ಎಸ್ಸೆಸ್ಸೆಲ್ಸಿ ಪರೀಕ್ಷೆ: ನಾಗಮಂಗಲ ತಾಲೂಕಿಗೆ 3ನೇ ಸ್ಥಾನ

| Published : May 02 2025, 11:46 PM IST

ಸಾರಾಂಶ

ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಶ್ರೀ ಭಕ್ತನಾಥಸ್ವಾಮಿ ಪ್ರೌಢಶಾಲೆ ವಿದ್ಯಾರ್ಥಿನಿ ಜಿ.ಎಂ.ಹೇಮನಂದಿನಿ ಮತ್ತು ಶೀರಾಪಟ್ಟಣದ ವಿಸ್ಡಂ ಶಾಲೆ ವಿದ್ಯಾರ್ಥಿನಿ ಚಿರಸ್ಮಿತ 625ಕ್ಕೆ ತಲಾ 621 ಅಂಕಗಳಿಸುವ ಮೂಲಕ ತಾಲೂಕಿಗೆ ಪ್ರಥಮರಾಗಿ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕು ಜಿಲ್ಲೆಗೆ 3ನೇ ಸ್ಥಾನ ಪಡೆದು ಶೇ.69.21ರಷ್ಟು ಫಲಿತಾಂಶ ಬಂದಿದ್ದು, ತಾಲೂಕಿನ 53 ಪ್ರೌಢ ಶಾಲೆಗಳ ಪೈಕಿ ಯಾವೊಂದು ಶಾಲೆಯೂ ಶೇ.100ರಷ್ಟು ಫಲಿತಾಂಶ ಪಡೆದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್ ತಿಳಿಸಿದ್ದಾರೆ.

ತಾಲೂಕಿನ ಬಿ.ಜಿ.ನಗರದ ಶ್ರೀ ಭಕ್ತನಾಥಸ್ವಾಮಿ ಪ್ರೌಢಶಾಲೆ ವಿದ್ಯಾರ್ಥಿನಿ ಜಿ.ಎಂ.ಹೇಮನಂದಿನಿ ಮತ್ತು ಶೀರಾಪಟ್ಟಣದ ವಿಸ್ಡಂ ಶಾಲೆ ವಿದ್ಯಾರ್ಥಿನಿ ಚಿರಸ್ಮಿತ 625ಕ್ಕೆ ತಲಾ 621 ಅಂಕಗಳಿಸುವ ಮೂಲಕ ತಾಲೂಕಿಗೆ ಪ್ರಥಮರಾಗಿ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಬಿ.ಜಿ.ನಗರದ ಶ್ರೀ ಭಕ್ತನಾಥಸ್ವಾಮಿ ಪ್ರೌಢಶಾಲೆ ವಿದ್ಯಾರ್ಥಿನಿ ಕೆ.ಎಸ್.ಪೂರ್ವಿಕಾ 616 ದ್ವಿತೀಯ ಸ್ಥಾನ, ಎಂ.ಜಿ.ಧನ್ಯಶ್ರೀ 614 ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ತಾಲೂಕಿನ ಶೀರಾಪಟ್ಟಣದ ವಿಸ್ಡಂ ಶಾಲೆ ಬಿ.ಎಸ್.ರಚನಾ (611) ಪಟ್ಟಣದ ಎಲ್ಲೆನ್ ಶಾಲೆ ಡಿ.ಪ್ರೀತಮ್‌ಗೌಡ (609) ಬೆಳ್ಳೂರು ಕ್ರಾಸ್‌ನ ನವೋದಯ ಇಂಟರ್‌ನ್ಯಾಷನಲ್ ಶಾಲೆ ಕೆ.ತೇಜಸ್‌ಗೌಡ (609) ವಿಸ್ಡಂ ಶಾಲೆ ವಿ.ರಶ್ಮಿತಾ (609) ಪಟ್ಟಣದ ಎಲ್ಲೆನ್ ಶಾಲೆ ಎಚ್.ಡಿ.ಪ್ರಿಯಾಂಕ (608) ವಿಸ್ಡಂ ಶಾಲೆ ಸಿ.ಕೆ.ಮೋನಿಷಾ (607) ಅಂಕ ಗಳಿಸಿದ್ದಾರೆ.

ಪರೀಕ್ಷೆ ಬರೆದ 2222 ವಿದ್ಯಾರ್ಥಿಗಳ ಪೈಕಿ 1538 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು,ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಸಹಕರಿಸಿದ ಎಲ್ಲಾ ಶಾಲೆ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಪೋಷಕರನ್ನು ಬಿಇಓ ಯೋಗೇಶ್ ಅಭಿನಂದಿಸಿದ್ದಾರೆ.