ಸಾರಾಂಶ
ವಿಜಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಿ ೨೦೨೪-೨೫ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ೬೨೫ ಅಂಕಗಳಿಗೆ ೬೨೫ ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವ ಉತ್ಸವ್ ಪಟೇಲ್‌ರನ್ನು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸರ್ಕಾರಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಕ್ಷೇಮಾಭಿವೃದ್ಧಿ ಸಂಘ ಹಾಸನ ಜಿಲ್ಲಾ ಘಟಕದ ವತಿಯಿಂದ ಶನಿವಾರ ಸನ್ಮಾನಿಸಿ ಗೌರವಿಸಿದರು. ನಮ್ಮ ಜಿಲ್ಲೆಯ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ನಮ್ಮ ಹೆಮ್ಮೆಯ ಸುಪುತ್ರ ಉತ್ಸವ್ ಪಟೇಲ್ ಇವರ ಮುಂದಿನ ಭವಿಷ್ಯ ಉಜ್ವಲದಿಂದ ಕೂಡಿರಲಿ ಎಂದು ಈ ವಿದ್ಯಾರ್ಥಿಯು ಎಲ್ಲ ವಿದ್ಯಾರ್ಥಿಗಳಿಗೆ ಆದರ್ಶ ರೂಪವಾಗಿ ಹೊರಹೊಮ್ಮಲೆಂದು ಹಾರೈಸಿದರು.
ಹಾಸನ: ನಗರದ ವಿಜಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಿ ೨೦೨೪-೨೫ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ೬೨೫ ಅಂಕಗಳಿಗೆ ೬೨೫ ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವ ಉತ್ಸವ್ ಪಟೇಲ್‌ರನ್ನು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸರ್ಕಾರಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಕ್ಷೇಮಾಭಿವೃದ್ಧಿ ಸಂಘ ಹಾಸನ ಜಿಲ್ಲಾ ಘಟಕದ ವತಿಯಿಂದ ಶನಿವಾರ ಸನ್ಮಾನಿಸಿ ಗೌರವಿಸಿದರು.
ನಮ್ಮ ಜಿಲ್ಲೆಯ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ನಮ್ಮ ಹೆಮ್ಮೆಯ ಸುಪುತ್ರ ಉತ್ಸವ್ ಪಟೇಲ್ ಇವರ ಮುಂದಿನ ಭವಿಷ್ಯ ಉಜ್ವಲದಿಂದ ಕೂಡಿರಲಿ ಎಂದು ಈ ವಿದ್ಯಾರ್ಥಿಯು ಎಲ್ಲ ವಿದ್ಯಾರ್ಥಿಗಳಿಗೆ ಆದರ್ಶ ರೂಪವಾಗಿ ಹೊರಹೊಮ್ಮಲೆಂದು ಹಾರೈಸಿದರು.ಇದೇ ವೇಳೆ ಉತ್ಸವ್ ಪಟೇಲ್ ತಂದೆ ಹಾಗೂ ಖ್ಯಾತ ಉದ್ಯಮಿ ಹಾಗೂ ಸಮಾಜ ಸೇವಕರಾದ ದೇವರಾಯಪಟ್ಟಣದ ಡಿ.ಟಿ. ಪ್ರಕಾಶ್, ಜಿಲ್ಲಾಧ್ಯಕ್ಷರಾದ ರಾಜೇಂದ್ರ ದೊಡ್ಡಮಗ್ಗೆ, ಕಾರ್ಯಾಧ್ಯಕ್ಷರಾದ ಸೋಮ ನಾಯಕ್, ಪ್ರಧಾನ ಕಾರ್ಯದರ್ಶಿ ಲೋಕೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಬಿ.ವಿ. ನಾಗರಾಜ್, ಸಹ ಕಾರ್ಯದರ್ಶಿ ಕೆ.ಪಿ. ವೀರೇಶ್, ಸಾಂಸ್ಕೃತಿಕ ಕಾರ್ಯದರ್ಶಿ ಶಿವಕುಮಾರ್, ಹಾಸನ ತಾಲೂಕು ಪ್ರಧಾನ ಕಾರ್ಯದರ್ಶಿ ದೇವರಾಜ್, ಹಾಗೂ ಜಿಲ್ಲಾಧ್ಯಕ್ಷರ ಸುಪುತ್ರರಾದ ಗೋಕುಲ್ ಇತರರು ಉಪಸ್ಥಿತರಿದ್ದರು.