ ಶರಣು ಗದಗ ಮಾತನಾಡಿದರು. ಅಧ್ಯಕ್ಷತೆಯನ್ನು ಎಸ್‌ಎಸ್‌ಕೆ ಸಮಾಜದ ಪಂಚ ಕಮಿಟಿ ಅಧ್ಯಕ್ಷ ಫಕೀರಸಾ ಬಾಂಡಗೆ ವಹಿಸಿದ್ದರು. ರಾಜು ಬದಿ, ವಿನೋದ ಶಿದ್ಲಿಂಗ, ಅನಿಲ ಖಟವಟೆ, ವಿಶ್ವನಾಥಸಾ ಖಟವಟೆ, ಸುರೇಶಕುಮಾರ ಬದಿ, ಪರಶುರಾಮ ಬದಿ, ವಿಷ್ಣುಸಾ ಶಿದ್ಲಿಂಗ, ಮಾರುತಿ ಪವಾರ, ಪ್ರಕಾಶ ಬಾಕಳೆ, ಶ್ರೀನಿವಾಸ ಬಾಂಡಗೆ, ಅಂಬಾಸಾ ಖಟವಟೆ, ಗಂಗಾಧರ ಹಬೀಬ, ಗಣಪತಿ ಜಿತೂರಿ, ವಿನೋದ ಬಾಂಡಗೆ, ವಿಶ್ವನಾಥಸಾ ಸೋಳಂಕಿ, ರಾಘು ಬಾರಡ, ಶ್ರೀಕಾಂತ ಬಾಕಳೆ, ಸುಧೀರ ಕಾಟಿಗರ, ಮಾಧು ಬದಿ, ನಾಗರಾಜ ಖೋಡೆ, ಉಮಾಬಾಯಿ ಬೇವಿನಕಟ್ಟಿ, ಗೀತಾಬಾಯಿ ಹಬೀಬ ಸೇರಿದಂತೆ ಮುಂತಾದವರಿದ್ದರು. ರವಿ ಶಿದ್ಲಿಂಗ ಸ್ವಾಗತಿಸಿದರು. ಜಿ.ಎನ್. ಹಬೀಬ ನಿರೂಪಿಸಿದರು. ಮೋಹನ ಪವಾರ ವಂದಿಸಿದರು.