ಸಾರಾಂಶ
ರಾಮನಗರ: ಕಳೆದ 11 ವರ್ಷಗಳಿಗೆ ಹೋಲಿಕೆ ಮಾಡಿದರೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಮನಗರ ಜಿಲ್ಲೆ 3ನೇ ಬಾರಿ ಎರಡಂಕಿ ದಾಟಿ ಕಳಪೆ ಸಾಧನೆ ಮಾಡಿದೆ.
ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಎರಡಂಕಿಯಿಂದ ಒಂದಂಕಿಯೊಳಗೆ ತರಲು ಶಾಲಾ ಶಿಕ್ಷಣ ಇಲಾಖೆ ಸಾಕಷ್ಟು ಶ್ರಮ ವಹಿಸಿತ್ತು. ಇದಕ್ಕಾಗಿ ಶಾಲೆಗಳಲ್ಲಿ 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೊಳಿಸಿತ್ತಲ್ಲದೆ, ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಮತ್ತು ಒತ್ತಡ ನಿವಾರಣೆಗೆ ವಿಶೇಷ ಒತ್ತು ಕೊಟ್ಟಿತ್ತು.2022-23ನೇ ಸಾಲಿನಲ್ಲಿ ಶೇ. 93.81ರಷ್ಟು ಫಲಿತಾಂಶದೊಂದಿಗೆ 12ನೇ ಸ್ಥಾನದಲ್ಲಿದ್ದ ರಾಮನಗರ ಜಿಲ್ಲೆಯು 2023-24ರಲ್ಲಿ ಶೇಕಡ 89.42ರಷ್ಟು ಫಲಿತಾಂಶ ಪಡೆದು 21ನೇ ಸ್ಥಾನಕ್ಕೆ ಕುಸಿಯಿತು. 2024ನೇ ಸಾಲಿನಲ್ಲಿ ಶೇಕಡ 71.16ರಷ್ಟು ಫಲಿತಾಂಶದೊಂದಿಗೆ 26ನೇ ಸ್ಥಾನಕ್ಕೆ ಕುಸಿತ ಕಂಡಿತು.
ಈ ಬಾರಿ (2025) ಶೇ.63.12ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ 24ನೇ ಸ್ಥಾನ ಪಡೆದುಕೊಂಡಿದೆ. ಇದು ಕಳೆದ 10 ವರ್ಷಗಳಲ್ಲಿ ದಾಖಲಾದ ಅತಿ ಕಡಿಮೆ ಫಲಿತಾಂಶದ ಸಾಲಿಗೆಯೇ ಸೇರಿದೆ. ಇದು ಸಹಜವಾಗಿಯೇ ಚರ್ಚೆಗೆ ಕಾರಣವಾಗಿದೆ. ಆದರೆ, ಇದೊಂದು ಗುಣಾತ್ಮಕ ಫಲಿತಾಂಶ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಮನಗರ ಜಿಲ್ಲೆಗೆ ಪರಿಪೂರ್ಣ ಫಲಿತಾಂಶ ತಂದುಕೊಡಲು ಶಾಲಾ ಶಿಕ್ಷಕರು ಹಾಗೂ ಸರ್ಕಾರಿ ನೌಕರರು ಸಾಕಷ್ಟು ಪರಿಶ್ರಮ ಪಟ್ಟಿದ್ದರು. ಆದರೆ, ವಿದ್ಯಾರ್ಥಿಗಳಲ್ಲಿನ ಉದಾಸೀನತೆ ಫಲಿತಾಂಶದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ಫಲಿತಾಂಶ ಸುಧಾರಣೆಗೆ ತರಲು ಶಿಕ್ಷಣ ಇಲಾಖೆಯೊಂದಿಗೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಕೈ ಜೋಡಿಸಿದರು. ಕಡಿಮೆ ಫಲಿತಾಂಶ ಪಡೆದಿದ್ದ ಶಾಲೆಗಳ ಬಗ್ಗೆ ವಿಶ್ಲೇಷಣೆ ಮಾಡಿ ಮಕ್ಕಳಿಗೆ ಪ್ರೇರಣೆಯಾಗುವ ಉದ್ದೇಶದಿಂದ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನಿಯೋಜನೆ ಮಾಡಿ ಸರ್ಕಾರಿ ಶಾಲೆಗಳನ್ನೇ ದತ್ತು ನೀಡಲಾಯಿತು.ಸಿಗದ ಯಶಸ್ಸು:
ಅಲ್ಲದೆ, ಜಿಪಂ ಹಾಗೂ ಟೊಯೋಟಾ ಕಂಪನಿ ಸಹಯೋಗದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿಯೇ ಪರಿಪೂರ್ಣ ಫಲಿತಾಂಶದೆಡೆ ನಮ್ಮ ನಡೆ ’ಯಶಸ್ಸು’ ಪ್ರಶ್ನೋತ್ತರ ಮಾಲಿಕೆ ಕೈ ಪಿಡಿ ಹೊರ ತಂದಿತು. ನಿರಂತರ ಪ್ರಯತ್ನದ ಫಲವಾಗಿ 2019ರಲ್ಲಿ ರಾಮನಗರ ಜಿಲ್ಲೆ 2ನೇ ಸ್ಥಾನ ಅಲಂಕರಿಸಿ ರಾಜ್ಯದ ಗಮನ ಸೆಳೆದಿತ್ತು. ಇದೇ ಪ್ರಯತ್ನ ಮುಂದುವರೆಸಿದಾಗ 2019-20ರಲ್ಲಿ 8ನೇ ಸ್ಥಾನ, 2021-22ರಲ್ಲಿ ಎ ಗ್ರೇಡ್ ಪಡೆದರೆ, 2022-23ರಲ್ಲಿ ಎ ಗ್ರೇಡ್ ನೊಂದಿಗೆ 21ನೇ ಸ್ಥಾನಕ್ಕೆ ಕುಸಿಯಿತು. 2024ರಲ್ಲಿ 26ನೇ ಸ್ಥಾನದಲ್ಲಿದ್ದ ರಾಮನಗರ ಜಿಲ್ಲೆ 2015ರಲ್ಲಿ 24ನೇ ಸ್ಥಾನ ಅಲಂಕರಿಸಿದೆ.ಈ ವರ್ಷ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಾಜ್ಯದಲ್ಲಿ ಮೊದಲ ಸ್ಥಾನ ಪಡೆಯಬೇಕೆಂಬ ಉದ್ದೇಶದಿಂದ ಮಕ್ಕಳನ್ನು ಪರೀಕ್ಷೆಗೆ ತಯಾರುಗೊಳಿಸಲು ನಾನಾ ಕ್ರಮಗಳನ್ನು ಅನುಸರಿಸಿತು. ಆದರೆ, ಇಲಾಖೆಯ ಪ್ರಯತ್ನಕ್ಕೆ ನಿರೀಕ್ಷಿಸಿದಷ್ಟು ಯಶಸ್ಸು ಸಿಗಲಿಲ್ಲ. ಇದು ಸಹಜವಾಗಿಯೇ ಶಿಕ್ಷಣ ಇಲಾಖೆ ಅಧಿಕಾರಿ ವರ್ಗದಲ್ಲಿ ಬೇಸರ ಮೂಡಿಸಿದೆ.
ಬಾಕ್ಸ್ ...ಸಕ್ಸಸ್ ಆಗದ ವೇಕ್ ಆಪ್ ಕಾಲ್:
20 ಅಂಶಗಳ ಕಾರ್ಯಕ್ರಮದ ಪೈಕಿ ಪ್ರಮುಖವಾಗಿ ಡಿಸೆಂಬರ್ ಅಂತ್ಯದೊಳಗೆ ಎಲ್ಲ ಪಠ್ಯ ವಿಷಯಗಳ ಬೋಧನೆ ಪೂರ್ಣಗೊಳಿಸಲಾಗಿತ್ತು. ಪ್ರತಿ ದಿನ ಶಾಲೆ/ಕಾಲೇಜು ಅವಧಿಯ ಮೊದಲು ಮತ್ತು ನಂತರ ಒಂದು ವಿಷಯಕ್ಕೆ ವಿಶೇಷ ತರಗತಿ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು ಓದಿನಲ್ಲಿ ತೊಡಗುತ್ತಿರುವುದನ್ನು ಪರಿಶೀಲಿಸಲು ಪ್ರತಿ ದಿನ ಮುಂಜಾನೆ ಮತ್ತು ಸಂಜೆ ಶಿಕ್ಷಕರು ''''''''ವೇಕ್ ಆಪ್ ಕಾಲ್'''''''' ಮಾಡುತ್ತಿದ್ದರು.ಕಲಿಕೆಯಲ್ಲಿ ಸರಾಸರಿ, ಸರಾಸರಿಗಿಂತ ಕಡಿಮೆ ಮತ್ತು ಸರಾಸರಿಗಿಂತ ಉತ್ತಮವಾಗಿರುವ ವಿದ್ಯಾ ರ್ಥಿಗಳ ಗುಂಪುಗಳನ್ನು ಪ್ರತ್ಯೇಕವಾಗಿ ರಚಿಸಿ ಪ್ರತಿ ಶಿಕ್ಷಕರಿಗೆ ಸಮನಾಗಿ ವಿದ್ಯಾರ್ಥಿಗಳನ್ನು ದತ್ತು ನೀಡಲಾಗಿತ್ತು. ಪ್ರತಿ 15 ದಿನಗಳಿಗೊಮ್ಮೆ ಪೋಷಕರ ಸಭೆ ನಡೆಸಿ ಮಕ್ಕಳ ಕಲಿಕಾ ಪ್ರಗತಿಯನ್ನು ಒಪ್ಪಿಸುವ ಕಾರ್ಯವನ್ನು ಪ್ರೌಢ ಶಾಲಾ ಶಿಕ್ಷಕರು ಮತ್ತು ಪಿಯು ಕಾಲೇಜು ಉಪನ್ಯಾಸಕರು ಮಾಡುತ್ತಿದ್ದರು. ಇದ್ಯಾವುದರಿಂದಲು ಪ್ರಯೋಜನವಾಗಿಲ್ಲ.
ಬಾಕ್ಸ್ ..................ವರ್ಷಶೇಕಡವಾರು ಫಲಿತಾಂಶರಾಜ್ಯದಲ್ಲಿ ಎಷ್ಟನೇ ಸ್ಥಾನ
2014-15ಶೇ.80.02192015-16ಶೇ.82.1912
2016-17ಶೇ.78.55062017-18ಶೇ.80.7817
2018-19ಶೇ.88.49022019-20ಶೇ.87.0008
2020-21ಶೇ.100032021-22ಶೇ.90.28ಎ ಗ್ರೇಡ್
2022-23ಶೇ.89.90212023-24ಶೇ.71.1626
2024-25ಶೇ.63.1224-------------------------------------------------------------------------------