ಎಸ್ಸೆಸ್ಸೆಲ್ಸಿ ಪರೀಕ್ಷೆ: ಸದ್ವಿದ್ಯಾ ಪ್ರೌಢಶಾಲೆಗೆ ಶೇ.95.45 ರಷ್ಟು ಫಲಿತಾಂಶ

| Published : May 02 2025, 11:46 PM IST

ಸಾರಾಂಶ

2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಂಡ್ಯದ ಸದ್ವಿದ್ಯಾ ಪ್ರೌಢಶಾಲೆಗೆ ಶೇ.95.45ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 44 ವಿದ್ಯಾರ್ಥಿಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ 12, ಉನ್ನತ ಶ್ರೇಣಿಯಲ್ಲಿ 5, ಪ್ರಥಮ ದರ್ಜೆ- 20, ದ್ವಿತೀಯ ದರ್ಜೆ-05 ಸೇರಿ ಒಟ್ಟಾರೆ 42 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸದ್ವಿದ್ಯಾ ಪ್ರೌಢಶಾಲೆಗೆ ಶೇ.95.45ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 44 ವಿದ್ಯಾರ್ಥಿಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ 12, ಉನ್ನತ ಶ್ರೇಣಿಯಲ್ಲಿ 5, ಪ್ರಥಮ ದರ್ಜೆ- 20, ದ್ವಿತೀಯ ದರ್ಜೆ-05 ಸೇರಿ ಒಟ್ಟಾರೆ 42 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಶಾಲೆಗೆ ಪ್ರಥಮ ಸ್ಥಾನ ಪಡೆದಿರುವ ಕೆ.ಪಿ.ಅನನ್ಯ 625ಕ್ಕೆ 623 (ಶೇ.99.68) ಕನ್ನಡದಲ್ಲಿ 125, ಇಂಗ್ಲಿಷ್‌ನಲ್ಲಿ 100, ಗಣಿತದಲ್ಲಿ 100 ಹಾಗೂ ಸಮಾಜ ವಿಜ್ಞಾನದಲ್ಲಿ 100 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.

ಆರ್‌.ಭೂಮಿಕಾ 621 ಅಂಕಗಳು (ಶೇ.99.36) ಕನ್ನಡದಲ್ಲಿ 125, ಇಂಗ್ಲಿಷ್‌ನಲ್ಲಿ 100, ವಿಜ್ಞಾನದಲ್ಲಿ 100 ಹಾಗೂ ಸಮಾಜ ವಿಜ್ಞಾನದಲ್ಲಿ 100 ಅಂಕ ಗಳಿಸಿ ದ್ವಿತೀಯ, ಎಚ್.ಕೆ.ಲಿಖಿತ್‌ ಕೃಷ್ಣ 597 ಅಂಕಗಳು (ಶೇ.95.12) ಗಣಿತದಲ್ಲಿ 100 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.

ಎಂ.ಮನ್ವಿತಾ ಹಾಗೂ ಪಿ.ನಿರೀಕ್ಷಾ 572 ಅಂಕಗಳು (ಶೇ.91.52), ಪಿ.ನಿರೀಕ್ಷಾ ಸಮಾಜ ವಿಜ್ಞಾನದಲ್ಲಿ 100 ಅಂಕ ಗಳಿಸಿದ್ದಾರೆ. ಪುನಾಲ್ ಪಿ.ಗೌಡ 571 ಅಂಕ (ಶೇ.91.36) ಗಳಿಸಿರುತ್ತಾರೆ.

ಒಟ್ಟಾರೆ 42 ವಿದ್ಯಾರ್ಥಿಗಳು ಶಾಲೆಗೆ ಗುಣಮಟ್ಟದ ಫಲಿತಾಂಶ ನೀಡುವುದರ ಜೊತೆಗೆ ಕನ್ನಡದಲ್ಲಿ ಇಬ್ಬರು ವಿದ್ಯಾರ್ಥಿಗಳು 125ಕ್ಕೆ 125, ಇಂಗ್ಲಿಷ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳು 100ಕ್ಕೆ 100, ಗಣಿತದಲ್ಲಿ ಇಬ್ಬರು ವಿದ್ಯಾರ್ಥಿಗಳು, 100ಕ್ಕೆ 100, ಸಮಾಜ ವಿಜ್ಞಾನ ವಿಷಯದಲ್ಲಿ ಮೂರು ವಿದ್ಯಾರ್ಥಿಗಳು 100ಕ್ಕೆ 100, ವಿಜ್ಞಾನ ವಿಷಯದಲ್ಲಿ ಓರ್ವ ವಿದ್ಯಾರ್ಥಿ 100ಕ್ಕೆ 100 ಅಂಕ ಪಡೆದಿದ್ದಾರೆ.

ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಎಲ್ಲಾ ವಿದ್ಯಾರ್ಥಿಗಳಿಗೆ, ಸದ್ವಿದ್ಯಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಎಂ.ಕೆ.ಹರೀಶ್ ಕುಮಾರ್, ಶಾಲಾ ಆಡಳಿತ ಮಂಡಳಿ, ಟ್ರಸ್ಟಿಗಳು, ಮುಖ್ಯೋಪಾಧ್ಯಾಯರು, ಮತ್ತು ಶಿಕ್ಷಕ ವೃಂದ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ರಾಜ್ಯ ಟಾಪರ್ಸ್‌ನಲ್ಲಿ ಅಭಿನವ ಭಾರತಿ ಶಾಲೆ ವಿದ್ಯಾರ್ಥಿಗಳು

ಮಂಡ್ಯ: ನಗರದಲ್ಲಿರುವ ಅಭಿನವ ಭಾರತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ೨೦೨೪-೨೫ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ರಾಜ್ಯದ ಟಾಪರ್‌ಗಳಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಶಾಲೆಯ ಕಾರ್ಯದರ್ಶಿ ಶಿವಮೂರ್ತಿ ಕೀಲಾರ ತಿಳಿಸಿದ್ದಾರೆ. ಶಾಲೆ ವಿದ್ಯಾರ್ಥಿನಿ ಚಂದ್ರಪ್ರಿಯ ೬೨೫ಕ್ಕೆ ೬೨೩ ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ರಾಜ್ಯಕ್ಕೆ ೩ನೇ ಸ್ಥಾನವನ್ನು ಪಡೆದಿದ್ದರೆ, ಗುಣಶ್ರೀ ೬೨೫ಕ್ಕೆ ೬೨೨ ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ ೪ನೇ ಸ್ಥಾನವನ್ನು ಪಡೆದು ಶಾಲೆಯ ಕೀರ್ತಿ ಪತಾಕೆಯನ್ನು ಮೆರೆದಿದ್ದಾರೆ ಎಂದು ಹೇಳಿದ್ದಾರೆ.