ರಾಮನಗರ: ಮಾಗಡಿ ಪಟ್ಟಣದ ವಾಸವಿ ವಿದ್ಯಾನಿಕೇತನ ಶಾಲೆಯ ಎಂ.ಎಸ್.ಸೃಷ್ಟಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮರುಮೌಲ್ಯ ಮಾಪನದಲ್ಲಿ 625ಕ್ಕೆ 624 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 2ನೇ ಸ್ಥಾನ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗೆ 1ನೇ ಸ್ಥಾನ ಪಡೆದಿದ್ದಾಳೆ. ಈ ಮೊದಲು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸೃಷ್ಟಿ, ಗಣಿತ ವಿಷಯದಲ್ಲಿ 98 ಮತ್ತು ಸಮಾಜ ವಿಜ್ಞಾನದಲ್ಲಿ 99 ಅಂಕ ಸೇರಿ ಒಟ್ಟು 625ಕ್ಕೆ 622 ಅಂಕ ಪಡೆದಿದ್ದರು. ಮರು ಮೌಲ್ಯಮಾಪನದಲ್ಲಿ ಗಣಿತದಲ್ಲಿ 99 ಮತ್ತು ಸಮಾಜ ವಿಜ್ಞಾನದಲ್ಲಿ 100 ಅಂಕ ಪಡೆಯುವ ಮೂಲಕ ಒಟ್ಟು 624 ಅಂಕ ಪಡೆದುಕೊಂಡಿದ್ದಾಳೆ.