ಸಾರಾಂಶ
ಸಚಿವ ಜಮೀರ್ ಅಹಮದ್ ಖಾನ್ ಅವರು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ತಲಾ ಒಂದು ಸ್ಕೂಟಿ, ಲ್ಯಾಪ್‍ಟಾಪ್ ಹಾಗೂ ನಗದು ಬಹುಮಾನ ವಿತರಿಸಿದರು.
ಕನ್ನಡಪ್ರಭ ವಾರ್ತೆ ಹೊಸಪೇಟೆ
ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ತಲಾ ಒಂದು ಸ್ಕೂಟಿ, ಲ್ಯಾಪ್‍ಟಾಪ್ ಹಾಗೂ ನಗದು ಬಹುಮಾನ ವಿತರಿಸಿದರು. ಈ ವೇಳೆ ಮಾತನಾಡಿ, ಯಶವಂತ್ 624 ಅಂಕ ಗಳಿಸಿದ್ದು, ಕೊಟ್ಟ ಮಾತಿನಂತೆ ₹1 ಲಕ್ಷ ಬಹುಮಾನ ನೀಡಿದ್ದೇನೆ. ನಿಹಾರ್ (622 ಅಂಕಗಳು), ಲಕ್ಷ್ಮೀ, ಅಭಿಷೇಕ್, ಹೇಮಂತ್, ಉಮೇಶ್ ಅವರುಗಳು ತಲಾ 621 ಅಂಕಗಳನ್ನು ಗಳಿಸಿದ್ದು, ಎಲ್ಲರಿಗೂ ತಲಾ ₹50 ಸಾವಿರ ಬಹುಮಾನ ನೀಡಿದ್ದೇನೆ. ಜೊತೆಗೆ ಎಲ್ಲರಿಗೂ ಸ್ಕೂಟಿ, ಲ್ಯಾಪ್‌ಟಾಪ್ ನೀಡಿದ್ದೇನೆ ಎಂದರು.ಮಕ್ಕಳಿಗೆ ನೀಡಿರುವ ಸ್ಕೂಟಿಯನ್ನು ತಂದೆ-ತಾಯಿಗಳು ಓಡಿಸಬೇಕು. ಅವರು ಲೈಸೆನ್ಸ್ ಪಡೆಯುವವರೆಗೆ ತಾಯಿ, ತಂದೆ ಚಲಾಯಿಸಬೇಕು. ಮಕ್ಕಳ ಓದಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಈ ಸ್ಕೂಟಿ ನೀಡಿದ್ದೇನೆ. ಪಿಯುಸಿಯಲ್ಲಿ ನೀವು ಇನ್ನಷ್ಟು ಸಾಧನೆ ಮಾಡಿ ನಿಮ್ಮ ಕನಸನ್ನು ಈಡೇರಿಸಿಕೊಳ್ಳಿ ಎಂದು ಶುಭ ಹಾರೈಸಿದರು.
ಬಾಲಕಿ ಲಕ್ಷ್ಮೀ 621 ಅಂಕ ಗಳಿಸಿದ್ದು, ಮರು ಎಣಿಕೆಗೆ ಅರ್ಜಿ ಸಲ್ಲಿಸಿದ್ದಾಳೆ. ಮರು ಎಣಿಕೆಯಲ್ಲಿ 624 ಅಂಕ ಬಾರದೇ ಇದ್ದಲ್ಲಿ, ಮರು ಪರೀಕ್ಷೆ ಬರೆಯುವೆ ಎಂದಿದ್ದಾಳೆ. ಒಂದು ವೇಳೆ 624 ಅಂಕ ಗಳಿಸಿದರೆ, ₹5 ಲಕ್ಷ ಬಹುಮಾನ ನೀಡುವೆ ಎಂದು ಘೋಷಿಸಿದರು.ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಜಯನಗರ ಜಿಲ್ಲೆಗೆ ಆರು ಜನ ವಿದ್ಯಾರ್ಥಿಗಳು ಟಾಪರ್ ಆಗಿದ್ದಾರೆ. ಇವರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಹಾಗಾಗಿ ಅವರಿಗೆ ಪ್ರೋತ್ಸಾಹಿಸಲು ಧನ ಸಹಾಯ ಮಾಡಿರುವೆ ಎಂದು ಹೇಳಿದರು.
ಇದೇ ವೇಳೆ ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ ಅವರಿಗೆ ವಾಚ್‌ನ್ನು ಬಹುಮಾನವಾಗಿ ನೀಡಿದರು.13ಎಚ್‌ಪಿಟಿ2-
ಹೊಸಪೇಟೆಯಲ್ಲಿ ಮಂಗಳವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಜಯನಗರ ಜಿಲ್ಲೆಗೆ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ತಲಾ ಒಂದು ಸ್ಕೂಟಿ, ಲ್ಯಾಪ್‍ಟಾಪ್ ಹಾಗೂ ನಗದು ಬಹುಮಾನವನ್ನು ವಸತಿ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ವಿತರಿಸಿದರು.=
- ಸ್ಕೂಟಿ, ಲ್ಯಾಪ್‌ಟಾಪ್, ನಗದು ಬಹುಮಾನ ವಿತರಿಸಿದ ಸಚಿವಕನ್ನಡಪ್ರಭ ವಾರ್ತೆ